ಮೋರ್ಚಾ ವತಿಯಿಂದ ವಿವಿಧ ನಿಗಮಗಳಿಗೆ ಸರ್ಕಾರಕಾರದಿಂದ ಅನುದಾನ ಬಿಡುಗಡೆಗೆ ಪ್ರತಿಭಟನೆ

Protest against the release of grants by the government to various corporations on behalf of the Mo

ಮೋರ್ಚಾ ವತಿಯಿಂದ ವಿವಿಧ ನಿಗಮಗಳಿಗೆ ಸರ್ಕಾರಕಾರದಿಂದ ಅನುದಾನ ಬಿಡುಗಡೆಗೆ ಪ್ರತಿಭಟನೆ  

ಹಾವೇರಿ 14: ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬಿಜೆಪಿ ಪಕ್ಷದ  ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ವಿವಿಧ ನಿಗಮಗಳಿಗೆ ಸರ್ಕಾರಕಾರದಿಂದ ಅನುದಾನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ಮಾಡಿ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. 

ಜಿಲ್ಲಾ ಓಬಿಸಿ ಅಧ್ಯಕ್ಷರಾದ ನೀಲಪ್ಪ ಚಾವಡಿ ಮಾತನಾಡಿ ಅಹಿಂದ ಹೆಸರಿನ ಮೇಲೆ ಅಧಿಕಾರಕ್ಕೆ ಬಂದಿರುವ ತಾವುಗಳು ಹಿಂದುಳಿದ ವರ್ಗಗಳ ಜನರ ಆರ್ಥಿಕ,ಓದ್ಯೋಗಿಕ, ಕೃಷಿ, ಮತ್ತು ಶಿಕ್ಷಣಕ್ಕಾಗಿ ನಿಗಮಗಳಿಗೆ ಹಣ ಬಿಡುಗಡೆ ಮಾಡದೇ ಇರುವುದು ಅತ್ಯಂತ ನೋವಿನ ಸಂಗತಿಯಾಗಿದೆ.ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ 1000 ಕೋಟಿಗೂ ಹೆಚ್ಚು ಅನುದಾನವನ್ನು ಅಭಿವೃದ್ದಿ ನಿಗಮಗಳಿಗೆ ಹಣ ಬಿಡುಗಡೆ ಮಾಡಿತ್ತು. ಆದರೆ ತಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 1600 ಕೋಟಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಕೊಡಲೇ ಅನುದಾನ ಬಿಡುಗೆ ಮಾಡುವಂತೆ ಒತ್ತಾಯಿಸುತ್ತೇವೆ ಎಂದರು.   

ರಾಜ್ಯ ಓಬಿಸಿ ಮೋರ್ಚಾ ಕಾರ್ಯದರ್ಶಿ ಸುಭಾಷ ಚವ್ಹಾಣ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲೆಮರೆ ಕಾಯಿಯಂತೆ ಇರುವ ಅತ್ಯಂತ ಹಿಂದುಳಿದ ಸಮುದಾಯಗಳು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಖ್ಯ ವಾಹಿನಿಗೆ ಇರಬೇಕೆಂದು ಪ್ರತ್ಯೇಕ ಅಭಿವೃದ್ದಿ ನಿಗಮಗಳನ್ನು ಬಿಜೆಪಿ ಸರ್ಕಾರ ಸ್ಥಾಪಿಸಿತು. ಕೂಡಲೇ ಎಲ್ಲಾ ನಿಗಮಗಳಿಗೆ ಹಣವನ್ನು ಮಂಜೂರಾತಿ ಮಾಡಬೇಕು ಎಂದರು.  

 ಮಾಜಿಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹಿಂದೂಳಿದ ವರ್ಗದ ನಾಯಕರಾಗಿ  ನಿಗಮದ ಹಣವನ್ನು ಗ್ಯಾರಂಟಿ ಯೋಜನೆಗೆ ಹಿಂಪಡಿದ್ದಿರಿ.ಈ ಹಿಂದ ಇದ್ದ ಬಿಜೆಪಿ ಸರ್ಕಾರದನ ವಿವಿದ ನಿಗಮದ ಯೋಜನೆಗಳಲ್ಲಿದ ಹಣವನ್ನು ಕೂಡ ಬಿಡುಗಡೆ ಮಾಡಿಲ್ಲ. ಕೂಡಲೇ ಎಲ್ಲಾ ನಿಗಮಕ್ಕೆ ಹಣ ಬಿಡುಗಡೆ ಮಾಡಬೇಕೆಂದು ಹೇಳಿದರು. 

   ಈ ಸಂದರ್ಭದಲ್ಲಿ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ,ನಂಜುಂಡೇಶ ಕಳ್ಳೇರ,ಡಾ. ಸಂತೋಷ ಆಲದಕಟ್ಟಿ,ವೆಂಕಟೇಶ ನಾರಾಯಣಿ,ಮಂಜುನಾಥ ಹುಲಗೂರ,ಪ್ರಭು ಹಿಟ್ನಳ್ಳಿ,ವಿಜಯಕುಮಾರ ಚಿನ್ನಿಕಟ್ಟಿ,ಶಿವಯೋಗಿ ಹುಲಿಕಂತಿಮಠ, ಗಜಾನನ ರಾಸಿನ್ಕರ, ಮಂಜುನಾಥ ಮಡಿವಾಳರ, ಪುಷ್ಪಾ ಚಕ್ರಸಾಲಿ, ಲಲಿತಾ ಗುಂಡೇನಹಳ್ಳಿ, ಚನ್ನಮ್ಮ ಬ್ಯಾಡಗಿ, ಭಾಗ್ಯಾಶ್ರೀ ಮೋರೆ, ನಾಗರಾಜ ಹರಿಗೋಲ, ಪರಮೇಶಪ್ಪ ಗೂಳಣ್ಣನವರ, ರುದ್ರೇಶ ಚಿನ್ನಣ್ಣನವರ,ಸಣ್ಣಪ್ಪ ಮಾಳಿ, ಗುರುರಾಜ ಗೊಲ್ಲರ, ಕುಬೇರ​‍್ಪ ಗಂಗಣ್ಣನವರ, ಹರೀಶ ಕಲಾಲ, ವೆಂಕಟೇಶ ಇಟಗಿ, ರಾಜು, ಮರಡೆಪ್ಪ, ಹೊನ್ನಪ್ಪ ಕೊಳ್ಳನವರ, ವಿನಾಯಕ ದೇಶಮಾನೆ, ಶಂಬು ಕಣವಿ, ಅಣ್ಣಪ್ಪ ಚಾಕಾಪೂರ, ಜಯಣ್ಣ ದೇಶಳ್ಳಿ ಮತ್ತು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.