1000 ದಿನಕ್ಕೆ ತಲುಪಿದ ತಾಲೂಕಾ ಹೋರಾಟ: ಉಗ್ರ ಹೋರಾಟದ ಎಚ್ಚರಿಕೆ ರಸ್ತೆ ತಡೆ, ಅಂಗಡಿ ಮುಗ್ಗಟ್ಟು ಬಂದ, ಮಾನವ ಸರಪಳಿ ನಿರ್ಮಿಸಿ ಹೋರಾಟ

Taluka struggle reaches 1000 days: warning of violent struggle, road block, shops blocked, human ch

1000 ದಿನಕ್ಕೆ ತಲುಪಿದ ತಾಲೂಕಾ ಹೋರಾಟ: ಉಗ್ರ ಹೋರಾಟದ ಎಚ್ಚರಿಕೆ ರಸ್ತೆ ತಡೆ, ಅಂಗಡಿ ಮುಗ್ಗಟ್ಟು ಬಂದ, ಮಾನವ ಸರಪಳಿ ನಿರ್ಮಿಸಿ ಹೋರಾಟ 

ಮಹಾಲಿಂಗಪುರ 06: ನಗರದ ಸತತ 1000 ದಿನಗಳನ್ನು ಪೂರೈಸಿದ ತಾಲೂಕಾ ಹೋರಾಟ ಸಮೀತಿಯು ಇಂದು ಸ್ಥಳೀಯ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಪಾದಯಾತ್ರೆ ಮೂಲಕ ಡಬಲ್ ರಸ್ತೆ, ನಡುಚೌಕಿ, ಜವಳೀ ಬಜಾರ, ಗಾಂಧಿ ವೃತ್ತದ ಮೂಲಕ ರಾಣೀ ಚನ್ನಮ್ಮ ವೃತ್ತ ತಲುಪಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಸ್ವಲ್ಪ ಸಮಯ ಪ್ರತಿಭಟನೆ ನಡೆಸಿ, ರಸ್ತೆ ತಡೆ ನಡೆಸಿದರು.  

ತಾಲೂಕಾ ಹೋರಾಟ ಸಮೀತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿ ಮಹಾಲಿಂಗಪುರವನ್ನು ತಾಲೂಕಾಗಿ ಘೋಷನೆ ಮಾಡಬೇಕು ಎಂದು ಸಾರ್ವಜನಿಕರಿದಂದ ಸುಮಾರು 35 ವರ್ಷಗಳಿಂದ ಸರಕಾರಕ್ಕೆ ಬೇಡಿಕೆ ಸಲ್ಲಿಸುತ್ತಲೆ ಇದ್ದೇವೆ. ಅಲ್ಲದೆ ಸತತ 1 ಸಾವಿರ ದಿನಗಳಿಂದ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಲೆ ಇದ್ದೇವೆ ಆದರೆ ಯಾವುದೇ ಸರ್ಕಾರಗಳು ಬರೀ ಮಾತಿನಲ್ಲಿ ಹೇಳುತ್ತಲೆ ಇವೆ ಆದರೆ ಕೃತಿಯಲ್ಲಿ ಮಾತ್ರ ಏನು ಮಾಡುತ್ತಿಲ್ಲ, ಆದರಂತೆ ಜಿಲ್ಲಾಧಿಕಾರಿಗಳು ಕೂಡಾ ಒಂದು ಬಾರಿಯೂ ಸಹ ಹೋರಾಟ ಸ್ಥಳಕ್ಕೆ ಬಂದಿಲ್ಲ, ನಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿಲ್ಲ, ಇನ್ನಾದರು ಜಿಲ್ಲಾಧಿಕಾರಿಗಳು ಹೋರಾಟ ಸ್ಥಳಕ್ಕೆ ಬಂದು ನಮ್ಮ ತಾಲೂಕಿನ ಬಗ್ಗೆ ಸರ್ಕಾರ ಮಟ್ಟದಲ್ಲಿ ತಾವು ಯಾವ ಮಟ್ಟದಲ್ಲಿ ವರದಿ ಕಳಿಸಿದ್ದೀರಿ ಎಂದು ತಿಳಿಸಬೇಕು ಎಂದು ಒತ್ತಾಯಿಸಿದರು.  

ನಂತರ ಮಾತನಾಡಿದ ರೈತ ಮುಖಂಡ ಗಂಗಾಧರ ಮೇಟಿ ಮತ್ತು ರನ್ನಬೆಳಗಲಿಯ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ ಮಹಾಲಿಂಗಪುರವು ತಾಲೂಕಾಗಿ ಘೋಷಿಸಲು ಎಲ್ಲ ತರಹದ ಸೌಲಭ್ಯಗಳನ್ನು ಹೊಂದಿದೆ. ಆದರು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಇನ್ನೂ ವರೆಗೂ ತಾಲೂಕಾಗದೆ ಹಾಗೆ ಉಳಿದಿದೆ. ಆದರೆ ಇಷ್ಟು ದಿನ ಕಾದಿರುವ ನಾವುಗಳು ಇನ್ನು ಸುಮ್ಮನೆ ಇರುವುದಿಲ್ಲ, ಮಹಾಲಿಂಗಪುರದ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡಿ ರಸ್ತೆ ಸಂಚಾರ ತಡೆಗೋಳಿಸ ಉಗ್ರ ಹೋರಾಟ ಮಾಡಬೇಕಾದ ಅನಿವಾರ್ಯತೆಯನ್ನು ನಮ್ಮ ಸರ್ಕಾರವೆ ತಂದೊಡ್ಡಿದೆ, ಅಲ್ಲದೆ ಮುಂದೆ ಅಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೋಣೆಯಾಗಬೇಕಿದೆ ಎಂದರು.  

