ನೈತಿಕಸ್ಥೆರ್ಯ ಕುಗ್ಗಿಸುವ ಬೆಳವಣಿಗೆ ಖಂಡಿಸಿ ಪ್ರತಿಭಟನೆ

Protest against demoralizing development

ನೈತಿಕಸ್ಥೆರ್ಯ ಕುಗ್ಗಿಸುವ  ಬೆಳವಣಿಗೆ ಖಂಡಿಸಿ  ಪ್ರತಿಭಟನೆ

  ಹೂವಿನ ಹಡಗಲಿ   11:  ಪಟ್ಟಣದಲ್ಲಿ ನರೇಗಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮ ಪಂಚಾಯಿತಿ ನೌಕರರನ್ನು ಕೆಲವು ಮಾಧ್ಯಮಗಳು ತೇಜೋವಧೆ ಮಾಡಿವೆ ಎಂದು ಆರೋಪಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.ತಹಶೀಲ್ದಾರ್ ಕಚೇರಿ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಜಿ. ಸಂತೋಷಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೊಟ್ರಗೌಡ ಮಾತನಾಡಿ, ’ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಈ ಬಾರಿ ತಾಲ್ಲೂಕು ಪಂಚಾಯಿತಿ ಮತ್ತು ಹ್ಯಾರಡ ಗ್ರಾಮ ಪಂಚಾಯಿತಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ. ನರೇಗಾ ದಿನಾಚರಣೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ಇದನ್ನು ಸಂಭ್ರಮಿಸಲಾಗಿದೆ. ಪಟ್ಟಭದ್ರಾ ಹಿತಾಸಕ್ತಿಗಳ ಕುಮ್ಮಕ್ಕಿನಿಂದ ಕೆಲ ಮಾಧ್ಯಮಗಳು ನೈಜತೆ ಮರೆಮಾಚಿ, ನೌಕರರನ್ನು ಕೆಟ್ಟದ್ದಾಗಿ ಬಿಂಬಿಸಿವೆ. ಸಿಬ್ಬಂದಿಯ ನೈತಿಕಸ್ಥೆರ್ಯ ಕುಗ್ಗಿಸುವ ಇಂತಹ ಬೆಳವಣಿಗೆಗಳನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದು ಹೇಳಿದರು.ನೌಕರರ ಸಂಘದ ಪದಾಧಿಕಾರಿಗಳಾದ ಎಂ.ಪಿ.ಎಂ. ಅಶೋಕ, ಎನ್‌.ನಂಜುಂಡಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘ, ಗ್ರಾಮ ಪಂಚಾಯಿತಿ ನೌಕರರ ಸಂಘ, ಡಾಟಾ ಎಂಟ್ರಿ ಅಪರೇಟರ್ ಸಂಪದ ಭಾಗವಹಿಸಿದ್ದರು.