ಪೂರ್ವಭಾವಿ ಸಭೆ: ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಸಲಹೆಗಳು

Pre-meeting: Tips for receiving feedback from the public

ಪೂರ್ವಭಾವಿ ಸಭೆ:  ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಸಲಹೆಗಳು 

ರಾಣಿಬೆನ್ನೂರ 14:  ನಗರದಲ್ಲಿ ಬೀದಿ ದೀಪಗಳನ್ನು,  ರಸ್ತೆಗಳನ್ನು, ಚರಂಡಿಗಳನ್ನು,  ನಗರದ ವಿವಿಧ ವೃತ್ತಗಳನ್ನು ಅಭಿವೃದ್ಧಿಪಡಿಸಬೇಕು. ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛಗೊಳಿಸಬೇಕು. ಮತ್ತು ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಶೌಚಾಲಯಗಳನ್ನು ನಿರ್ಮಿಸಬೇಕು. ಪ್ರತಿಯೊಂದು ವೃತ್ತಕ್ಕೂ ದೇಶಕ್ಕೆ ಕೊಡುಗೆ ನೀಡಿದ ಮಹಾಪುರುಷರ ಹೆಸರುಗಳನ್ನು ನಾಮಕರಣ ಮಾಡಬೇಕು. ಮುಕ್ತಿಧಾಮಕ್ಕೆ ಬಡವರ ಅನುಕೂಲಕ್ಕಾಗಿ ವಾಹನ ವ್ಯವಸ್ಥೆ ನಗರಸಭೆಯಿಂದ ಕಲ್ಪಿಸಿ ಕೊಡಬೇಕು. ನಗರದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಟ್ರಾಫಿಕ್ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೆ, ನಗರದಲ್ಲಿ ಸಾರ್ವಜನಿಕರಿಗೆ ಬಸ್ ನಿಲ್ದಾಣ ನಿರ್ಮಿಸಬೇಕು ಎಂಬಿತ್ಯಾದಿ ಸಲಹೆಗಳನ್ನು ಸಾರ್ವಜನಿಕರು ಮತ್ತು ನಗರಸಭೆಯ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಲಹೆ ನೀಡಿದರು.  

    ಶುಕ್ರವಾರ ಇಲ್ಲಿನ ನಗರಸಭೆಯ ಸರ್ ಎಂ ವಿಶ್ವೇಶ್ವರಯ್ಯ ಸಭಾಭವನದಲ್ಲಿ 2024-25 ನೇ ಸಾಲಿನ ಮುಂಗಡ ಪತ್ರದ ಆಯ-ವ್ಯಯ ಮಂಡಿಸಲು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಪೂರ್ವಭಾವಿ ಸಭೆಯಲ್ಲಿ ಈ ಸಲಹೆಗಳು ಕೇಳಿ ಬಂದವು.  

    ನಗರ ಸಭೆಯ ಸದಸ್ಯ ಪ್ರಭಾವತಿ ತಿಳುವಳ್ಳಿ ಮಾತನಾಡಿ, ನಗರಸಭೆಯಲ್ಲಿ ಸೋಲಾರ್ ದ್ವೀಪಗಳನ್ನು ಅಳವಡಿಸಲು 10 ಲಕ್ಷ ರೂಪಾಯಿ ಅನುದಾನ ಇಟ್ಟಿದ್ದರು ಏಕೆ ಬಳಸಲಿಲ್ಲ? ಪ್ರಕೃತಿಯಿಂದ ದೊರೆಯುವ ಶಾಖವನ್ನು ಪಡೆದು  ಸೋಲಾರ್ ದ್ವೀಪಗಳನ್ನು ಅಳವಡಿಸುವುದರಿಂದ ವಿದ್ಯುತ್ ಖರ್ಚು ಕಡಿಮೆಯಾಗುತ್ತದೆ ನಗರಸಭೆ ಅಧಿಕಾರಿಗಳು ಅಳವಡಿಸಿಲ್ಲ? ಇದರಿಂದ ಅನುಮಾನಗಳು ಮೂಡುತ್ತವೆ ಒಂದು ಕಿಡಿಕಾರಿದರು. 

