ಮತದಾನಕ್ಕೆ 48 ಗಂಟೆಗಳ ಮುನ್ನ ಪ್ರಚಾರ ವಾಹನ ಪರವಾನಗಿ ಮುಕ್ತಾಯ: ದೀಪಾ

ಧಾರವಾಡ 17: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ಬರುವ ಏ. 23ರಂದು ನಡೆಯಲಿದೆ. ಕ್ಷೇತ್ರದ ಮತದಾರರಲ್ಲದವರು ಮತದಾನಕ್ಕೆ 48 ಗಂಟೆಗಳ ಪೂರ್ವದಲ್ಲಿ ಕ್ಷೇತ್ರದಿಂದ ಹೊರ ನಡೆಯಬೇಕು. 

     ಮತಗಟ್ಟೆಗಳಿಗೆ ಯಾರೂ ಕೂಡ ಮೊಬೈಲ್ ತೆಗೆದುಕೊಂಡು ಬರಕೂಡದು. ಮತಗಟ್ಟೆಗೆ 200 ಮೀಟರುಗಳ ಅಂತರದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯಥರ್ಿಗಳು ತಮ್ಮ ಟೆಂಟ್ ಹಾಕಿಕೊಳ್ಳಬಹುದು.ಎಲ್ಲ ಪ್ರಚಾರ ವಾಹನಗಳ ಪರವಾನಿಗೆ ಅವಧಿ ಏ.21 ರ ಸಂಜೆಗೆ ಮುಕ್ತಾಯವಾಗುತ್ತದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಅಭ್ಯಥರ್ಿಗಳು ಮತ್ತು ಅವರ ಏಜೆಂಟರುಗಳ ಸಭೆಯನ್ನುದ್ದೇಶಿಸಿ  ಜಿಲ್ಲಾಧಿಕಾರಿ ,ಚುನಾವಣಾಧಿಕಾರಿ ದೀಪಾ ಚೋಳನ್ ಹೇಳಿದರು.

ಮತದಾನದ ಮುನ್ನಾ ದಿನವಾದ ಏ.22 ಹಾಗೂ ಮತದಾನ ದಿನ ಏ.23 ರಂದು ಮುದ್ರಣ ಮಾಧ್ಯಮಗಳೂ ಸೇರಿದಂತೆ ಯಾವುದೇ ರೀತಿಯ ವಿದ್ಯುನ್ಮಾನ ಮಾಧ್ಯಮಗಳು, ಬಲ್ಕ್ ಎಸ್ ಎಂ ಎಸ್ ,ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಪ್ರಕಟಿಸಲು ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿಯ ಪೂವರ್ಾನುಮತಿ ಪಡೆಯುವದು ಕಡ್ಡಾಯವಾಗಿರುತ್ತದೆ. ನಿಗದಿತ ಅಜರ್ಿ ನಮೂನೆಯನ್ನು ಭತರ್ಿ ಮಾಡಿ ಜಾಹೀರಾತಿನ ಪ್ರತಿ ಲಗತ್ತಿಸಿ ಏ.20 ರೊಳಗಾಗಿ ಸಮಿತಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.

      ಮತದಾನ ಪೂರ್ವದ  ಅವಧಿಯಲ್ಲಿ ಯಾವುದೇ ಕಲ್ಯಾಣ ಮಂಟಪ, ಸಮುದಾಯ ಭವನ ,ಸಾರ್ವಜನಿಕ ಸ್ಥಳಗಳಲ್ಲಿ ಊಟ,ಉಪಹಾರ ಏರ್ಪಡಿಸಿದರೆ, ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ.  ಮತದಾನಕ್ಕೆ ಬರುವಾಗ ಭಾವಚಿತ್ರವುಳ್ಳ ಮತದಾರರ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗ ಸೂಚಿಸಿರುವ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಮತ ಚಲಾಯಿಸಬಹುದು.ನಂತರ ಅಭ್ಯಥರ್ಿ ಹಾಗೂ ಏಜೆಂಟ್ ರ ಬಳಕೆಗೆ ಒಂದು ವಾಹನಕ್ಕೆ ಮಾತ್ರ ಪರವಾನಗಿ ಇರುತ್ತದೆ ಎಂದರು.

    ಇವಿಎಂ ,ವಿವಿಪ್ಯಾಟ್ಗಳ ರ್ಯಾಂಡಮೈಸೇಷನ್ , ಚುನಾವಣಾ ಚಿಹ್ನೆಗಳನ್ನು ಅಪ್ಲೋಡ್ ಮಾಡುವಾಗ ಅಭ್ಯಥರ್ಿಗಳು ಅಥವಾ ಅವರ ಏಜೆಂಟ್ ರು ತಪ್ಪದೇ ಹಾಜರಿರಬೇಕು ಎಂದು ಕೋರಿದರು.

      ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕುರಿತ ವಿವರಗಳನ್ನು ಜಿಲ್ಲಾಧಿಕಾರಿಗಳು ರಾಜಕೀಯ ಪಕ್ಷಗಳಿಗೆ ಒದಗಿಸಿದರು.

       ಕೇಂದ್ರ ಚುನಾವಣಾ ಆಯೋಗದ ವೀಕ್ಷಕ ಭಾನುಪ್ರಕಾಶ ಏಟೂರು, ಅಪರ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಸೇರಿದಂತೆ, ವಿವಿಧ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.