ಸಾರಿಗೆ ಬಸ್ ದರ ಹೆಚ್ಚಳ ಜನ ವಿರೋಧಿ ನೀತಿ ಕೊಪ್ಪಳದಲ್ಲಿ ಪ್ರತಿಭಟನೆ

Protest in Koppal against the anti-people policy of bus fare hike

ಸಾರಿಗೆ ಬಸ್ ದರ ಹೆಚ್ಚಳ ಜನ ವಿರೋಧಿ ನೀತಿ ಕೊಪ್ಪಳದಲ್ಲಿ ಪ್ರತಿಭಟನೆ  

ಕೊಪ್ಪಳ  04:   ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸಾರಿಗೆ ದರಗಳು ಶೇಕಡ 15 ರಷ್ಟು ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಸಿಪಿಐ(ಎಂ) ಖಂಡಿಸುತ್ತದೆ ಮತ್ತು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿದೆ ಎಂದು ಕೊಪ್ಪಳ ಮುಖಂಡ ಸುಂಕಪ್ಪ ಗದಗ್ ತಿಳಿಸಿದರು, ಅವರು ಶನಿವಾರ ಬೆಳಗ್ಗೆ ನಗರದ ಸಾರಿಗೆ ಬಸ್ ನಿಲ್ದಾಣ ಎದುರುಗಡೆ ಪ್ರತಿಭಟನೆ ನಡೆಸಿ ಮಾತನಾಡಿ ಹೇಳಿಕೆ ನೀಡಿದರು.ಡೀಸೆಲ್ ದರಗಳ ಹೆಚ್ಚಳ ಮತ್ತು ಸಿಬ್ಬಂದಿ ವೆಚ್ಚ ಹೆಚ್ಚಳದ ನೆಪದಲ್ಲಿ ದರ ಏರಿಕೆ ಮಾಡಿರುವುದು ಅಪ್ರಜಾಸತ್ತಾತ್ಮಕ ಮತ್ತು ಆವೈಜ್ಞಾನಿಕವಾಗಿದೆ. ಮೇಲಾಗಿ ಸಾಮಾನ್ಯಜನರವಿರೋಧಿಯಾಗಿದೆ.ಡೀಸಲ್ ಹೆಚ್ಚಳವಾಗಿದೆ ಎನ್ನುವ ಸರ್ಕಾರ. ಡೀಸೆಲ್ ದರ ಇಳಿದಾಗ ದರಗಳನ್ನು ಎಂದಾದರೂ ಕಡಿಮೆ ಮಾಡಿದೆಯೇ? ಅದಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಸಾರಿಗೆಯ ಡೀಸೆಲ್ ದರಗಳನ್ನು ಕಡಿಮೆ ಇಡಬೇಕಾದ್ದು ಸರಕಾರದ ಜವಾಬ್ದಾರಿಯಾಗಿದೆ. ವಿಪರ್ಯಾಸವೆಂದರೆ ಸಾರಿಗೆ ನಿಗಮಗಳಿಗೆ ಪೂರೈಸುವ ಡೀಸೆಲ್ ದರವು ಮುಕ್ತ ಮಾರುಕಟ್ಟೆ ದರಗಳಿಗಿಂತ ದುಬಾರಿಯಾಗಿದೆ.  

ಸರಕಾರಕ್ಕೆ ನಿಜಕ್ಕೂ ವೆಚ್ಚವನ್ನು ಕಡಿಮೆ ಮಾಡಬೇಕೆಂದಿದ್ದರೆ ಸಾರಿಗೆ ನಿಗಮಗಳಿಗೆ ಪೂರೈಸುವ ಡೀಸೆಲ್ ದರವನ್ನು ಸಬ್ಸಿಡಿ ದರದಲ್ಲಿ ಪೂರೈಸಬೇಕು ಅಥವಾ ಮುಕ್ತ ಮಾರುಕಟ್ಟೆ ದರಗಳಲ್ಲಾದರೂ ಪೂರೈಸಬೇಕು. ಆದ್ದರಿಂದ ಶೇಕಡ 15 ರ ದರ ಹೆಚ್ಚಳಕ್ಕೆ ಡೀಸೆಲ್ ದರ ಹೆಚ್ಚಳ ಕಾರಣ ಎನ್ನುವುದು ಸುಳ್ಳು ನೆಪವಾಗಿದೆ. ಎಂದು ಸುಂಕಪ್ಪ ಗದಗ್ ಅಕ್ರೋಶ ವ್ಯಕ್ತಪಡಿಸಿ ಮಾತನಾಡಿದರು,ಸಿಬ್ಬಂದಿ ವೆಚ್ಚ ಹೆಚ್ಚಳವಾಗಿರುವುದು ಮತ್ತೊಂದು ಕಾರಣವೆನ್ನಲಾಗಿದೆ. ಈಗಾಗಲೇ ನಾಲ್ಕು ನಿಗಮಗಳಲ್ಲಿ ಸಿಬ್ಬಂದಿಗಳಿಗೆ ಸುಮಾರು 3 ವರ್ಷಗಳ ವೇತನ ಬಾಕಿ ನೀಡಬೇಕಿದೆ ಮತ್ತು ಹೊಸ ವೇಶನ ಒಪ್ಪಂದ ಮಾಡಬೇಕಿದೆ. 1950 ನ ಖಖಿಅ ಕಾಯ್ದೆ ಪ್ರಕಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ’ಸರ್ಕಾರ ಬಜೆಟ್ ಬೆಂಬಲ ನೀಡುವುದು ಅಗತ್ಯ ಏಕೆಂದರೆ ಸಾರ್ವಜನಿಕ ಹಿತ ದೃಷ್ಟಿಯಿಂದ ಒದಗಿಸುವ ಸಾರಿಗೆಯನ್ನು ಲಾಭ ನಷ್ಟದ ಲೆಕ್ಕದಲ್ಲಿ ನೋಡಬಾರದು. ನಷ್ಟ ಉಂಟಾದಲ್ಲಿ ಸರಕಾರ ಅದನ್ನು ಭರಿಸಬೇಕಾಗುತ್ತದೆ.  