   ಇನ್ನೋರ್ವ ಸದಸ್ಯ ಮಲ್ಲಣ್ಣ ಅಂಗಡಿ ಮಾತನಾಡಿ, ಜಿಲ್ಲಾಧಿಕಾರಿಗಳು ನಗರಸಭೆಯ ಅಧ್ಯಕ್ಷರಾಗಿರುವುದರಿಂದ ಪ್ರತಿ ನಗರಸಭೆಯ ಸಭೆಗೆ ಹಾಜರಾಗಬೇಕಾಗಿತ್ತು.  ಅವರ ಅನುಮತಿ ಪಡೆದು ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು ಅವರ  ಅನುಪಮ ಸ್ಥಿತಿಯಲ್ಲಿ ಪೂರ್ವಭಾವಿ ಸಭೆ  ನಡೆಯಬೇಕಿತ್ತು. ಅವರು ಇಂದು ಉಪಸ್ಥಿತರಿಲ್ಲದ ಕಾರಣ ನಾವು ನಮ್ಮ ನಗರಸಭೆಯ ಸಮಸ್ಯೆಗಳನ್ನು ಯಾರ ಮುಂದೆ ಹೇಳಿಕೊಳ್ಳಬೇಕು ಎಂದು ಪ್ರಶ್ನಿಸಿದರು??!  

      ನಗರಸಭೆ ವತಿಯಿಂದ ನಗರದ ವಿವಿಧ ವಾರ್ಡುಗಳಲ್ಲಿ ಘಟಕಗಳನ್ನು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿತ್ತು. ಗ್ರಾಹಕರು ಪ್ರತಿಕ್ಯಾನಿಗೆ ರೂ. 5 ಹಣ ಹಾಕಿ ನೀರು ಪಡೆದ ಆ ಹಣ ಎಷ್ಟಿದೆ ನಗರಸಭೆ ಯಾವ ಖಾತೆಗೆ ಜಮಾ ಆಗಿದೆ ಎಂದು ಅಧಿಕಾರಿಗಳನ್ನು ಕೇಳಿದಾಗ ಅವರ ಉತ್ತರ ಶೂನ್ಯವಾಗಿತ್ತು. ಮತ್ತು ಈ ಹಣ ಎಲ್ಲಿ ಹೋಯಿತು ಇದರ ಇದರ ಉಸ್ತುವಾರಿ ಯಾರೂ ನೋಡಿಕೊಳ್ಳುತ್ತೀರಿ. ಅಲ್ಲಿಯೂ ಕೆಟ್ಟುಹೋಗಿದೆ ಅದರ ದುರಸ್ತೇ  ಯಾರು ಮಾಡಬೇಕು. ಇದಕ್ಕೆಲ್ಲ ಉತ್ತರ ನೀಡಬೇಕೆಂದು ಪಟ್ಟು ಹಿಡಿದಾಗ  ಅಧಿಕಾರಿಗಳು ಗಪ್ ಚುಪ್ ಇದ್ದರು.  ಆಗ ಅವರು ಮುಂದುವರಿದು ಆಗಿದ್ದಲ್ಲಾ ಆಗಿಹೋಯಿತು. ಮುಂದಿನ ಆಯವ್ಯಯದಲ್ಲಿ ಈ ಶುದ್ಧ ನೀರಿನ ಘಟಕಗಳ ದುರಸ್ತಿ ಕಾರ್ಯ ಖರ್ಚು ವೆಚ್ಚ ಇದರಿಂದ ಆದಾಯ ಬರುವುದನ್ನು ಸಮಗ್ರ ನಿರ್ವಹಣೆ ಮಾಡುವ ಕುರಿತು ಆಯವ್ಯಯದಲ್ಲಿ ಮಂಡನೆ ಯಾಗಬೇಕು ಎಂದು ಅಂಗಡಿ ಸಲಹೆ ನೀಡಿದರು.   

   ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ,  ನಾವು ಹಲವು ಬಾರಿ ಪೂರ್ವಭಾವಿ ಸಭೆಯಲ್ಲಿ ನಮ್ಮ ಸಲಹೆ ಸೂಚನೆಗಳನ್ನು ತಿಳಿಸಿದ್ದರೂ ಸಹ ಇಲ್ಲಿಯ ವರೆಗೆ ಇಂಪ್ಲಿಮೆಂಟ್ (ಕಾರ್ಯರೂಪ) ಆಗಿಲ್ಲ. ಜಿಲ್ಲೆಯಲ್ಲಿಯೇ ದೊಡ್ಡ ನಗರವೆಂದು ಹೆಸರು ಪಡೆದಿರುವ ರಾಣೆಬೆನ್ನೂರು ನಗರ ಇಲ್ಲಿನ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣದವರೆಗೆ ಪ್ರತಿದಿನ ಸಾವಿರಾರು ಜನರು ಓಡಾಡುತ್ತಾರೆ ಆದರೆ, ಈ ರಸ್ತೆಯಲ್ಲಿ ಶೌಚಾಲಯಗಳು ಮತ್ತು ಬೀದಿ ದೀಪಗಳು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಅಲ್ಲದೆ, ಈ ರಸ್ತೆ ಮಧ್ಯದಲ್ಲಿ ಒಂದೆರಡು ಕಡೆ ಪುರುಷರ ಮತ್ತು ಮಹಿಳೆಯರ ಶೌಚಾಲಯಗಳನ್ನು ನಿರ್ಮಿಸಬೇಕು. ಅಲ್ಲದೆ, ತಾಲೂಕ ಪಂಚಾಯಿತಿ ಎದುರಿಗೆ ಮತ್ತು ಮಹಿಳೆಯರ ಮತ್ತು ಪುರುಷರ ಪ್ರತ್ಯೇಕ ಶೌಚಾಲಯಗಳು ಇದ್ದು ಅದರ ಸ್ವಚ್ಛತೆಯಿಲ್ಲದೆ ಗಬ್ಬು ನಾರುತಿವೆ.  ಎಲ್ಲ ವ್ಯವಸ್ಥೆಗಳನ್ನು ಮುಂದಿನ ಆಯವ್ಯಯದಲ್ಲಿ ಅನುದಾನವನ್ನು ಮೀಸಲಿಟ್ಟು ಕಾರ್ಯರೂಪಕ್ಕೆ ತರಲು ಮುಂದಾಗಬೇಕು. ಅಲ್ಲದೆ, ಈ ರಸ್ತೆಯ ಮಧ್ಯದಲ್ಲಿ ಒಂದು ಬಸ್ ನಿಲ್ದಾಣ ಹಾಗೂ ರಸ್ತೆಯುದ್ದಕ್ಕೂ ಸಿ.ಸಿ.ಕ್ಯಾಮರಾ ಅಳವಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.  

    ಡಾಽ ನಾರಾಯಣ ಪವಾರ ಮಾತನಾಡಿ,  ನಗರದಲ್ಲಿ ಟ್ರಾಫಿಕ್ ತೊಂದರೆ ಬಹಳ ಇದೆ. ಪಾದಚಾರಿಗಳಿಗೆ ಓಡಾಡಲು ಬಹಳ ತೊಂದರೆಯಾಗಿದೆ. ಸಂಚಾರಿ ಪೊಲೀಸರು ಸರಿಯಾದ ಕ್ರಮದಲ್ಲಿ ವಾಹನ ನಿಲುಗಡೆ ಮಾಡಲು ಸೂಚನೆ ನೀಡಬೇಕು. ಅಲ್ಲದೆ ನಗರದ ಚಿಕ್ಕಿಮಿಕ್ಕಿ ದುರ್ಗಾದೇವಿ ದೇವಸ್ಥಾನದ ಎದುರಿಗೆ ಮೂತ್ರಾಲಯ ಇದ್ದು. ಅದು ಜನದಟ್ಟಣೆಯ ಸ್ಥಳವಾಗಿದ್ದು. ಈ ಮೂತ್ರಾಲಯ ಆ ಸ್ವಚ್ಛತೆಯಿಂದ ಇದ್ದು, ಗಬ್ಬು ನಾರುತ್ತಿದೆ. ಪಾದಾಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಮುಂದಿನ ಆಯ-ವ್ಯಯದಲ್ಲಿ ಈ ಮೂತ್ರಾಲಯವನ್ನು ಸ್ವಚ್ಛಗೊಳಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರು.  

