ಡಿ.15 ರಂದು ಸಾರ್ವಜನಿಕ ಆಲಿಕೆ ಸಭೆ

ಲೋಕದರ್ಶನ ವರದಿ

ಕಾರವಾರ 02: ನ್ಯೂಕ್ಲಿಯರ್ ಪವರ್ ಕಾಪರ್ೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ಪಿಸಿಐಎಲ್), ಕಂಪನಿಯವರು ಜಿಲ್ಲೆಯ ಕಾರವಾರ ತಾಲೂಕು, ಕೈಗಾದಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಕೈಗಾ ಪರಮಾಣು ವಿದ್ಯುತ್ಯೋಜನೆಯ ಪ್ರದೇಶದಲ್ಲಿ 2ಥ700 ಒಘ ಸಾಮಥ್ರ್ಯದ  (5 ಹಾಗೂ 6) ಹೆಚ್ಚುವರಿ ಪರಮಾಣು ವಿದ್ಯುತ್  ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಈ ಸಂಬಂಧ ಪರಿಸರ ಕುರಿತಾಗಿ ಸಾರ್ವಜನಿಕ ಆಲಿಕೆ ಸಭೆಯನ್ನು ಡಿಸೆಂಬರ 15 ರಂದು ಬೆಳಿಗ್ಗೆ 10 ಘಂಟೆಗೆ ಎನ್ಪಿಸಿಐಎಲ್ ಟೌನ್ಶಿಪ್ ಪ್ರದೇಶದಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

ಪ್ರಾದೇಶಿಕ ಕಛೇರಿ, ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಾರವಾರ ಇಲ್ಲಿ  ಯೋಜನೆಯ ಪರಿಸರ ಅಘಾತ ಅಧ್ಯಯನ ವರದಿ ಮತ್ತು ಕಾರ್ಯಕಾರಿ ಸಾರಾಂಶ (ಕನ್ನಡ ಮತ್ತು ಆಂಗ್ಲ) ಭಾಷೆಯಲ್ಲಿ  ಸಿ. ಡಿ. ಯೊಂದಿಗೆ ಲಭ್ಯವಿದ್ದು, ಸಾರ್ವಜನಿಕರು ಪರಾಮಶರ್ಿಸಬಹುದಾಗಿರುತ್ತದೆ ಎಂದು  ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಪರಿಸರ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*****