ಮಕ್ಕಳ ಸವಾಂರ್ಗೀಣ ಅಭಿವೃದ್ಧಿಗೆ ಶ್ರಮಿಸುವದರ ಜೊತೆಗೆ ಅಪೌಷ್ಟಿಕ ಮಕ್ಕಳ ಪುನಶ್ಚೇತನಕ್ಕೆ ಆಧ್ಯತೆ ನೀಡಿ
ಕಂಪ್ಲಿ 03: ಮಕ್ಕಳ ಸವಾಂರ್ಗೀಣ ಅಭಿವೃದ್ಧಿಗೆ ಶ್ರಮಿಸುವದರ ಜೊತೆಗೆ ಅಪೌಷ್ಟಿಕದಿಂದಿರುವ ಮಕ್ಕಳನ್ನು ಪುನಶ್ಚೇತನಕ್ಕೆ ಆಧ್ಯತೆ ನೀಡಲು ಮುಂದಾಗಬೇಕು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೊಸಂಬೆ ಹೇಳಿದರು.ಕ.ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಪಟ್ಟಣದ ತಹಶೀಲ್ದಾರ್ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳಿಗೆ "ಮಕ್ಕಳ ರಕ್ಷಣೆ ಮತ್ತು ಮಕ್ಕಳ ಹಕ್ಕುಗಳ ಕುರಿತು ಅರಿವು" ಕಾರ್ಯಕ್ರಮದಲ್ಲಿ ಮಾತನಾಡಿ, ಸಮಗ್ರ ಮಕ್ಕಳ ರಕ್ಷಣೆ ಮಾಡುವುದು ನಮ್ಮೇಲರ ಕರ್ತವ್ಯ ಮಕ್ಕಳ ಗ್ರಾಮಸಭೆಗಳು ಅತ್ಯಂತಪರಿಣಾಮಕಾರಿಯಾದಾಗ ಮಾತ್ರ ಅಲ್ಲಿನ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿದ್ದಲ್ಲಿ ನ್ಯಾಯಕೊಡಿಸಬಹುದು. ಗ್ರಾಮ, ಗ್ರಾಪಂ, ತಾಲೂಕು ಮಟ್ಟದ ಕಮಿಟಿಗಳು ಸಕಾಲ ಮತ್ತು ನಿಯಮಿತ ಸಮಯದಲ್ಲಿ ಪರಿಣಾಮಕಾರಿ ಸಭೆಗಳಾದಲ್ಲಿ ಮಕ್ಕಳ ಮೇಲಿನ ದೌರ್ಬಲ್ಯ, ಹಿಂಸೆ ಅಂತಹ ಪ್ರಕರಣಗಳಿಗೆ ಕಡಿವಾಣ ಹಾಕಬಹುದು. ಕಳೆದ ವರ್ಷ ಕಲ್ಯಾಣ ಕರ್ನಾಟಕದಿಂದ ಸುಮಾರು 60 ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ಈ ವರ್ಷದಲ್ಲಿ ಹೊರಳಿದ ಮಕ್ಕಳ ಅಂಕಿಸಂಖ್ಯೆ ಬರಬೇಕಾಗಿದೆ. ಮಕ್ಕಳ ದಾಖಲಾಗಿ ಅನುಸಾರ ಹಾಜರಾತಿ ಇರಬೇಕು. ರಾಜ್ಯದಲ್ಲಿ ಅಪೌಷ್ಟಿಕ ಮಕ್ಕಳ ಬಹಳಷ್ಟಿದೆ. ಆದ್ದರಿಂದ ಪ್ರತಿಯೊಬ್ಬರು ತಳಮಟ್ಟದಿಂದ ಬಾಲ್ಯ ವಿವಾಹ, ಬಾಲ್ಯ ಕಾರ್ಮಿಕ ಸೇರಿದಂತೆ ತಡೆಗಟ್ಟುವಲ್ಲಿ ಶ್ರಮಿಸಬೇಕು ಎಂದರು.ನಂತರ ತಹಶೀಲ್ದಾರ್ ಶಿವರಾಜ ಶಿವಪುರ ಮಾತನಾಡಿ, ಮಕ್ಕಳ ಸಂರಕ್ಷಣೆ ಜತೆಗೆ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ಮಕ್ಕಳಿಗೆ ನ್ಯಾಯಕೊಡಿಸಲು ಸಾಧ್ಯ ಎಂದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಳೆನಾಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಬಿ.ಇ.ಓ.ಸಿದ್ದಲಿಂಗಪ್ಪ ತಾಲೂಕು ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್, ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗದ ಮಾಜಿ ಸದಸ್ಯ ಹೆಚ್.ಸಿ.ರಾಘವೇಂದ್ರ ಸೇರಿದಂತೆ ಗ್ರಾ.ಪಂ.ಪಿಡಿಓಗಳು ವಿವಿಧಇಲಾಖೆ ಸಿಬ್ಬಂದಿಗಳು ಇದ್ದರುಹಾಸ್ಟಲ್‌ಗಳಲ್ಲಿ ಬೆಡ್, ವದಿಕೆ ಸಮಸ್ಯೆಗಳಿವೆ. ಗ್ರಾಪಂ ಮಟ್ಟದಲ್ಲಿ ಕೆಲಸಗಳು ಆಗುತ್ತಿಲ್ಲ. ಕೆಲ ಪಿಡಿಒಗಳು ಎರಡು ಕಡೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮತ್ತು ಬಹಳ ವರ್ಷದಿಂದ ಕಂಪ್ಲಿ ತಾಲೂಕಿನಲ್ಲೇ ಪಿಡಿಒಗಳು ಉಳಿದಿರುವುದರಿಂದ ಜನರ ಸಮಸ್ಯೆಗಳು ಆಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳ ನಡುವೆ ಜನರು ಬದುಕುವಂತಾಗಿದ್ದು, ಕೂಡಲೇ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಿ, ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ(ಜೆ.ಕಾರ್ತಿ) ತಾಲೂಕಾಧ್ಯಕ್ಷ ಸಿ.ಎ.ಚನ್ನಪ್ಪ ಮನವಿ ಮಾಡಿದರು.