10ನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ ಕೆ.ಎಸ್‌.ಕೌಜಲಗಿ, ಸರೋಜಿನಿ ಕೌಜಲಗಿ, ಅವರಿಗೆ ಸನ್ಮಾನ

Prof. K.S. Koujalagi, Sarojini Koujalagi, felicitated as the President of the 10th Kannada Sahitya

10ನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ ಕೆ.ಎಸ್‌.ಕೌಜಲಗಿ, ಸರೋಜಿನಿ ಕೌಜಲಗಿ, ಅವರಿಗೆ ಸನ್ಮಾನ 

ಹುಬ್ಬಳ್ಳಿ, 27;  ಶಹರ ತಾಲೂಕು 10ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ನಿವೃತ್ ಪ್ರಾಧ್ಯಾಪಕ, ಖ್ಯಾತ ಭಾಷಣಕಾರರು, ಹಿರಿಯರಾದ ಪ್ರೊ ಕೆ.ಎಸ್‌.ಕೌಜಲಗಿ, ಸರೋಜಿನಿ ಕೌಜಲಗಿ, ಅವರಿಗೆ ಕನ್ನಡದ ಹೆಸರಾಂತ ಲೇಖಕಿ, ಸಾಹಿತಿ ಕೆ. ಶಾಂತಾ ಬಸವರಾಜ ಅವರು ಶಾಲು, ಮಾಹಾರಾಜ ಟೋಪಿ, ಮಾಲಾರೆ​‍್ಣ ಮಾಡಿ ಹುತ್ಪೂರ್ವಕವಾಗಿ ಆತ್ಮೀಯವಾಗಿ ಅಭಿನಂದಿಸಿದರು. ಶುಭ ಕೋರಿದರು. ಶರಣು ಕೆ.ಬಸವರಾಜ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಮುಂತಾದವರು ಇದ್ದರು. 

 ಸಾಹಿತಿ ಕೆ. ಶಾಂತಾ ಬಸವರಾಜ ಅವರು ಮಾತನಾಡಿ ಸಹೋದರ ಪ್ರೊ ಕೌಜಲಗಿ ಅವರು ಸರ್ವಾಧ್ಯಕ್ಷರಾಗಿದ್ದು ಕೇಳಿ ತುಂಬಾ ಸಂತೋಷವಾಗಿದೆ. ಪ್ರಾಧ್ಯಾಪಕರಾಗಿ ಅವರ ಸೇವೆ, ಸಾಧನೆ ಅಮೋಘವಾದದ್ದು. ಪ್ರೊ ಕೌಜಲಗಿ ಅವರು ಹೆಣ್ಣು ಮಕ್ಕಳ ತಂದೆ ಎಂದರೆ ತಪ್ಪಾಗಲಾರದು. ನಾನು ಬರೆದ ಎಲ್ಲ ಪುಸ್ತಕಗಳನ್ನು ತಿದ್ದಿ, ತೀಡಿ, ತಪ್ಪುಗಳನ್ನು ಸರಿಪಡಿಸಿ ನನ್ನ ಬರಹಕ್ಕೆ ಬೆನ್ನೆಲಬಾಗಿ ನಿಂತಿದ್ದಾರೆ. ನನಗೆ ಬರೆಯಲು ಧೈರ್ಯ ತುಂಬಿದವರು. ನಾನು ಬರೆದ ಪುಸ್ತಕಗಳನ್ನು ನೋಡಿ ನನಗೆ ಸ್ಪೂರ್ತಿ ನೀಡಿ ದಾರೀದೀಪವಾಗಿದ್ದಾರೆ. 

 ಪ್ರೊ ಕೌಜಲಗಿ ಅವರ ಆಶೀರ್ವಾದ ಸದಾ ನನ್ನ ಮೇಲಿದೆ. ಅಣ್ಣ-ತಂಗಿ ಸಂಬಂಧದಂತೆ ಅವರ ಮನೆ ತವರು ಮನೆಯಂತಾಗಿದೆ. ಅಣ್ಣ-ಅತ್ತಿಗೆ ಅವರನ್ನು ಸನ್ಮಾನಿಸುತ್ತಿದ್ದಾಗ ಹೃದಯ ತುಂಬಿ ಬಂತು. ಈ ಅವಕಾಶ ಒದಗಿ ಬಂದದ್ದು ನನ್ನ ಸೌಭಾಗ್ಯವೆಂದೆ ಭಾವಿಸುತ್ತೇನೆ ಎಂದರು.