ಕಬ್ಬಿನ ದರ ನಿಗದಿಪಡಿಸುವರೆಗೆ ಕಾಖರ್ಾನೆಗಳನ್ನು ಪ್ರಾರಂಭಿಸದಂತೆ ಪ್ರತಿಭಟನೆ

ಹಾರೂಗೇರಿ,08: ಕಾಖರ್ಾನೆಯ ಮಾಲೀಕರು ರೈತರು ಬೆಳೆಸಿದ ಕಬ್ಬಿನ ದರ ನಿಗದಿಪಡಿಸುವವರೆಗೆ ಕಾಖರ್ಾನೆಗಳನ್ನು ಪ್ರಾರಂಭಿಸದಂತೆ ರಾಯಬಾಗ ಹಾಗೂ ಅಥಣಿ ತಾಲೂಕಿನ ರೈತ ಸಂಘಟನೆ ಉಗ್ರವಾಗಿ ಪ್ರತಿಭಟನೆಯನ್ನು ನಡೆಸಿ ಕಾಖರ್ಾನೆಯ ಮಾಲೀಕರಿಗೆ ದರ ನಿಗದಿಪಡಿಸಬೇಕು ಹಾಗೂ ಹಳೆ ಬಾಕಿ ಹಣ ನೀಡಬೇಕೆಂದು ಎಚ್ಚರಿಕೆ ನೀಡಿದರು. ನಾಳೆ ಶನಿವಾರ ರೈತರೊಂದಿಗೆ ಸಿಎಂ ಕುಮಾರಸ್ವಾಮಿ ಸಭೆ ಕರೆದ ಬಗ್ಗೆ ರೈತರು ಪೂರ್ವಭಾವಿ ಸಭೆಯನ್ನು ನಡೆಸಿದರು.


ರಾಯಬಾಗ ಮತ್ತು ಅಥಣಿ ತಾಲೂಕಿನ  ಭಾಗದ ರೈತ ಸಂಘಟನೆಯವರು ಪಕ್ಷಾತೀತವಾಗಿ ಗುರುವಾರ ನಡೆಸಿದ ಕಾಖರ್ಾನೆಯ ಮಾಲೀಕರಿಗೆ ಹಾಗೂ ವ್ಯವಸ್ಥಾಪಕರಿಗೆ ಕಬ್ಬಿನ ದರ ನಿಗದಿಪಡಿಸಬೇಕೆಂದು ಮನವಿ ನೀಡಿ ರೈತ ಸಂಘಟನೆಯವರು ರೈತ ಸಮಾವೇಶವನ್ನು ನಡೆಸಿದರು. ಸಕ್ಕರೆ ಕಾಖರ್ಾನೆಯ ಮಾಲೀಕರು 2018-19 ನೇ ಸಾಲಿನ ಕಬ್ಬಿನ ಪ್ರತಿ ಟನ್ಗೆ ರೂ. 3500ರಂತೆ ನಿಗದಿ ಪಡಿಸುವುದಾಗಿ ಈ ಹಿಂದೆ ರೈತರಿಗೆ ಮಾಲೀಕರು ಭರವಸೆಯನ್ನು ನೀಡಿದ್ದರು. ಕಳೆದ 2017-18 ನೇ ಸಾಲಿನ ಪ್ರತಿ ಟನಗೆ ಕನಿಷ್ಠ 2900 ರೂ. ಬೆಲೆ ಕೊಡಬೇಕು. ಈ ಬಾಕಿ ಹಣವನ್ನು ಕೊಡುವವರೆಗೂ ಕಬ್ಬಿನ ಕಾಖರ್ಾನೆಯನ್ನು ಮಾಲೀಕರು ಪ್ರಾರಂಭಿಸಬಾರದು. ಒಂದು ವೇಳೆ ಬಾಕಿ ಉಳಿದ ಹಣ ನೀಡದ ಹಾಗೆ ಕಾಖರ್ಾನೆ ಪ್ರಾರಂಭಿಸಿದರೆ ನಾವುಗಳು ಉಗ್ರವಾದ ಹೋರಾಟ ಮಾಡುವುದಾಗಿ ರೈತ ಸಂಘಟನೆಯವರು ಎಚ್ಚರಿಕೆಯನ್ನು ನೀಡಿ ಪ್ರತಿಭಟಿಸಿದರು.


ಮುಂಬರುವ ದಿನಗಳಲ್ಲಿ ಕಬ್ಬಿನ ಬೆಲೆ ನಿಗದಿ ಮಾಡದಿದ್ದರೆ ಪ್ರತಿಭಟನೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾದಲ್ಲಿ ಮತ್ತು ಯಾವುದೇ ಅಹಿತಕರ ಘಟನೆ ನಡೆದಲ್ಲಿ ಸಕ್ಕರೆ ಕಾಖರ್ಾನೆಯ ಮಾಲೀಕರೆ ನೇರ ಹೊಣೆಗಾರರಾಗುತ್ತಿರಿ ಎಂದು ಎಚ್ಚರಿಸಿದ್ದಾರೆ. ಒಂದು ವೇಳೆ ರೈತರು ರೊಚ್ಚಿಗೆದ್ದು ರಸ್ತೆ ತಡೆ ಮಾಡಿದಲ್ಲಿ ಘಟನೆ ನಡೆಯುವುದಕ್ಕಿಂತ ಮುಂಚೆ ಸಕ್ಕರೆ ಕಾಖರ್ಾನೆಯ ಮಾಲೀಕರು, ಸಕರ್ಾರ ರೈತರು ಬೆಳೆಸಿದ ಕಬ್ಬಿನ ಬೆಲೆಗೆ ಸೂಕ್ತವಾದ ದರ ನಿಗದಿ ಮಾಡಿ ರೈತರ ಸಮಸ್ಯೆಗೆ ಕೂಡಲೆ ಸ್ಪಂದಿಸುತ್ತಾರೆಯೋ ಕಾದು ನೋಡೋಣ.


