ಶ್ರೀ ಗುರು ಶ್ರಿಶ ವಿಠಲ ದಾಸರ ಆರಾಧನೆ ಮಹೋತ್ಸವನ್ನು ಕಾರ್ಯಕ್ರಮ
ಬಳ್ಳಾರಿ 01: ದಾಸ ಪರಂಪರೆಯಲ್ಲಿ ಬಹುದೊಡ್ಡ ಹೆಸರು ಮಾಡಿದ ಶ್ರೀಗುರು ಶ್ರೀಶವಿಠಲ ದಾಸರ ಆರಾಧನೆಯನ್ನು ನಗರದ ಗಾಂಧಿನಗರ ಬಡಾವಣೆಯ ದ್ವಾರಕಾ ನಿವಾಸದಲ್ಲಿ ಸೋಮವಾರ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಜಹಾಗಿರದಾರ್ ಕುಟುಂಬದವರ ನೇತೃತ್ವದಲ್ಲಿ ಪ್ರತಿ ವರ್ಷ ನೆರವೇರಿಸಲಾಗುತ್ತಿರುವ ಶ್ರೀಗುರು ಶ್ರಿಶವಿಠಲ ದಾಸರ ಆರಾಧನೆ ಮಹೋತ್ಸವನ್ನು ಆಚರಿಸಲಾಯಿತು. ಬೆಳಿಗ್ಗೆ ವಿಶೇಷ ಪೂಜೆ, ಅಲಂಕಾರ, ಮಹಾನೈವೇದ್ಯ, ದಾಸರ ತಂಬೂರಿಗೆ ವಿಶೇಷ ಪೂಜೆ, ಅಲಂಕಾರ, ಮಹಾ ಮಂಗಳಾರತಿ, ವಿವಿಧ ಪಂಡಿತರಿಂದ ವಿಶೇಷ ಉಪನ್ಯಾಸ ಸೇರಿದಂತೆ ವಿವಿಧ ಪೂಜೆಗಳು ನಡೆದವು. ನಂತರ ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ನೂರಾರು ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ದಾಸವಾಣಿ ಕಾರ್ಯಕ್ರಮ: ಶ್ರೀಗುರು ಶ್ರೀಶವಿಠಲ ದಾಸರ ಆರಾಧನೆ ಮಹೋತ್ಸವ ನಿಮಿತ್ತ ಸಂಜೆ ದಾಸ ವಾಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹುಬ್ಬಳ್ಳಿಯ ಕಲಾವಿದ ಶ್ರೀ ಸುಜಯಿಂದ್ರ ಕುಲಕರ್ಣಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅಂಜಿಕೆನ್ಯಾತಕಯ್ಯ, ಕರೆದರೆ ಬರ ಬಾರದೇ ಗುರುರಾಜನೇ, ಏಳುಬೆಟ್ಟದ ಮೇಲೆ, ಎದ್ದು ಬರುತಾರೆ ನೋಡೇ, ಯಾದವ್ ನಿ ಬಾ ಸೇರಿದಂತೆ ವಿವಿಧ ಗೀತೆಗಳನ್ನು ಪ್ರಸ್ತುತ ಪಡಿಸಿ ನೆರೆದ ಸಾವಿರಾರು ಪ್ರೇಕ್ಷಕರಿಂದ ಚಪ್ಪಳೆ ಗಿಟ್ಟಿಸಿಕೊಂಡರು. ಧಾರವಾಡದ ಶ್ರೀಹರಿ ದಿಗ್ಗಾವಿ ತಬಲಾ, ಮೋಹನ್ ಕುಲಕರ್ಣಿ ಹಾರ್ಮೋನಿಯಂ, ಅನಿಲ್ ಶಾಖಾಪುರ್ ತಾಳವಾದನ ಸಾಥ್ ನೀಡಿದರು. ಕಲಾವಿದರಾದ ಜಯತೀರ್ಥ ಜಹಗಿರ ದಾರ್ ಪ್ರಾಸ್ತಾವಿಕ ಮಾತನಾಡಿದರು. ವಿಭಾ ಕುಲಕರ್ಣಿ ಪ್ರಾರ್ಥಿಸಿದರು. ಟಿ.ಗುರುರಾಜ್ ಆಚಾರ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.