ಪ್ರಾಥಮಿಕ ಶಾಲೆ ನೂತನ ಸಲಹಾ ಸಮಿತಿ ರಚನೆ
ಶಿಗ್ಗಾವಿ 22: ತಾಲೂಕಿನ ಮಮದಾಪೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನೂತನ ಸಲಹಾ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಈಶ್ವರ ಕಂಟೆಪ್ಪ ಲಮಾಣಿ ಹಾಗೂ ಉಪಾಧ್ಯಕ್ಷರಾಗಿ ಗೀತಾ ಪೀರ್ಪ ನಾಯಕ ಆಯ್ಕೆಯಾದರು.
ಬಳಿಕ ಮಾತನಾಡಿದ ಡಾ ಪೋಮಣ್ಣಾ ಲಮಾಣಿ ಶಾಲಾ ಅಭಿವೃದ್ಧಿಯ ಸಮರ್ಕ ಯೋಜನೆಗಳನ್ನು ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಬಗ್ಗೆ ಸಲಹಾ ಸಮಿತಿಯ ಮಾರ್ಗದರ್ಶನ ಪಡೆದು ಶಾಲೆ ಮುನ್ನಡೆಸುವ ಕಾರ್ಯ ಮಾಡಬೇಕು ಎಂದರು.
ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ಫಕ್ಕಿರೇಶ ಪೂಜಾರ ಮಾತನಾಡಿ ಸರ್ಕಾರ ಅನುದಾನದ ಜೊತೆಗೆ ಇತರೆ ಸಂಘ ಸಂಸ್ಥೆಗಳು ರಾಜಕೀಯ ಮುಖಂಡರ ಅನುದಾನ ಪಡೆದು ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರಣರಾಗಬೇಕು ಎಂದರು.
ಈ ಸಂದರ್ಭದಲ್ಲಿ ಕೃಷ್ಣಪ್ಪ ನಾಯಕ, ಹನುಮಂತಪ್ಪ ಕಾರ್ಬಾರಿ, ಗ್ರಾಮ ಪಂಚಾಯತಿ ಸದಸ್ಯರಾದ ಲಕ್ಷ್ಮಣ್ ಬೆಂಡಲ್ಗಟ್ಟಿ, ಗಂಗವ್ವ ಲಮಾಣಿ, ದೇವಪ್ಪ ಚವಾಣ, ಈರ್ಪ ಪೂಜಾರಿ, ಆನಂದ ಲಮಾಣಿ, ಕೃಷ್ಣಪ್ಪ ಲಮಾಣಿ, ಪತ್ರಕರ್ತ ಪುಟ್ಟಪ್ಪ ಲಮಾಣಿ, ವಸಂತ ನಾಯ್ಕ, ಶಿವಪ್ಪ ಚವ್ಹಾಣ, ಸಮಿತಿಯ ಸರ್ವ ಸದಸ್ಯರು ಹಾಗೂ ಸಿ ಆರ್ ಪಿ ಗಂಗಾಧರ್ ಹಸಬಿ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.