ಜಮಖಂಡಿ ಅಸಿಸ್ಟಂಟ ಕಮೀಷನರ ಶ್ವೇತಾ ಬೀಡಿಕರ ಮಾತನಾಡಿ ನಾವು ಮತ್ತು ತಸೀಲ್ದಾರ್ ಸೇರಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮಹಾಲಿಂಗಪುರ ತಾಲೂಕದ ಪ್ರಸ್ತಾವಣೆ ಕಳಿಸಿದ್ದೇವೆ, ಕಾರಣ ಚಿಕ್ಕ ಪುಟ್ಟ ಸಮಸ್ಯೆಗಳಿರುವುದರಿಂದ ಸ್ವಲ್ಪ ತಡವಾಗಿದೆ ಕಾರಣ ಸೋಮವಾರ ಸಂಜೆ ಜಿಲ್ಲಾಧಿಕಾರಿಗಳು ಈ ವಿಷಯವಾಗಿ ಮೀಟಿಂಗ ಕರೆದಿದ್ದಾರೆ.ಅವರೊಂದಿಗೆ ಎಲ್ಲತರಹದ ವಿಚಾರ ಮಾಡಿ ಬಹುಷ ಬುಧವಾರ ಅಥವಾ ಗುರುವಾರದೋಳಗೆ ಜಿಲ್ಲಾದಿಕಾರಿಗಳನ್ನು ಇಲ್ಲಿ ಕರೆದುಕೊಂಡು ಬಂದು ನಿಮ್ಮೊಂದಿಗೆ ಮಾತನಾಡಿಸುವ ಪ್ರಮಾಣಿಕ ಪ್ರಯತ್ನ ನಾನು ಮಾಡುತ್ತೇವೆ ಎಂದರು.  

ಎ.ಸಿ ಯವರ ಮಾತಿಗೆ ಬೆಲೆಕೊಂಡು ಪ್ರತಿಭಟನೆಯನ್ನು ಶುಕ್ರವಾರದ ತನಕ ತಡೆಹಿಡಿದ ಪ್ರತಿಭಟನಾಕಾರರು, ಮುರು ದಿನ ಕಾಯ್ದು ಜಿಲ್ಲಾಧಿಕಾರಿಗಳ ಬೇಟಿಯ ನಂತರ ಮುಂದಿನ ಪ್ರತಿಭಟನೆಯ ಸ್ವರೂಪವನ್ನು ತಿಳಿಸುವುದಾಗಿ ಹೇಳಿದರು. ಖ್ಯಾತ ವ್ಯೆದ್ಯರಾದ ಡಾ ಎ.ಆರ್ ಬೆಳಗಲಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಮುಖಂಡರಾದ ಮನೋಹರ ಶಿರೋಳ, ಹೋರಾಟಗಾರರಾದ ಚನಬಸು ಹುರಕಡ್ಲಿ,ಬಂದು ಪಕಾಲಿ, ಮಾರುತಿ ಕರೋಶಿ, ವಿರೇಶ ಆಸಂಗಿ, ಶಿವನಗೌಡ ಪಾಟೀಲ,ನಿಂಗಪ್ಪ ಬಾಳಿಕಾಯಿ,ಅರ್ಜುನ ಹಲಗಿಗೌಡರ ಮಾತನಾಡಿದರು. 

ಮುಖಂಡರಾದ ಶೇಖರ ಅಂಗಡಿ, ಪ್ರಲ್ಹಾದ ಸಣ್ಣಕ್ಕಿ,ಮಹಾದೇವ ಮೇಟಿ, ಮಲ್ಲಪ್ಪ ಸಿಂಗಾಡಿ, ಪರ​‍್ಪ ಸತ್ತಿಗೇರಿ, ಸಿದ್ದು ಬೆನ್ನೂರ, ಮುಸ್ತಾಕ ಚಿಕ್ಕೋಡಿ, ರಾಜು ಬಾವಿಕಟ್ಟಿ, ಮಹಮ್ಮದ ಹುಲಿಕಟ್ಟಿ, ಸಲೀಂ ಕರೋಶಿ, ದುಂಡಪ್ಪ ಜಾಧವ, ಸಿದ್ದು ಶಿರೋಳ, ಚನ್ನು ದೇಸಾಯಿ, ವಿಜಯ ಸಬಕಾಳೆ, ಸುಭಾಸ್ ಶಿರಬೂರ, ಮಹಾಲಿಂಗಪ್ಪ ಲಾತುರ, ವಿನೋದ ಸಿಂಪಿ, ಮಹಾದೇವ ಕಡಬಲ್ಲನ್ನವರ, ವೀರಬದ್ರ ಮುಗಲ್ಯಾಳ, ರಾಜು ತೇರದಾಳ, ಹರೀಶ ನಾಯಕ, ಪ್ರಭು ನಾವಿ, ಯಮನಪ್ಪ ಉಪ್ಪಾರ, ರಾಘು ಗರಗಟಗಿ, ಅರವಿಂದ್ ಮಾಲಬಸರಿ, ಶಂಕರ ಕೋಳಿಗುಡ್ಡ, ಬಸವರಾಜ ಶಿರೋಳ, ರಫೀಕ ಮಾಲದಾರ, ರಾಘವೇಂದ್ರ ಅಂಬಿ, ಚನ್ನಪ್ಪ ರಾಮೋಜಿ, ಮಲ್ಲಪ್ಪಾ ಮಿರ್ಜಿ ಮಹಾಲಿಂಗ ಹೂಗಾರ ಸೇರಿದಂತೆ ನೂರಾರು ಜನರು ಭಾಗಿಯಾಗಿದ್ದರು.