ಶಾಂತಿಯುತ ಮತದಾನಕ್ಕಾಗಿ ಸಿದ್ಧತೆ ಮಾಡಲಾಗಿದೆ: ಪ್ರೀತಿ

ಕುಮಟಾ 21: ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ 1,88,288 ಮತದಾರರಿದ್ದು, ಒಟ್ಟೂ 215 ಮತಗಟ್ಟೆಗಳಿದೆ. ಏ.23 ರಂದು ನಮ್ಮ ಕ್ಷೇತ್ರದಲ್ಲಿ ನಡೆಯುವ ಚುನಾವಣೆಗಾಗಿ ಶಾಂತಿಯುತ ಮತದಾನಕ್ಕಾಗಿ ಎಲ್ಲ ಬಗೆಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ ತಿಳಿಸಿದರು. 

ಅವರು ರವಿವಾರ ಪತ್ರಕರ್ತರೊಂದಿಗೆ ಮಾತನಾಡಿ, ಕುಮಟಾ ತಾಲೂಕಿನಲ್ಲಿ 151 ಹಾಗೂ 64 ಹೊನ್ನಾವರ ತಾಲೂಕಿನಲ್ಲಿ ಮತಗಟ್ಟೆಗಳಿವೆ. 91, 600 ಪುರುಷ ಮತದಾರರು, 90,673 ಮಹಿಳಾ ಮತದಾರರು ಹಾಗೂ 2 ಅನ್ಯ ಮತದಾರರಿದ್ದಾರೆ. ಕಕುಮಟಾ-ಹೊನ್ನಾವರ ತಾಲೂಕಿನಲ್ಲಿ 11 ಮತಗಟ್ಟೆಗಳನ್ನು ಸಂವೇದನಾಶೀಲ ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ 6 ಗಂಟೆಯಿಂದ ಮದ್ಯ ಮಾರಾಟ ಸ್ಥಗಿತಗೊಳಿಸಲಾಗಿದ್ದು, 144 ಕಾಯಿದೆ ಜಾರಿಯಾಗಿದೆ. 7 ಸಂಚಾರಿ ತಂಡ, 3 ಚೆಕ್ಪೋಸ್ಟ್ಗಳು, 5 ತನಿಖಾ ತಂಡ ಕಾಯರ್ಾಚರಿಸುತ್ತಿವೆ. ಒಟ್ಟೂ 1100 ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದು, 1455 ಅಂಗವಿಕಲ ಮತದಾರರಿದ್ದಾರೆ. ಅಂಗವಿಕಲ ಮತದಾರರಿಗೆ ಮತದಾನಕ್ಕೆ ಕರೆದೊಯ್ಯಲು ಜಿಲ್ಲಾಡಳಿತದಿಂದ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ. ಕುಮಟಾದ ಮತಗಟ್ಟೆ ಸಂಖ್ಯೆ 95 ಹಾಗೂ ಹೊನ್ನಾವರದ ಮತಗಟ್ಟೆ ಸಂಖ್ಯೆ 198ನ್ನು 'ಸಖಿ' ಮತಗಟ್ಟೆಯಾಗಿ ಸಜ್ಜುಗೊಳಿಸಲಾಗಿದೆ. ಮತದಾರರಿಗೆ ಮತಗಟ್ಟೆಯೊಳಗೆ ಮೊಬೈಲ್ ಬಳಕೆಗೆ ಅವಕಾಶವಿಲ್ಲ ಎಂದರು.