ರಾಜ್ಯ ಸರ್ಕಾರ ವಿರುದ್ಧ ಪಂಚಮಸಾಲಿ ಸಮಾಜ ದಿಂದ ಪ್ರತಿಭಟನೆ

Protest by Panchmasali Samaj against the state government

ರಾಜ್ಯ ಸರ್ಕಾರ ವಿರುದ್ಧ ಪಂಚಮಸಾಲಿ ಸಮಾಜ ದಿಂದ ಪ್ರತಿಭಟನೆ  

ಹೂವಿನಹಡಗಲಿ 14: ಪಂಚಮಸಾಲಿ ಸಮುದಾಯಕ್ಕೆ ’2ಎ’ಮೀಸಲಾತಿಗಾಗಿ ಆಗ್ರಹಿಸಿ ಬೆಳಗಾವಿಯಲ್ಲಿ ಹೋರಾಟದಲ್ಲಿ ತೊಡಗಿದ್ದವರ ಮೇಲೆ ಲಾಠಿ ಚಾರ್ಜ್‌ ನಡೆಸಿದ್ದನ್ನು ಖಂಡಿಸಿ ವೀರಶ್ಯೆವ ಲಿಂಗಾಯತ್ ಪಂಚಮಸಾಲಿ ತಾಲೂಕು ಘಟಕದಿಂದ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.ಶಾಸ್ತ್ರಿ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನೆ  ನಡೆಸಿದ ನಂತರ ತಹಶಿಲ್ದಾರಗೆ ಮನವಿ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ .ರಾಜ್ಯ ಸರ್ಕಾರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪಂಚಮಸಾಲಿ ಮುಂಖಡರಾದ ರಾಜೇಂದ್ರ ಪ್ರಸಾದ್‌. ಗಂಗಾಧರ. ಬಸವನಗೌಡ ಪಾಟೀಲ್‌. ಬಸವರಾಜ.ಇತರರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕು ಅದ್ಯಕ್ಷ ಕೆ.ಎಸ್‌.ಶಾಂತನಗೌಡ. ಹಕ್ಕಂಡಿ ಶಿವನಾಗಪ್ಪ. ಕೆ.ಪತ್ರೇಶ.ಮಲ್ಲಿಕಾರ್ಜುನ. ಹಣ್ಣಿ ಶಶಿಧರ.ಹಕ್ಕಂಡಿ ಮಹಾದೇವ. ಗಡ್ಡಿ ಬಸವರಾಜ್ ಸೇರಿದಂತೆ ತಾಲೂಕಿ ನಿಂದ ಸಾವಿರಾರು ಸಮಾಜದವರು  ಭಾಗವಹಿಸಿದ್ದರು.