ಪ್ರವಾದಿ ಮಹಮ್ಮದರ ಆದರ್ಶ ಪಾಲಿಸಿ: ಡಾ.ಮಿನಹಾಜುದ್ದೀನ
ತಾಳಿಕೋಟಿ 31: ರಮಜಾನ್ ಹಬ್ಬದ ಪ್ರಯುಕ್ತ ಸೋಮವಾರ ಪಟ್ಟಣದ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಈದ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಸಾಮೂಹಿಕ ಪ್ರಾರ್ಥನೆಯ ನಂತರ ವಿದ್ವಾಂಸ ಡಾ. ಮಿನಹಾಜುದ್ದೀನ್ ಖಾಜಿ ಅವರು ತಮ್ಮ ಈದ್ ಪ್ರವಚನದಲ್ಲಿ ಪವಿತ್ರ ರಂಜಾನ್ ಮಾಸದಲ್ಲಿ ಮುಸ್ಲಿಂ ಬಾಂಧವರು ಒಂದು ತಿಂಗಳವರೆಗೆ ಆಚರಿಸಿದ ಉಪವಾಸ ವೃತಗಳಿಂದ ಗಳಿಸಿಕೊಂಡ ಶಾಂತಿ ಸಹನೆ ಹಾಗೂ ಪರೋಪಕಾರದ ಉದಾತ್ತ ಗುಣಗಳನ್ನು ಜೀವನದುದ್ದಕ್ಕೂ ಪಾಲಿಸಬೇಕು. ಸಮಾಜದಲ್ಲಿರುವ ಬಡ ನಿರ್ಗತಿಕ ಹಾಗು ದುರ್ಬಲ ಜನರ ಸಹಾಯಕ್ಕಾಗಿ ಮುಂದಾಗಬೇಕು, ಅವರ ಸೇವೆಯಿಂದ ಅಲ್ಲಾಹನ ಕೃಪೆಗೆ ಪಾತ್ರರಾಗಬೇಕು. ಸಮಾಜದಲ್ಲಿರುವ ಎಲ್ಲ ಧರ್ಮಿಯರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಶಾಂತಿ ಸಾಮರಸ್ಯದಿಂದ ಜೀವನ ನಡೆಸಬೇಕು ಎಂದರು. ಶಿಕ್ಷಣದಿಂದ ಮಾತ್ರ ಸಮಾಜದ ಸರ್ವಾಂಗೀಣ ಪ್ರಗತಿ ಸಾಧ್ಯ. ಪ್ರತಿಯೊಬ್ಬ ಮುಸ್ಲಿಮರು ತಮ್ಮ ಮಕ್ಕಳನ್ನು ಶಿಕ್ಷಣವಂತರಾಗಿ ಮಾಡಲು ಪ್ರಯತ್ನಿಸಬೇಕು, ಇದರಿಂದ ಸಮಾಜ ಅಭಿವೃದ್ಧಿ ಆಗುವುದರೊಂದಿಗೆ ದೇಶಕ್ಕೆ ಸತ್ಪ್ರಜೆಯನ್ನು ನೀಡಿದಂತಾಗುತ್ತದೆ. ಪ್ರವಾದಿ ಮೊಹಮ್ಮದರ ಆದರ್ಶ ಬದುಕು ನಮಗೆಲ್ಲರಿಗೂ ದಾರೀದೀಪವಾಗಿದೆ ಅದನ್ನು ಅನುದಿನವು ಅನುಸರಿಸಬೇಕು ಎಂದು ಹೇಳಿದರು. ಈದ್ ಸಾಮೂಹಿಕ ಪ್ರಾರ್ಥನೆಯ ನೇತೃತ್ವವನ್ನು ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ ವಹಿಸಿದ್ದರು. ಈದ್ಗಾ ಕಮೀಟಿ ಅಧ್ಯಕ್ಷ ಕೆ.ಎಂ.ಡೋಣಿ, ಉಪಾಧ್ಯಕ್ಷ ಅಬ್ದುಲ್ ರಜಾಕ್ ಮನಗೂಳಿ, ಕಾರ್ಯದರ್ಶಿ ಅಬ್ದುಲ್ ರೆಹಮಾನ ಎಕೀನ, ಜಾಮೀಯಾ ಮಸೀದಿ ಅಧ್ಯಕ್ಷ ಖಾಜಾ ಹುಸೇನ್ ಸಗರ, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮುಜಾಹೀದ ನಮಾಜಕಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಬೂಬ ಚೋರಗಸ್ತಿ,ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಚಾಂದಹುಸೇನ ಖಾಂಜಾದೆ, ಗಣ್ಯರಾದ ಗನಿಸಾಬ ಲಾಹೋರಿ, ಸೈಯದ್ ಫಸಿಯುದ್ದೀನ ಖಾಜಿ, ಅಲ್ಲಾಭಕ್ಷ ನಮಾಜಕಟ್ಟಿ, ಸಿಕಂದರ ವಠಾರ, ಎ.ಎಸ್. ನಮಾಜಕಟ್ಟಿ, ಅಬ್ದುಲ್ ಸತ್ತಾರ ಅವಟಿ,ರೋಶನ ಡೋಣಿ, ನಿರಂಜನಶಾ ಮಕಾಂದಾರ, ಇಬ್ರಾಹಿಂ ಮನ್ಸೂರ, ಎಸ್.ಎ.ನಾಲಬಂದ, ಎಂ.ಎ.ಮೇತ್ರಿ, ಮೆಹಬೂಬಶಾ ಮಕಾಂದಾರ, ಡಾ.ಎ.ಎ.ನಾಲಬಂದ, ಡಾ.ನಜೀರ ಅಹ್ಮದ್ ಕೋಳ್ಯಾಳ, ಹಸನಸಾಬ ಮನಗೂಳಿ ಮತ್ತಿತರರು ಇದ್ದರು.