ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ಖಂಡಿಸಿ ಇಂದು ಪ್ರತಿಭಟನೆ

Protest today to condemn the derogatory statement about Ambedkar


ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ಖಂಡಿಸಿ ಇಂದು ಪ್ರತಿಭಟನೆ 

ಸವಣೂರ 22: ಭಾರತರತ್ನ,ವಿಶ್ವಮಾನವ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವರಾದ  ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿ ಸವಣೂರ ಬ್ಲಾಕ್ ಕಾಂಗ್ರೇಸ್ ವತಿಯಿಂದ ದಿ,23 ಸೋಮವಾರ ಬೆಳಿಗ್ಗೆ 11 ಘಂಟೆಗೆ ಪಟ್ಟಣದ ಭಾರತರತ್ನ ಬಾಬಾ ಸಾಹೇಬ ಅಂಬೇಡ್ಕರ ವೃತ್ತದಿಂದ ಪ್ರಾರಂಭಗೊಂಡು ತಹಸೀಲ್ದಾರ್ ಕಚೇರಿವರೆಗೆ ಬೃಹತ್ ಪ್ರತಿಭಟನೆ ಮಾಡಲಾಗುವುದು. 

ಜಿಲ್ಲಾಧ್ಯಕ್ಷರಾದ  ಸಂಜೀವಕುಮಾರ ನಿರಲಗಿ,ಶಾಸಕರಾದ ಯಾಶೀರಖಾನ್ ಪಠಾಣ,ಹೆಸ್ಕಾಂ ಅಧ್ಯಕ್ಷರಾದ ಎಸ್ ಎಸ್ ಖಾದ್ರಿ,ಗಡಿಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ಹಾಗೂ ಮುಖಂಡರು ಭಾಗವಹಿಸಲಿದ್ದಾರೆ.ತಾಲ್ಲೂಕಿನ ಪಕ್ಷದ ಮುಖಂಡರು,ಗ್ರಾಮ ಪಂಚಾಯತ್‌/ಪುರಸಭೆ ಹಾಲಿ/ಮಾಜಿ ಜನಪ್ರತಿನಿಧಿಗಳು,ಸರ್ಕಾರದ ನಾಮನಿರ್ದೇಶಿತ ಸದಸ್ಯರು,ವಿವಿಧ ಘಟಕಗಳ ಮುಖಂಡರು,ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸವಣೂರ ಬ್ಲಾಕ್ ಅಧ್ಯಕ್ಷರಾದ ಎಂ,ಜೆ,ಮುಲ್ಲಾ ಪ್ರಕಟಣೆಯಲ್ಲಿ ಕೋರಿದ್ದಾರೆ.