ಅಪೂರ್ಣವಿರುವ ಸಂಭಾಜಿ ಮೂರ್ತಿ ಉದ್ಘಾಟನೆ: ಕ್ರಮಕ್ಕೆ ಆಗ್ರಹಿಸಿ ಮನವಿ
ಬೆಳಗಾವಿ 06: ರಾಜಕೀಯ ಸ್ವಾರ್ಥಕ್ಕಾಗಿ ಯಾವುದೇ ಅನುಮತಿ ಇಲ್ಲದೆ ಸಂಭಾಜಿ ಮಹಾರಾಜರ ಮೂರ್ತಿ ಉದ್ಘಾಟನೆ ಮಾಡಿದ ಶಾಸಕ ಅಭಯ ಪಾಟೀಲ ಅವರ ವಿರುದ್ಧ ಕಠೋರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅನಗೋಳ ಗ್ರಾಮಸ್ಥರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಿಸಲಾಯಿತು.
ಮನವಿಯಲ್ಲಿ ಶನಿವಾರ ದಿ. 4ರಂದು ಭೇಟಿ ನೀಡಿ ಅನಗೋಳ ಧರ್ಮವೀರ ಸಂಭಾಜಿ ಚೌಕದಲ್ಲಿರುರಕದ ಕೆಲಸ ಅಪೂರ್ಣಗೊಂಡಿರುವುದನ್ನು ವೀಕ್ಷಿಸಿದ್ದೀರಿ. ಕೆಲಸ ಪೂರ್ಣಗೊಂಡ ಮೇಲೆ ಗ್ರಾಮದ ಎಲ್ಲ ಮುಖ್ಯಸ್ಥರು, ನಾಗರಿಕರು ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳ ಸಭೆ ಹಮ್ಮಿಕೊಂಡು ಉದ್ಘಾಟನೆಯ ದಿನಾಂಕ ನಿರ್ಧರಿಸಿ ನಂತರ ಮೂರ್ತಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು.
ಆದರೆ ಶಾಸಕ ಅಭಯ ಪಾಟೀಲ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಜಿಲ್ಲಾಧಿಕಾರಿಗಳ ಆಏಶವನ್ನು ಧಿಕ್ಕರಿಸಿ ಮಹಾನಗರ ಪಾಲಿಕೆ ಅಧಿಕಾರಿಗಳ ನಿಬಂರ್ಧಗಳನ್ನು ಉಲ್ಲಂಘಿಸಿ ಅಲ್ಲದೆ ಗ್ರಾಮಸ್ಥರನ್ನು ಹೊರತು ಪಡಿಸಿ ತಮ್ಮ ಜನರನ್ನು ಸೇರಿಸಿಕೊಂಡು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ಮತ್ತು ಸಂಭಾಜಿ ಭಕ್ತರಿಗೆ ನೋವನ್ನುಂಟು ಮಾಡಿದ್ದಾರೆ. ಆದ್ದರಿಂದ ತಮ್ಮ ಆದೇಶವನ್ನು ಉಲ್ಲಂಘಸಿ ಕಾರ್ಯಕ್ರಮ ಮಾಡಿದ್ದಕ್ಕಾಗಿ ಕಠೋರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.