ಲೋಕದರ್ಶನ ವರದಿ
ಬೆಳಗಾವಿ 29- ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಂದು ಯುವಕರು ಕಾಣುವುದೇ ಇಲ್ಲ. ನಿವೃತ್ತಿ ಹೊಂದಿದವರೇ ಕಾಣಸಿಗುತ್ತಾರೆ. ಇಂದಿನ ಪ್ರತಿಭೆಗೊಂಡು ಉಚಿತ ವೇದಿಕೆ ಕಾರ್ಯಕ್ರಮದಲ್ಲಿ ಐದು ವರ್ಷದ ಮಗುವಿನಿಂದ ಮುದುಕರವರೆಗೂ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ಸಂತೋಷವನುಂಟು ಮಾಡಿದೆ. ಯುವಕರಲ್ಲಿ ಸಾಂಸ್ಕೃತಿಕ ಚಟುವಟಿಕೆಗಳತ್ತ ಅಭಿರುಚಿ ಮೂಡಿಸುವುದು ಅತ್ಯವಶ್ಯವಾಗಿದೆ ಎಂದು ನಿವೃತ್ತ ಪ್ರಾಂಶುಪಾಲರಾದ ಪ್ರೊ. ಎಂ. ಎಸ್ ಇಂಚಲ ಇಂದಿಲ್ಲಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಹಾಗೂ ಕ್ರಿಯಾಶೀಲ ಬಳಗ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಪ್ರತಿಭೆಗೊಂದು ಉಚಿತ ವೇದಿಕೆ' ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ. ಎಂ. ಎಸ್. ಇಂಚಲ ಮೇಲಿನಂತೆ ಅಭಿಪ್ರಾಯ ಪಟ್ಟರು.
ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ ಡಾ. ಎಚ್. ಬಿ. ರಾಜಶೇಖರ ಅವರು ಮಾತನಾಡಿ ಪ್ರತಿಯೊಬ್ಬರಲ್ಲಿಯೂ ಒಂದಿಲ್ಲೊಂದು ಪ್ರತಿಭೆ ಹುದುಗಿಕೊಂಡಿರುತ್ತದೆ. ಇದು ಸಾಕಾರಗೊಳ್ಳಲು. ಇದ್ದ ಪ್ರತಿಭೆಯನ್ನು ಜನರೊಂದಿಗೆ ಹಂಚಿಕೊಳ್ಳಲು ವೇದಿಕೆನ್ನುವುದು ಅತ್ಯವಶ್ಯ ಆ ಕಾರ್ಯವನ್ನು ನಗರದ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಹಾಗೂ ಕ್ರಿಯಾಶೀಲ ಬಳಗ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಗುಂಡೇನಟ್ಟಿ ಮಧುಕರ ಹೊಸ, ಹೊಸ ಪ್ರತಿಭೆಗಳಿಗೆ ಅವಕಾಶಗಳನ್ನು ಒದಗಿಸಿ ಕೊಡುವುದೇ ಈ ವೇದಿಕೆ ಮುಖ್ಯ ಉದ್ದೇಶವಾಗಿದ್ದು. ಸಂಗೀತ, ಸಾಹಿತ್ಯ, ನೃತ್ಯ, ಚಿತ್ರಕಲೆ ಹೀಗೇ ಯಾವುದೇ ಕಲೆ ನಿಮ್ಮಲ್ಲಿದ್ದರೂ ಈ ವೇದಿಕೆಯಲ್ಲಿ ಭಾಗವಹಿಸಬೇಕು. ನೀವು ನಿಮ್ಮ ಕಲೆಯಲ್ಲಿ ಪರಿಣಿತಿ ಪಡೆದು ಹೆಸರು ಮಾಡಿದಲ್ಲಿ ಅದುವೇ ನೀವು ನಮಗೆ ಕೊಡುವ ಕೊಡುಗೆ. ಪ್ರತಿತಿಂಗಳೂ ಕೊನೆ ರವಿವಾರ ನಡೆಯುವ ಈ ಕಾರ್ಯಕ್ರಮದ ಸದುಪಯೋಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಪಡೆದುಕೊಳ್ಳುವಂತೆ ಕೇಳಿಕೊಂಡರು.
ಈ ವೇದಿಕೆಯನ್ನು ಶ್ರೀಪತಿ ದೇವ, ಶ್ರೀಮತಿ ವಿದ್ಯಾ ಜಾಗಿರದಾರ, ಸಂತೋಷ ನಾಯಕ, ಪರಶುರಾಮ ತೆಗ್ಗಿನಮನಿ, ವಿನಯ ಮಠಪತಿ, ಬಸವರಾಜ ಹಡಪದ, ಲಿಂಗರಾಜ ಶೆಟ್ಟಣ್ಣವರ, ಅದ್ವಿತಾ, ಶಿವರಾಜ ಕುಪಾಟಿ, ಐಶ್ವಯರ್ಾ ತುಬುಚಿ, ರೋಹಿಣಿ, ಫಕಿರಪ್ಪ ಕಿಲ್ಲೇದ, ರೋಹಿಣಿ ಹಣಬರಟ್ಟಿ, ಸೋಮನಾಥ ಮುಗಳಿ ಮುಂತಾದ ಪ್ರತಿಭೆಗಳು ಸ್ವರಚಿತ ಕವಿತಾ ವಾಚನ, ಶಾಸ್ತ್ರೀಯ ಸಂಗೀತ, ವಚನ, ಹಾಡು ಮುಂತಾದ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶನ ಮಾಡಿದರು. ಕೆ. ತಾನಾಜಿಯವರ ರಾಷ್ಟ್ರಭಕ್ತಿ ಕುರಿತಾದ ಸ್ವರಚಿತ ಕವನ, ಕು. ಪ್ರಿಯಾಂಕಾ, ಕು. ಅಪರ್ಿತಾ, ಶ್ರೀಪತಿ ದೇವ, ಹಾಡುಗಾರಿಕೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.
ವೇದಿಕೆ ಮೇಲೆ ಆರ್.ಬಿ. ಕಟ್ಟಿ ಉಪಸ್ಥಿತರಿದ್ದರು. ಕೆ. ಮಲ್ಲಿಕಾಜರ್ುನ ನಿರೂಪಿಸಿದರು. ಕೆ. ತಾನಜಿ ಸ್ವಾಗತಿಸಿದರು. ದುರುದುಂಡಯ್ಯ ಬಾವಿಮನಿ ವಂದಿಸಿದರು.