ಗಣೇಶೋತ್ಸವ ಮಂಟಪ ದಿಂದ ವಧು ವರರ ಸಾರೋಟದ ಮೆರವಣಿಗೆ

Procession of bride and groom from Ganeshotsava mandapam

ಗಣೇಶೋತ್ಸವ ಮಂಟಪ ದಿಂದ ವಧು ವರರ ಸಾರೋಟದ ಮೆರವಣಿಗೆ  

ರಾಣೇಬೆನ್ನೂರ  27: ಮನುಷ್ಯ ಬದುಕಿನ ನಂತರ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡುವ ಮೂಲಕ ಸಮಾಜದ ಋಣ ತೀರಿಸಬೇಕು ಎಂದು ಶನೈಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯರು ಹೇಳಿದರು.  ಅವರು ನಗರದ ಹುಣಸಿಕಟ್ಟಿ ರಸ್ತೆಯಲ್ಲಿ  ಲೋಕಾರೆ​‍್ಣಗೊಂಡ ಜೇಸಿವಾಣಿ ಅರಮನೆ ಹಾಗೂ ಕಾಕಿ ಜನಸೇವಾ ಸಂಸ್ಥೆ ವತಿಯಿಂದ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ  ಮಾತನಾಡಿದರು. ಸಾಮೂಹಿಕ ಮದುವೆ ಭಾಗ್ಯವಂತರದು ಹೊರತು ಬಡವರದಲ್ಲ. ಅರಮನೆ ಮಾದರಿಯಲ್ಲಿ ಕಲ್ಯಾಣ ಮಂಟಪದಲ್ಲಿ ಮದುವೆ ನಿಜಕ್ಕೂ ಅದೃಷ್ಟ ನವ ದಂಪತಿಗಳು ಸಂಸ್ಕಾರದಲ್ಲಿ ರಾಜ ರಾಣಿ ಆಗಬೇಕು. ನವ ದಂಪತಿಗಳು ಆದರ್ಶ ಬದುಕು ಬಾಳಿದಲ್ಲಿ ಜೀವನ ಸಾರ್ಥಕವಾಗುತ್ತದೆ ಎಂದರು. ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯರು ಮಾತನಾಡಿ, ನವ ದಂಪತಿಗಳ ಬದುಕು ಉಜ್ವಲವಾಗಲಿದೆ. ಕಾಕಿ ಮನೆತನ ಸಮಾಜಮುಖಿ ಕಾರ್ಯ ಆದರ್ಶಪ್ರಾಯವಾಗಿದೆ. ಸಾಮೂಹಿಕ ವಿವಾಹಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕಲಿದೆ. ಈ ರೀತಿ ಸರ್ವ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುವುದು ಸಮಾಜದಲ್ಲಿ ಭಾವೈಕತೆಗೆ ಸಾಕ್ಷಿಯಾಗಿ ಸಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಮಾಡುವುದರ ಜೊತೆ ಸಂಘ ಸಂಸ್ಥೆಗಳು ಸಹಕಾರಿಯಾಗಬೇಕು ಆಗ ಮಾತ್ರ ಉತ್ತಮ ಕೆಲಸಗಳಿಗೆ ಹೆಚ್ಚಿನ ಪೋತ್ಸಾಹ ಸಿಗುತ್ತದೆ ಎಂದರು. ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ಮಾತನಾಡಿ, ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡಲು ಹಿರಿಯರು ಕಾರಣರಾಗಿದ್ದಾರೆ. ಅವರು ಮೊದಲಿನಿಂದ ಹಾಕಿಕೊಟ್ಟ ಮಾರ್ಗದಲ್ಲಿ ಸ್ವಲ್ಪಮಟ್ಟಿಗೆ ಸೇವೆ ಸಲ್ಲಿಸುತ್ತಿದ್ದೇನೆ. ನೂತನ ವಧು ವರರು ಯಶಸ್ಸಿಯಾಗಿ ಜೀವನ ನಡೆಸಿದಾಗ ಮಾತ್ರ ಇಂತಹ ಕಾರ್ಯಗಳಿಗೆ ಅರ್ಥ ಬರುತ್ತದೆ. ಗಂಡ ಹೆಂಡತಿ ಹೊಂದಾಣಿಕೆ ಜೀವನ ನಡೆಸಿ ಆರ್ಥಿಕಾಭಿವೃದ್ದಿ ಹೊಂದಿ ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣ ನೀಡಬೇಕು ಎಂದರು.  

ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ, ಕಾರ್ಯದರ್ಶಿ ರೂಪಾ ಕಾಕಿ, ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಉಪಾಧ್ಯಕ್ಷ ಶಿವಾನಂದ ಸಾಲಗೇರಿ, ಖಜಾಂಚಿ ಹನುಮಂತಪ್ಪ ಕಾಕಿ, ಕಾರ್ಯದರ್ಶಿ ಮಂಜುನಾಥ ಹೊಸಪೇಟೆ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ವರ್ತಕ ಎಮ್‌.ಎಸ್‌.ಅರಕೇರಿ, ಸಣ್ಣಹನುಮಂತಪ್ಪ ಕಾಕಿ, ಲಕ್ಷ್ಮಣ ಕನಕಿ, ವೆಂಕಟೇಶ ಕಾಕಿ, ಪ್ರಕಾಶ ಗಚ್ಚಿನಮಠ, ಶಿವಾನಂದ ಬಗಾದಿ, ಪ್ರಭುಲಿಂಗ ಹಲಗೇರಿ, ವೆಂಕಟೇಶ ಸಾಲಗೇರಿ, ಶಿವಶಂಕರ ಕೆ, ಗುಡದಯ್ಯ ಹಲಗೇರಿ, ನೀಲಕಂಠಪ್ಪ, ಕೊಟ್ರೇಶಪ್ಪ ಎಮ್ಮಿ, ನಿತ್ಯಾನಂದ ಕುಂದಪುರ, ಕೆ.ಸಿ.ನಾಗರಜ್ಜಿ, ಕೆ.ಎಸ್‌. ನಾಗರಾಜ್,  ಶಿವಾನಂದ ಬಗಾದಿ ಜಟ್ಟೆಪ್ಪ ಕರೇಗೌಡ್ರ, ಲಕ್ಷ್ಮಿ ಕಾಕಿ ಮತ್ತಿತರರು   ಇದ್ದರು. ಸಾಮೂಹಿಕ ವಿವಾಹದಲ್ಲಿ 11 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಕ್ಕೂ ಮುನ್ನಾದಿನ ನಗರದ ಯರೇಕುಪ್ಪಿ ರಸ್ತೆಯ ನೀಲಕಂಠೇಶ್ವರ ದೇವಸ್ಥಾನದ ಗಣೇಶೋತ್ಸವ ಮಂಟಪ ದಿಂದ ವಧು ವರರ ಸಾರೋಟದ ಮೆರವಣಿಗೆಗೆ ಶಾಸಕ ಪ್ರಕಾಶ ಕೋಳಿವಾಡ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಚಾಲನೆ ನೀಡಿದರು. ನಂತರ ಇಲ್ಲಿಂದ ಹೊರಟ ಮೆರವಣಿಗೆ ಹಳೇ ಪಿ.ಬಿ.ರಸ್ತೆ, ಕಾಕಿಗಲ್ಲಿ, ಕುರುಬಗೇರಿ ಕ್ರಾಸ್, ದುರ್ಗಾ ಸರ್ಕಲ್, ಎಮ್‌.ಜಿ.ರಸ್ತೆ, ಚಕ್ಕಿಮಿಕ್ಕಿ ಸರ್ಕಲ್, ಅಂಚೆ ವೃತ್ತ, ಪುನೀತರಾಜಕುಮಾರ ಸರ್ಕಲ್, ಮೇಡ್ಲೇರಿ ರಸ್ತೆ, ಗಂಗಾಜಲ ಚೌಡೇಶ್ವರಿ ದೇವಸ್ಥಾನ, ಪಂಪಾನಗರ, ಹುಣಿಸಿಕಟ್ಟಿ ರಸ್ತೆಯ ಮೂಲಕ ಜೆಸಿ ವಾಣಿ ಅರಮನೆ ತಲುಪಿತು.ರಾಣಿಬೆನ್ನೂರ: ನಗರದ ಹುಣಸಿಕಟ್ಟಿ ರಸ್ತೆಯ ಜೇಸಿವಾಣಿ ಅರಮನೆ ಕಲ್ಯಾಣ ಮಂಟಪದಲ್ಲಿ ಕಾಕಿ ಜನಸೇವಾ ಸಂಸ್ಥೆ ವತಿಯಿಂದ ಏರಿ​‍್ಡಸಲಾಗಿದ್ದ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಂಭ್ರಮದಿಂದ ಜರುಗಿತು.