ಬಾಕ್ಸ ನ್ಯೂಜ್: ಸಕ್ಕರೆ ಕಾಖರ್ಾನೆಯ ಮಾಲೀಕರು ರೈತರು ಬೆಳೆಸಿದ ಕಬ್ಬಿಗೆ ಸೂಕ್ತ ದರ ನೀಡದೆ 2018-19 ನೇ ಸಾಲಿನ ಕಬ್ಬು ನುರಿಸುವುದಕ್ಕೆ ಪ್ರಾರಂಭಿಸಿದ್ದಾರೆ. ರೈತರೊಂದಿಗೆ ಮುಕ್ತವಾಗಿ ಚಚರ್ೆ ನಡೆಸುವುದಕ್ಕೆ ಸಿಎಂ ಕುಮಾರಸ್ವಾಮಿಗಳು ನಾಳೆ ಶನಿವಾರ ನಾಡಿನ ವಿವಿಧ ರೈತ ಮುಖಂಡರನ್ನು ಕರೆದಿದ್ದಾರೆ. ಹೀಗಾಗಿ ರೈತರ ಸಮಸ್ಯೆಗಳ ಬಗ್ಗೆ ಸೂಕ್ತವಾಗಿ ಮಾತನಾಡಿ ತಕ್ಷಣ ಅದಕ್ಕೆ ಪರಿಹಾರವನ್ನು ನೀಡಬೇಕೆಂದು ನಾವುಗಳು ಸಿಎಂ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ರೈತರೊಂದಿಗೆ ಯಾವುದೇ ಮಲತಾಯಿಯ ಧೋರಣೆ ನಡೆಸಬಾರದೆಂದು ಕೇಳಿಕೊಳ್ಳುವುದಾಗಿ ಸಭೆಯಲ್ಲಿ ತಿಮರ್ಾನವನ್ನು ರೈತ ಮುಂಖಡರು ತೆಗೆದುಕೊಂಡರು. ಈ ವೇಳೆಯಲ್ಲಿ ಹೆಸ್ಕಾಂ ಇಲಾಖೆಯಿಂದ ಸಾಕಷ್ಟು ರೈತರು ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ್ದಾರೆ ಮತ್ತು ದನಕರಗಳು ಹಾಗೂ ವಿದ್ಯುತ್ ತಂತಿ ಹರಿದು ಸಾವಿರಾರು ಎಕರೆ ಕಬ್ಬಿನ ಬೆಳೆ ನಾಶವಾಗಿದ್ದು, ಇನ್ನೂವರೆಗೆ ಹೆಸ್ಕಾಂ ಇಲಾಖೆಯಿಂದ ಸೂಕ್ತ ಪರಿಹಾರ ದೊರತ್ತಿಲ್ಲ. ಅಧಿಕಾರಿಗಳಿಗೆ ಒಂದು ನ್ಯಾಯ ರೈತರಿಗೆ ಒಂದು ನ್ಯಾಯ ಹೀಗೆ ಸರಕಾರ ಮಾಡುತ್ತಿವೆ. ಈ ಬಗ್ಗೆ ತಕ್ಷಣ ಅವರುಗಳಿಗೆ ಪರಿಹಾರ ನೀಡಬೇಕೆಂದು ಮನವರಿಕೆ ಮಾಡಿಕೊಳ್ಳುವುದಾಗಿ ಸಭೆಯಲ್ಲಿ ತೀಮರ್ಾನಿಸಿದರು.

 

ಪ್ರತಿಭಟನೆಯಲ್ಲಿ ರಾಜ್ಯ ಕಿಸಾನ ಘಟಕ ಉಪಾಧ್ಯಕ್ಷ ದಸ್ತಗೀರ ಕಾಗವಾಡೆ, ಜಿಲ್ಲಾ ರೈತ ಜಾಗೃತಿ ಸಮೀತಿ ಅಧ್ಯಕ್ಷ ಪರಮೇಶ್ವರ ಮುಳ್ಳೂರು, ಭೀಮಾನಸಾಬ ರಾಜಾಪೂರೆ, ಬಾಬಾಸಾಬ ಕಾಗವಾಡೆ, ಎಸ್.ಎಸ್. ಮೇಟಿ, ಎಲ್.ಕೆ.ಒಡೆಯರ, ಎ.ಆರ್. ಹೀರೆಮಠ, ಅರವಿಂದ ದಳವಾಯಿ. ಟಿ.ಜಿ. ಪಾಟೀಲ, ರಾಜು ನಾಗಗೊಂಡ, ಸಿದ್ದು ದಳವಾಯಿ, ರಾಜೇಂದ್ರ ಗಣೇಶವಾಡಿ ಹಾಗೂ ರಾಯಬಾಗ ಅಥಣಿ ವಿಭಾಗದ ರೈತರು ಉಪಸ್ಥಿತರಿದ್ದರು.