ಸಾರ್ವಜನಿಕ ಸಾರಿಗೆಗಳು ಎಲ್ಲಾ ಸಂದರ್ಭಗಳಲ್ಲೂ ಲಾಭವನ್ನು ತರಲು ಆಗುವುದಿಲ್ಲ. ಸಾರಿಗೆ ನಿಗಮಗಳ ಅರ್ಧದಷ್ಟು ಮಾರ್ಗ ಕಾರ್ಯಾಚರಣೆಗಳು ಗ್ರಾಮಾಂತರದಲ್ಲಿ ಇರುವುದರಿಂದ ಸಹಜವಾಗಿಯೇ ನಷ್ಟ ಹೊಂದುತ್ತದೆ. ಜನರ ಹಿತದೃಷ್ಟಿಯಿಂದ ಸರಕಾರ ಅದನ್ನು ಭರಿಸಬೇಕು. ಅದರ ಬದಲಿಗೆ ಬೆಲೆ ಹೆಚ್ಚಳ ಮಾಡುವುದು ಜನವಿರೋಧಿ ಕ್ರಮವಾಗಿದೆ.ಸಾರಿಗೆ ನಿಗಮಗಳ ನಷ್ಟ ಕಡಿಮೆ ಮಾಡಲು ಸಾರ್ವಜನಿಕರ, ರಾಜಕೀಯ ಪಕ್ಷಗಳ ಸಲಹೆಗಳನ್ನು ಆಡಳಿತ ವರ್ಗ ಪಡೆಯಬಹುದು. ಆಡಳಿತಾತ್ಮಕ ವಿಧಾನಗಳಲ್ಲಿ ಸಾಕಷ್ಟು ನಷ್ಟ ಕಡಿಮೆ ಮಾಡಬಹುದು. ಪ್ರಯಾಣಿಕರ ಸಾಂಗೆ ದರ ಹೆಚ್ಚಳ ಉತ್ತಮ ಮಾರ್ಗವಲ್ಲ, ಎಲೆಕ್ನಿಕ್ ಬಸ್ಸುಗಳನ್ನು ನಿಗಮಗಳೇ ಕಾರ್ಯಾಚರಣೆಯನ್ನು ಮಾಡಿದರೆ ಸಾಕಷ್ಟು ಆದಾಯ ಹೆಚ್ಚುತದೆ. ಖಾಸಗಿ ಕಂಪನಿಗಳ ಜೊತೆ ದುಬಾರಿ ಒಪ್ಪಂದಗಳನ್ನು ಮಾಡಿಕೊಂಡು ನಿಗಮಗಳೇ ನಷ್ಟ ಉಂಟು ಮಾಡಿಕೊಳ್ಳುತ್ತಿವೆ. ನಿಗಮಗಳ ಬಸ್ಸುಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುವ ಮೂಲಕ ನಷ್ಟ ಕಡಿಮೆ ಮಾಡಬಹುದು. ಸರ್ಕಾರ ಈ ವಿಧಾನಗಳನ್ನು ಕೈ ಬಿಟ್ಟು ದರ ಹೆಚ್ಚಿಸುತ್ತಿರುವುದು ಜನವಿರೋಧಿಯಾಗಿದೆ.ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ನವಳುತ್ತಿರುವ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ರಾಜ್ಯ ಸರ್ಕಾರದ ದರ ಹೆಚ್ಚಳದ ತೀರ್ಮಾನವನ್ನು ವಾಪಸ್ ಪಡೆಯಬೇಕೆಂದು ಸಿಪಿಐ(ಎಂ) ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಲು ಕರೆ ನೀಡಿದೆ. ಎಂದು ಸುಂಕಪ್ಪ ಗದಗ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು ಸಂಘಟನೆಯ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು,