ಲೋಕದರ್ಶನ ವರದಿ
ಮುಧೋಳ 09: ನವೆಂಬರ 25ರಂದು ನಡೆಯುವ ಸಹೃದಯ ಭಕ್ತ ಸಮಾವೇಶಕ್ಕೆ ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಯಿಂದ 10,000 ಭಕ್ತಸಮೂಹ ಹಾಗೂ 250 ಕ್ಕೂ ಹೆಚ್ಚು ಮಠಾಧೀಶರು ಹಾಗೂ ಮಹಿಳಾ ಮಠಾಧೀಶರು ಮತ್ತು ಬೇರೆ ಬೇರೆ ಪೀಠದ ಜಗದ್ಗುರುಗಳು ಆಗಮಿಸಲಿದ್ದಾರೆೆಂದು ಶಿರೋಳ ರಾಮಾರೂಢ ಮಠದ ಶ್ರೀ ಶಂಕರಾರೂಢ ಸ್ವಾಮೀಜಿ ಹೇಳಿದರು
ಶಿರೋಳದ ರಾಮಾರೂಢದಲ್ಲಿ ಗುರುವಾರ ಸಂಜೆ ಸೇರಿದ ಪೂರ್ವಭಾವಿ ಸಭೆಯಲ್ಲಿ ನಡೆದ ಸಹೃದಯ ಮಠಾಧಿಪತಿಗಳ ಒಕ್ಕೂಟದಿಂದ ನವೆಂಬರ 25 ರಂದು ವಿಜಯಪುರ ಜಿಲ್ಲೆಯ ಗಲಗಲಿಯಲ್ಲಿ ನಡೆಯಲಿರುವ ಭಕ್ತ ಸಮಾವೇಶದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು
ಈ ಸಭೆಯಲ್ಲಿ ಭಾರತೀಯ ಸಂಸ್ಕೃತಿ,ಸಂಸ್ಕಾರ,ಆಚಾರ,ವಿಚಾರ ಆರ್ಯವಿದ್ಯೆ ಹಾಗೂ ಗುರುಕುಲ ಪದ್ಧತಿಯ ಶಿಕ್ಷಣವು ನಶಿಸುತ್ತಿರವುದನ್ನು ಮನಗಂಡ ಪೂಜ್ಯರು ಗುರುಕುಲ ಪ್ರಾರಂಭಿಸಿದ್ದಾರೆ. ಶ್ರೀ ಸಿದ್ಧಗಿರಿ ಸಂಸ್ಥಾನ ಮಠದಲ್ಲಿ ನಡೆಯುವ ಗುರುಕುಲದ ವಿದ್ಯಾಥರ್ಿಗಳು ಆಗಮಿಸಲಿದ್ದಾರೆ.ಆದರ್ಶ ಸನ್ಯಾಸಿಗಳನ್ನು ಆದರ್ಶ ಗೃಹಸ್ಥರನ್ನು ತಯಾರು ಮಾಡುವುದೇ ಈ ಗುರುಕುಲದ ಮುಖ್ಯ ಉದ್ದೇಶವಾಗಿರುತ್ತದೆ.14 ವಿದ್ಯೆ, 64 ಕಲೆಗಳ ಪ್ರಸ್ತುತೀಕರಣ ಗುರುಕುಲ ವಿದ್ಯಾಥರ್ಿಗಳಿಂದ ನಡೆಯಲಿದೆ.
ಕುರುಕ್ಷೇತ್ರ ಯುದ್ಧದಲ್ಲಿ ಅರಮನೆಯಲ್ಲಿದ್ದ ದೃತರಾಷ್ಟ್ರನಿಗೆ ಸಂಜಯನು ದೂರದರ್ಶನ ವಿದ್ಯೆಯ ಸಹಾಯದಿಂದ ಹೇಗೆ ತಿಳಿಸಿದನೋ ಹಾಗೆ ದೂರದರ್ಶನ ವಿದ್ಯೆಯನ್ನು ಗುರುಕುಲದ ವಿದ್ಯಾಥರ್ಿಗಳು ಪ್ರಸ್ತುತೀಕರಿಸುತ್ತಾರೆ,ಮತ್ತು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓದುವುದು, ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ಗುರುಕುಲ ವಿದ್ಯಾಥಿ9ಗಳಿಂದ ನಡೆಯಲಿವೆ. ಈ ಒಂದು ಕಾರ್ಯಕ್ರಮಕ್ಕೆ ನಾಡಿನ ಎಲ್ಲ ಕಡೆಯಿಂದ ಆಗಮಿಸಲಿರುವ ಭಕ್ತಾದಿಗಳಿಗೆ ಮತ್ತು ಮಠಾಧೀಶರಿಗೆ ಸೂಕ್ತ ವ್ಯವಸ್ಥೆಯ ಸಿದ್ಧತೆ ನಡೆಯುತ್ತಿದೆ ಎಂದು ಹೇಳಿದರು.ಈ ಕಾರಣಕ್ಕೆ ರಾಜ್ಯದ ಮೂಲೆ ಮೂಲೆಯಲ್ಲಿರುವ ಭಕ್ತ ಮಹಾಶಯರು ಈ ಪುಣ್ಯಮಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಹೃದಯಿ ಮಠಾಧಿಪತಿಗಳ ಒಕ್ಕೂಟದ ಪ್ರಕಟಣೆ ತಿಳಿಸುತ್ತದೆ.
ಪೂರ್ವಭಾವಿ ಸಭೆಯಲ್ಲಿ ಅವಳಿ ಜಿಲ್ಲೆಯ ಸುಮಾರು 25ಕ್ಕೂ ಅಧಿಕ ಸ್ವಾಮೀಜಿಗಳು ಭಾಗಿಯಾಗಿದ್ದರು.