ಚಿಕನ್ ಗುನ್ಯಾ, ಡೆಂಗ್ಯು ಜ್ವರ ನಿಯಂತ್ರಣಕ್ಕೆ ಮುಂಜಾಗ್ರತಾ ಅಗತ್ಯ ಕ್ರಮ: ಡಾ.ಜಯಾನಂದ

ಜಿಲ್ಲಾ ಸವರ್ೇಕ್ಷಣಾಧಿಕಾರಿ ಡಾ.ಜಗದೀಶ ಪಾಟೀಲ, ಕೀಟರೋಗ ತಜ್ಞೆ ಡಾ.ಇಂದಿರಾ ಪಾಟೀಲ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾ


ಹಾವೇರಿ24: ಜುಲೈ ಮಾಹೆಯಲ್ಲಿ ಡೆಂಗ್ಯು ವಿರೋಧಿ ಮಾಸಾಚರಣೆ ಆಚರಿಸಲಾಗುತ್ತಿದ್ದು, ಡೆಂಗ್ಯು ಹಾಗೂ ಚಿಕನ್ಗುನ್ಯಾ ನಿಯಂತ್ರಣಕ್ಕೆ ಹಾವೇರಿ ಜಿಲ್ಲೆಯಾದ್ಯಂತ ಅಗತ್ಯ ಮುಂಜಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಾನಂದ ಅವರು ತಿಳಿಸಿದರು.

ನಗರದ ಜಿಲ್ಲಾ ವಾತರ್ಾ ಭವನದಲ್ಲಿ ಮಂಗಳವಾರ  ಜಿಲ್ಲೆಯಾದ್ಯಂತ ಡೆಂಗ್ಯು ನಿಯಂತ್ರಣ ಕುರಿತಾಗಿ ಜರುಗಿದ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,  ಕ್ಷೇತ್ರ ಆರೋಗ್ಯ ಸಿಬ್ಬಂದಿಗಳು ಆಶಾ ಕಾರ್ಯಕತರ್ೆಯರ ಮುಖಾಂತರ ಎಲ್ಲ ಗ್ರಾಮಗಳಲ್ಲಿ ಲಾವರ್ಾ ಸಮೀಕ್ಷೆ ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳ ನಿಮರ್ೂಲನೆ ಕಾರ್ಯ ಮತ್ತು ರಾಸಾಯನಿಕಗಳಾದ ಟೆಮಿಪಾಸ್ ಮುಂತಾದ ದ್ರಾವಣವನ್ನು ಉಪಯೋಗಿಸಿ ಲಾವರ್ಾ ನಾಶಪಡಿಸಲಾಗುತ್ತಿದೆ. ಈ ಕಾರ್ಯಕ್ಕೆ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾಡಳಿತದ ಸಂಪೂರ್ಣ ಸಹಕಾರದೊಂದಿಗೆ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಜಿಲ್ಲೆಯಲ್ಲಿ  ಜನವರಿ 2018 ರಿಂದ ಈವರೆಗೆ 96 ಡೆಂಗ್ಯು ಪ್ರಕರಣಗಳು ಪತ್ತೆಯಾಗಿದ್ದು,  ಹಾವೇರಿ ತಾಲೂಕಿನಲ್ಲಿ ಅತೀ ಹೆಚ್ಚು 42 ಪ್ರಕರಣಗಳು ಕಂಡುಬಂದಿವೆ.  ಬ್ಯಾಡಗಿ ತಾಲೂಕಿನಲ್ಲಿ ಒಂಭತ್ತು, ರಾಣೇಬೆನ್ನೂರು ಹಾಗೂ ಹಿರೇಕೆರೂರು ತಾಲೂಕಿನಲ್ಲಿ ತಲಾ 10 ಪ್ರಕರಣಗಳು, ಶಿಗ್ಗಾಂವ ತಾಲೂಕಿನಲ್ಲಿ ಆರು, ಸವಣೂರ ತಾಲೂಕಿನಲ್ಲಿ 11 ಹಾಗೂ ಹಾನಗಲ್ಲ ತಾಲೂಕಿನಲ್ಲಿ ಎಂಟು ಪ್ರಕರಣಗಳು ಪತ್ತೆಯಾಗಿದ್ದು ರೋಗಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.

ಜನವರಿ 2018 ರಿಂದ ಈವರೆಗೆ ಜಿಲ್ಲೆಯಲ್ಲಿ 382 ಚಿಕುನ್ಗುನ್ಯಾ ಪ್ರಕರಣಗಳು ಪತ್ತೆಯಾಗಿದ್ದು,  ಹಾವೇರಿ ತಾಲೂಕಿನಲ್ಲಿ ಅತೀ ಹೆಚ್ಚು 181 ಪ್ರಕರಣಗಳು ಪತ್ತೆಯಾಗಿದ್ದು,  ಬ್ಯಾಡಗಿ ತಾಲೂಕಿನಲ್ಲಿ 45, ರಾಣೇಬೆನ್ನೂರ ತಾಲೂಕಿನಲ್ಲಿ 34,  ಹಿರೇಕೆರೂರ ತಾಲೂಕಿನಲ್ಲಿ 43, ಶಿಗ್ಗಾಂವ ತಾಲೂಕಿನಲ್ಲಿ ಏಳು, ಶಿಗ್ಗಾಂವ ತಾಲೂಕಿನಲ್ಲಿ 38  ಹಾಗೂ ಹಾನಗಲ್ ತಾಲೂಕಿನಲ್ಲಿ 34 ಚಿಕುನ್ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿದರು.

