ಗದಗ 03: ಗದಗ ಜಿಲ್ಲೆಯ ಕುತರ್ುಕೋಟಿ ಗ್ರಾಮದಲ್ಲಿ ನಿನ್ನೆ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಾಗೂ ಗ್ರಾಮ ಪಂಚಾಯತ ಇವರ ಸಹಯೋಗದಲ್ಲಿ ಬೀದಿ ನಾಟಕದ ಮೂಲಕ ಸ್ವಚ್ಛತೆ ಹಾಗೂ ಸರಕಾರದ ಯೋಜಗಳ ಕುರಿತು ಆಯೋಜಿಸಿದ ಕ್ಷೇತ್ರ ಪ್ರಚಾರ ಕಾರ್ಯಕ್ರಮವನ್ನು ಗ್ರಾಮದ ಗುರುಹಿರಿಯರು ಉದ್ಘಾಟಿಸಿದರು.
ಕೊತಬಾಳ ಬಸವ ಬಳಗ ಕಲಾತಂಡ ಹಾಗೂ ನವಲಗುಂದ ಜೈ ಭೀಮ ಗೀಗೀ ಬಳಗದವರು ಗ್ರಾಮದ ಸ್ವಚ್ಛತೆ ಹಾಗೂ ಸರಕಾರದ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರು, ಸಿಬ್ಬಂದಿಗಳು, ಹಾಗೂ ವಾತರ್ಾ ಮತ್ತು ಸಾ.ಸಂ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.