ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಪಡೆದ ಪ್ರೇಮಾ ಈರ್ಪ ಕುಳೆಕುಮಟಗಿ
ವಿಜಯಪುರ, 08: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವ “ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ” ಯನ್ನ ದೇವರಹಿಪ್ಪರಗಿ ತಾಲೂಕಿನ ಕೊರವಾರದ ಶಿಕ್ಷಕಿಯಾದ ಪ್ರೇಮಾ ಈರ್ಪ ಕುಳೆಕುಮಟಗಿ (ನಿಂಬೆವ್ವಾ ಈರ್ಪ ಬಿರಾದಾರ) ಅವರಿಗೆ ನೀಡಿ ಗೌರವಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಶಸ್ತಿ ನೀಡಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಸಮರ್ಕವಾಗಿ ಒದಗಿಸಲು ತೆಗೆದುಕೊಂಡಿರುವ ಕ್ರಮಗಳನ್ನು ಗುರುತಿಸಿ ಅಭಿನಂದಿಸುತ್ತಾ ಮುಂದೆಯೂ ಈ ಯೋಜನೆಯನ್ನ ಸಕಾರಾತ್ಮಕವಾಗಿ ಮುಂದುವರೆಸಿಕೊಂಡು ಹೋಗಬೇಕು ಎಂದು ಶುಭಹಾರೈಸಿದರು
ಪ್ರಶಸ್ತಿ ಸ್ವೀಕರಿಸಿ ಪತ್ರಿಕೆಯೊಂದಿಗೆ ಮಾತನಾಡಿದ ಪ್ರೇಮಾ ಈರ್ಪ ಕುಳೆಕುಮಟಗಿ ಈ ಪ್ರಶಸ್ತಿ ಬಂದಿರುವುದು ತುಂಬಾ ಕುಷಿಯನ್ನುಂಟು ಮಾಡಿದೆ, ಗ್ರಾಮೀಣ ಮಟ್ಟದಲ್ಲಿ ಕೆಲಸ ಮಾಡಲು ಸಾಕಷ್ಟು ಅನಾನೂಕೂಲಗಳ ಮಧ್ಯಯೂ ಮತ್ತೆ ಕೆಲಸ ಮಾಡಲು ಹೊಸ ಹುಮ್ಮಸ್ಸು ಬಂದಿದೆ, ಇದರಿಂದ ನಮ್ಮ ಕುಟುಂಬಸ್ಥರು, ಗ್ರಾಮಸ್ಥರು, ನಮ್ಮ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ, ಅವರೆಲ್ಲರಿಗೂ ಚಿರೃಣಿಯಾಗಿರುತ್ತೆನೆ, ಈ ಪ್ರಶಸ್ತಿಗೆ ನನ್ನ ಕೆಲಸವನ್ನು ಗುರುತಿಸಿ ಆಯ್ಕೆ ಮಾಡಿರುವ ಇಲಾಖೆಯ ಅಧಿಕಾರಿಗಳು ಧನ್ಯವಾದಗಳನ್ನು ತಿಳಿಸುತ್ತೆನೆ ಎಂದರು,