ಅನಗತ್ಯ ನೀರು ಸಂಗ್ರಹವಾಗುವಂತ ಘನತಾಜ್ಯ ವಸ್ತುಗಳ ವಿಲೇವಾರಿ ಹಾಗೂ ಚರಂಡಿ ಸ್ವಚ್ಛಗೊಳಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಕೆರೆಗಳಲ್ಲಿ ಲಾವರ್ಾಹಾರಿ ಮೀನು ಮರಿಗಳಾದ ಗಪ್ಪಿ ಮತ್ತು ಗ್ಯಾಂಬೋಸಿಯಾ ಮರಿಗಳನ್ನು ಬಿಡಲಾಗುತ್ತಿದೆ. ಲಾವರ್ಾ ಸಮೀಕ್ಷೆಗೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಶಾ ಕಾರ್ಯಕತರ್ೆಯರು ಹಾಗೂ ಆರೋಗ್ಯ ಸಹಾಯಕರು ನೀರಿನ ಸಂಗ್ರಹದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ರೋಗಗಳು ಉಲ್ಬಣಗೊಳ್ಳುತ್ತವೆ ನೀರನ್ನು ಬಹಳದಿನ ಶೇಖರಣೆ ಮಾಡಬಾರದು ಎಂದು ಹೇಳಿದಾಗ, ಸಮಯಕ್ಕೆ ಸಾರಿಯಾಗಿ ನೀರು ಬಿಡುವುದಿಲ್ಲ ಹಾಗಾಗಿ ನೀರು ಸಂಗ್ರಹಿಸಿಟ್ಟುಕೊಳ್ಳಲಾಗುತ್ತದೆ. ನಿಗದಿತ ಸಮಯಕ್ಕೆ ನೀರು ಬೀಡಿ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ.

ಸೊಳ್ಳೆಗಳ ನಾಶಕ್ಕೆ ಅವಶ್ಯವಿರುವ ಸ್ಥಳೀಯ ಸಂಸ್ಥೆಗಳ ನೆರವಿನಿಂದ  ಒಳಾಂಗಣ ಮತ್ತು ಹೊರಾಂಗಣ ಧೂಮೀಕರಣ ಮಾಡಲಾಗುತ್ತಿದೆ.  ಖಾಯಿಲೆಗಳ ಹರಡುವಿಕೆ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳ ಮಾಹಿತಿ ಒಳಗೊಂಡ ಕರಪತ್ರಗಳು, ಪೋಸ್ಟರಗಳನ್ನು ಕ್ಷೇತ್ರ ಅರೋಗ್ಯ ಸಿಬ್ಬಂದಿಗಳ ಮುಖಾಂತರ ಮನೆ ಮನೆಗೆ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಜ್ವರ ಪ್ರಕರಣಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಜಿಲ್ಲಾ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗುವುದು. ಸಂಶಯಾಸ್ಪದ ಪ್ರಕರಣಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ತುತರ್ಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಡೆಂಗ್ಯು ಹಾಗೂ ಚಿಕುನ್ ಗುನ್ಯಾ ಪ್ರಕರಣಗಳು ಪತ್ತೆಯಾದಲ್ಲಿ ಹಾಗೂ ದೂರುಗಳ ಬಗ್ಗೆ 104 ಟೋಲ್ ಫ್ರೀ ಸಂಖ್ಯೆಗೆ  ಕರೆ ಮಾಡಬಹುದು. ಈ ಕಾಯಿಲೆಗಳ ತಡೆಗೆ ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರ ಸಹಕಾರ ಅತ್ಯಗ್ಯವಾಗಿದೆ ಎಂದು ಹೇಳಿದರು. .

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸುಹೀಲ್ ಹರವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಧಿಕ ಜನಸಂಖ್ಯೆ ಹಾಗೂ ನಗರಗಳ ಬೆಳವಣಿಗೆಯಿಂದ ರೋಗಗಳು ಉಲ್ಬಣವಾಗುತ್ತಿವೆ. ಡೆಂಗ್ಯು ಮತ್ತು ಚಿಕುನ್ ಗುನ್ಯಾ ಸೊಳ್ಳೆಗಳಿಂದ ಹರಡುತ್ತವೆ.  ಈ ರೋಗಗಳಿಗೆ ನಿಗಧಿತ ಚಿಕಿತ್ಸೆ ಇರುವುದಿಲ್ಲ. ಹಾಗಾಗಿ ಅಗತ್ಯಗುಣವಾಗಿ ಚಿಕಿತ್ಸೆ ನೀಡಲಾಗುವುದು. ಚಿಕ್ಕ ಮಕ್ಕಳಿಗೆ ವಯೋವೃದ್ಧರಲ್ಲಿ ರೋಗ ನಿರೋಧಶಕ್ತಿ ಕಡಿಮೆ ಇರುವುದರಿಂದ ಅವರಿಗೆ ಹೆಚ್ಚಾಗಿ ಬಾಧಿಸುತ್ತವೆ.  ಕಾರಣ ಎಲ್ಲರೂ ಉದ್ದ ತೋಳಿನ ಬಟ್ಟೆಗಳನ್ನು ಧರಿಸಬೇಕು, ಒಡೋಮಾಸ್, ಗುಡ್ನೈಟ್ನಂತ ಸೊಳ್ಳೆ ನಿರೋಧ ಬಳಸಬೇಕು ಹಾಗೂ ಸೊಳ್ಳೆ ಪರದೆಗಳನ್ನು ಬಳಸಿ ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸುವ ಮೂಲಕ  ವೈಯಕ್ತಿಕ ಆರೋಗ್ಯದ ಬಗ್ಗೆ ಗಮನಕೊಡಬೇಕು ಎಂದು ಹೇಳಿದರು.