ಜೆ ಡಿ ಎಸ್ ಜಿಲ್ಲಾ ಕಚೇರಿಯಲ್ಲಿ ಪಕ್ಷ ಸಂಘಟನೆಗಾಗಿ ಮಹಿಳೆಯರ ಪೂರ್ವ ಭಾವಿ ಸಭೆ

Preliminary meeting of women for party organization at JDS district office

ಜೆ ಡಿ ಎಸ್ ಜಿಲ್ಲಾ ಕಚೇರಿಯಲ್ಲಿ ಪಕ್ಷ ಸಂಘಟನೆಗಾಗಿ  ಮಹಿಳೆಯರ ಪೂರ್ವ ಭಾವಿ ಸಭೆ

ಬಳ್ಳಾರಿ 04: ಮುಂಬರುವ   ತಾಲೂಕು ಮತ್ತು  ಜಿಲ್ಲಾ ಪಂಚಾಯತ್ ಚುನಾವಣೆ ಆಗಮಿಸುತ್ತಿರುವುದರಿಂದ  ಜಿಲ್ಲಾಅಧ್ಯಕ್ಷರಾದ ಮೀನಹಳ್ಳಿ ತಾಯಣ್ಣ ಅವರ ನೇತೃತ್ವದಲ್ಲಿ ನಗರದ ಜಿಲ್ಲಾ ಜೆಡಿಎಸ್  ಕಚೇರಿಯಲ್ಲಿ  ಪಕ್ಷ ಸಂಘಟನೆಗಾಗಿ  ಮಹಿಳಾ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ನಡೆಯಿತು. 

 ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡೆ ಪುಷ್ಪಾ, ಮಾಧ್ಯಮ ಜೊತೆ ಮಾತನಾಡಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳ ಮೇಲೆ ನೆಪ ಮಾಡಿ ಜನತೆಗೆ ದಾರಿ ತಪ್ಪಿಸುತ್ತದೆ  ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಮಹಿಳೆಯರಿಗೆ ಸಿಗುವ ಎರಡು ಸಾವಿರ, ಅನ್ನಭಾಗ್ಯ ಯೋಜನೆ ಅಕ್ಕಿ ಹಣ, 200 ಯೂನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಯುವಕರ ನಿರುದ್ಯೋಗ ಭತ್ಯೆ  ಮಾಡುತ್ತೇವೆ ಎಂದು ಸುಳ್ಳು ಭರವಸೆಗಳನ್ನು ನೀಡಿ ಆಟಕ್ಕುಂಟು  ಲೆಕ್ಕಕ್ಕಿಲ್ಲದ ಹಾಗೆ ಜನರಿಗೆ ಅನ್ಯಾಯ ಮಾಡಿದೆ  ಆದರಿಂದ ಮುಂಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದರು  

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮೀನಹಳ್ಳಿ ತಾಯಣ್ಣ, ಜಮೀಲಾ ಬೇಗಂ, ಭವಾನಿ ರಹಮತ್ ಬಿ, ಜಯಲಕ್ಷ್ಮಿ ವಿಜಯ ರುಮಾನ, ರಾಜೇಶ್ವರಿ, ಶಿವಗಂಗಾ, ವೃಂದ, ಆಯಿಷಾ ಶಬನಾ ನಾಗವೇಣಿ, ನೀಲಾ, ರೇಷ್ಮಾ, ರೇಣುಕಾ,ಭುವನೇಶ್ವರಿ,ರಾಮಾ ಮೂರ್ತಿ,ಲಕ್ಶ್ಮಮ್ಮ, ಸೇರಿದಂತೆ ಅನೇಕರಿದ್ದರು