ಬೆಳಗಾವಿ13: ಸ್ಥಳೀಯ ಸೆಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ 2ನೇ ತರಗತಿ ಓದುತ್ತಿರುವ ಗಾಯನಾ ಜ್ಯೋತಿಲರ್ಿಂಗ ಹೊನಕಟ್ಟಿ ಇವಳಿಗೆ ರಾಜ್ಯ ಮಟ್ಟದ ಬಾಲ ಪ್ರತಿಭೆ ಪ್ರಶಸ್ತಿ ಲಭಿಸಿದೆ. ಸಂಗೀತ ವಿಭಾಗದಲ್ಲಿ ಸಾಧನೆ ಮಾಡಿದ್ದಕ್ಕೆ ಈ ಪ್ರಶಸ್ತಿ ಸಂದಿದೆ.
ವಿಜಯಪುರದ ಅಮ್ಮನ ಮಡಿಲು ಚಾರಿಟೆಬಲ್ ಟ್ರಸ್ಟ್ ಕೊಡಮಾಡುವ ಶಂ.ಗು.ಬಿರಾದಾರ ಹಾಗೂ ಭಾಸ್ಕರಾಚಾರ್ಯ ಬಾಲ ಪ್ರತಿಭೆ ಪ್ರಶಸ್ತಿ ಇದಾಗಿದೆ.
ದಿ.14 ರಂದು ಈ ನಿಮಿತ್ತ ವಿಜಯಪುರ ಇಕ್ಸಲಂಟ್ ಪ.ಪೂ.ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಾಗುವುದು ಕಾತ್ರಾಳ ಗುರುದೇವ ಆಶ್ರಮದ ಶ್ರೀ ಅಮೃತಾನಂದ ಸ್ವಾಮೀಜಿ ಸಾನಿಧ್ಯ ವಹಿಸುವರು. ಪಾಲಿಕೆ ಆಯುಕ್ತ ಡಾ.ಜೀದ್ರಾಮ ಕಾರ್ಯಕ್ರಮ ಉದ್ಘಾಟಿಸುವರು. ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಟ್ರಸ್ಟ್ ಸಂಚಾಲಕ ಟಿ.ಎಲ್. ಅಂಬಿಗೇರ ತಿಳಿಸಿದ್ದಾರೆ. ಸಾಧಕ ವಿದ್ಯಾಥರ್ಿನಿ ಪೊಲೀಸ್ ಅಧಿಕಾರಿ ಹಾಗೂ ಜಾನಪದ ಕಲಾವಿದ ಜ್ಯೋತಿಲರ್ಿಂಗ ಹೊನಕಟ್ಟಿ ಇವರ ಸುಪುತ್ರಿಯಾಗಿದ್ದಾಳೆ.