ವಿಶೇಷ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪತ್ರಿಕಾ ವರದಿ

Press report on free health check-up camp for special children

ವಿಶೇಷ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪತ್ರಿಕಾ ವರದಿ 

ಬೆಳಗಾವ 10 : ವಿಶೇಷ ಚೇತನ ಮಕ್ಕಳ ಆರೈಕೆಯನ್ನು ಮಾಡುವದು ನಿಜಕ್ಕೂ ಪುಣ್ಯಕರ ವೆಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗ ಹೆಸರಾಂತ ಮಕ್ಕಳ ತಜ್ಞೆ ಹಾಗೂ ಮಕ್ಕಳ ಅಭಿವೃದ್ದಿ ಸಲಹಾಕಾರರಾದ ಡಾ. ಸೌಮ್ಯಾ ವೇರ್ಣೇಕರ ಮಾತನಾಡುತ್ತಿದ್ದರು. ಅವರು ಇಂದು ಕೆ.ಎಲ್‌.ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಸಮರ್ಥನಂ ಸಂಸ್ಥೆಯ ಸಹಯೋಗದಲ್ಲಿ ನಡೆದ ಮಕ್ಕಳ ಉಚಿತ  ಆರೊಗ್ಯ ತಪಾಸಣಾ ಶಿಬಿರದ ಅಂಗವಾಗಿ ಮಾತನಾಡುತ್ತಿದ್ದರು. ಇಂತಹ ಮಕ್ಕಳು ನಿಜಕ್ಕೂ ದೇವರ ರೂಪವಾಗಿದೆ. ಪ್ರತಿಯೊಂದು ಮಗುವು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ಅದು ಅದರ ಅಭಿವೃದ್ದಿ ದೃಷ್ಟಿಯಲ್ಲಿರಬಹುದು ಅಥವಾ ವರ್ತನೆಯ ರೀತಿಯಲ್ಲಿರಬಹುದು. ಇತ್ತೀಚಿನ ದಿನಗಳಲ್ಲಿ ತಾಯಿ ಮಗುವಿನ ಭಾಂದವ್ಯ ಬೆಸೆಯುವಲ್ಲಿ ಮೊಬೈಲ ಟಿವಿಗಳಂತಹ ಮಾಧ್ಯಮಗಳು ತನ್ನದೇ ಆದ ಪ್ರಬಾವ ಬೀರುತ್ತಲಿದೆ. ಇದರಿಂದ ಮಕ್ಕಳ ಆರೋಗ್ಯದಲ್ಲಿ ತಕ್ಕ ಮಟ್ಟದ ಏರುಪೇರುಗಳಾಗುವದುಂಟು ಆದ್ದರಿಂದ ಮಕ್ಕಳಿಗೆ ಮೊಬೈಲ ಮತ್ತು ಟಿವಿಗಳಂತಹವನ್ನು ಬಳಸುವದರಿಂದ ದೂರವಿಡಿ ಎಂದು ಕಿವಿ ಮಾತು ಹೇಳಿದರು.   

ವಿಶೇಷ ಚೇತನ ಮಕ್ಕಳಿಗೆ ಚಿಕ್ಕ ಮಕ್ಕಳ ವಿಭಾಗದ ವತಿಯಿಂದ ಮಕ್ಕಳ ಅಭಿವೃದ್ದಿ ಮತ್ತು ನಡುವಳಿಕೆ ಸಲಹೆಗಾರರಾದ ಡಾ. ಸೌಮ್ಯ ವರ್ನೇಕರ ಅವರಿಂದ  6 ರಿಂದ 19 ವರ್ಷದ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆಯನ್ನು  ಮಾಡಲಾಯಿತು. ಶಿಬಿರದಲ್ಲಿ  45 ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿ ಓಷಧಗಳನ್ನು ಉಚಿತವಾಗಿ ವಿತರಿಸಲಾಯಿತು ಮತ್ತು ಇಂತಹ ಮಕ್ಕಳ ಪೋಷಕರಿಗೆ ವಿಶೇಷ ಸಲಹೆ ಸೂಚನೆಗಳನ್ನು ನೀಡಲಾಯಿತು.  

ಇಂತಹ ಮಕ್ಕಳ ಆರೋಗ್ಯ ತಪಾಸಣೆಯಲ್ಲಿ ಮುತುವರ್ಜಿವಹಿಸಿದ ಡಾ. ಸೌಮ್ಯಾ ವೇರ್ನೆಕರ ಅವರನ್ನು ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ಎಮ್ ಎಸ್ ಕಡ್ಡಿ ಅವರು ಹಾಗೂ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಶ್ಲಾಘಿಸಿದ್ದಾರೆ.