ಅಟಲ್ ಸಮಾಧಿಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್, ಗಣ್ಯಾತಿಗಣ್ಯರ ಗೌರವ ನಮನ

ನವದೆಹಲಿ,25: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಹಿನ್ನಲೆಯಲ್ಲಿ ಇಂದಿನ ದಿನವನ್ನು ದೇಶಾದ್ಯಂತ ಉತ್ತಮ ಆಡಳಿತ ದಿನ ಎಂದು ಆಚರಿಸಲಾಗುತ್ತಿದೆ.  

ಅಜಾತಶತ್ರು, ಮಾಜಿ ಪ್ರಧಾನಿ ದಿ.ವಾಜಪೇಯಿ ಜನ್ಮದಿನದ ನಿಮಿತ್ತ ಪ್ರಧಾನಿ ಮೋದಿಯವರು ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಅಟಲ್ ಸಮಾಧಿಯ ಬಳಿ ತೆರಳಿ ನಮನ ಸಲ್ಲಿಸಿದರು.  

ರಾಷ್ಟ್ರಪತಿ ರಾಮನಾಥ ಕೋವಿಂದ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಬಿಜೆಪಿ ಹಿರಿಯರಾದ ಎಲ್.ಕೆ.ಆಡ್ವಾಣಿ, ರವಿ ಶಂಕರ್ ಪ್ರಸಾದ್, ಜೆಪಿ ನಡ್ಡಾ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜ್ ಮತ್ತಿತರರು ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿ ಸ್ಥಳಕ್ಕೆ ಆಗಮಿಸಿ ಸಮಾಧಿಗೆ ಗೌರವ ಸಲ್ಲಿಸಿದರು.  

ಇನ್ನು ತಮ್ಮ ಗುರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನ ಹಿನ್ನಲೆಯಲ್ಲಿ  ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, ಅಟಲ್ ಜೀ ಕನಸಿನ ಭಾರತ ನಿಮರ್ಾಣಕ್ಕೆ ನಾವು ಬದ್ಧ. ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದಿದ್ದಾರೆ. 

ಇದೇ ವೇಳೆ ವಾಜಪೇಯಿ ಜನ್ಮದಿನದಂದೇ 'ಸದೈವ ಅಟಲ್ ಸ್ಮಾರಕವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಹಾಗೂ ಪ್ರಧಾನಿ ಮೋದಿ ಸೇರಿ ಇಂದು ಲೋಕಾರ್ಪಣೆಗೊಳಿಸಿದ್ದಾರೆ. 

ಈ ಸ್ಮಾರಕವನ್ನು ಕೇಂದ್ರ ಲೋಕೋಪಯೋಗಿ ಇಲಾಖೆ 10.51 ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸುಮಾರು 1.5 ಎಕರೆ ಪ್ರದೇಶದಲ್ಲಿ ನಿಮರ್ಾಣ ಮಾಡಿದೆ. ಇದರ ವೆಚ್ಚವನ್ನು ಅಟಲ್ ಮೆಮೋರಿಯಲ್ ಟ್ರಸ್ಟ್ ಭರಿಸಿದೆ. 

ವಾಜಪೇಯಿ ಅವರು ಆ.16ರಂದು ನಿಧನರಾಗಿದ್ದಾರೆ. ಅವರ ಸ್ಮಾರಕ ಸದೈವ ಅಟಲ್ ನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ನಿಮರ್ಿಸಿದ್ದು ವಿಶೇಷವೆನಿಸಿದೆ.