     ನಗರಸಭೆ ಸದಸ್ಯೆ ಗಂಗಮ್ಮ ಅವನೂರು ಮಾತನಾಡಿ, ನಗರವು ಬಹಳ ಬೃಹದ್ದಕಾರವಾಗಿ ಬೆಳೆದಿದ್ದು,  ಬಡವರು ದೀನದಲಿತರು ಮಹಿಳೆಯರು, ಮಕ್ಕಳು, ಸಾರ್ವಜನಿಕ ಆಸ್ಪತ್ರೆಗೆ ಓಡಾಡಲು ನಗರ ಸಾರಿಗೆ ಬಸ್ಸಿನ ವ್ಯವಸ್ಥೆ ಇಲ್ಲದ ಕಾರಣ, ಬಡವರು ಸಾರ್ವಜನಿಕ ಆಸ್ಪತ್ರೆಗೆ ನೂರಾರು ರೂಪಾಯಿಗಳನ್ನು ಕೊಟ್ಟು ಆಟೋದಲ್ಲಿ ಓಡಾಡುವ ಸ್ಥಿತಿಯಿಂದ ತೊಂದರೆ ಅನುಭವಿಸುವಂತೆ ಆಗಿದೆ ಆದಕಾರಣ ನಗರ ಸಭೆಯ ವತಿಯಿಂದ ನಗರ ಸಂಚಾರಕ್ಕೆ ಎರಡು ಬಸ್ಸುಗಳ ವ್ಯವಸ್ಥೆ ಮಾಡಿ ಬಡವರಿಗೆ ಅನುಕೂಲ ಮಾಡಲು 2024-25ರ ಆಯವ್ಯಯದಲ್ಲಿ ಈ ಸಂಬಂಧ ಅನುದಾನ ಮೀಸಲಿಟ್ಟು ಕಾರ್ಯರೂಪಕ್ಕೆ ಬರುವಂತೆ ಮಾಡಬೇಕೆಂದು ಸಲಹೆ ನೀಡಿದರು.  

     ಪೌರಾಯುಕ್ತ ಫಕ್ಕೀರ​‍್ಪ ಇಂಗಳಗಿ ಮಾತನಾಡಿ, ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಸಾರ್ವಜನಿಕರು ಮತ್ತು ಸದಸ್ಯರು ಸಹಕಾರ ನೀಡಬೇಕು. ಮುಂದಿನ ದಿನಮಾನಗಳಲ್ಲಿ ತಮ್ಮೆಲ್ಲರ ಸಹಕಾರದಿಂದ ನಗರದ 35 ವಾರ್ಡುಗಳಲ್ಲಿ ಸ್ವಚ್ಛತೆ, ರಸ್ತೆ, ಗಟಾರ. ತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡುವ ಮೂಲಕ ಸಮಗ್ರ ಅಭಿವೃದ್ಧಿಪಡಿಸಲು ತಮ್ಮೆಲ್ಲರ ಸಹಕಾರ ಬೇಕಿದೆ ನಗರವನ್ನು ರಾಜ್ಯದ ಮೊದಲನೆಯ ಸ್ವಚ್ಛತೆಯ ನಗರವೆಂದು ಹೆಸರು ಪಡೆಯುವಂತೆ ಮಾಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮತ್ತು ಸರ್ವ ಸದಸ್ಯರ ಸಾರ್ವಜನಿಕರ ಸಲಹೆ ಸೂಚನೆಗಳನ್ನು ಟಿಪ್ಪಣಿ ಮಾಡಿಕೊಂಡು ಅವುಗಳೆಲ್ಲವನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರಯತ್ನಿಸುತ್ತೇನೆ ಎಂದರು.  

     ಇದೇ ಸಂದರ್ಭದಲ್ಲಿ ನಗರಸಭೆಯ ನಾಮ ನಿರ್ದೇಶನ 5 ಮಂದಿ ನೂತನ ಸದಸ್ಯರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ. ಪ್ರಕಾಶ ಪೂಜಾರ. ಮಂಜುಳಾ ಹತ್ತಿ.  ಶಶಿಧರ ಬಸೇನಾಯ್ಕರ,   ನಾಗರಾಜ ಪವಾರ, ಇರ್ಫಾನ್ ದಿಡಗೂರು.  ವೀರೇಶ್ ಬಾಳಿಹಳ್ಳಿಮಠ. ಮಲ್ಲೇಶಪ್ಪ ಮೊದ್ಲೇರ, ಲಕ್ಷ್ಮಣ ಚಿಂತಾ, ನಗರಸಭೆ ಲೆಕ್ಕಾಧಿಕಾರಿ ವಾಣಿಶ್ರೀ, ಅಭಿಯಂತರ ಮರಿಗೌಡರ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು,  ಹಾಗೂ ಸಾರ್ವಜನಿಕರು ಇದ್ದರು.  

ಪೋಟೋ14ಆರ್‌ಎನ್‌ಆರ್03 ರಾಣಿಬೆನ್ನೂರು:ಇಲ್ಲಿನ ನಗರಸಭೆಯ ಸರ್‌.ಎಂ.ವಿಶ್ವೇಶ್ವರಯ್ಯ ಸಭಾಭವನದಲ್ಲಿ ನಡೆದ ಮುಂಗಡ ಪತ್ರದ 2024-25 ಆಯವ್ಯಯ ಪೂರ್ವಭಾವಿ ನಗರಸಭೆಯಲ್ಲಿ ಪೌರಾಯುಕ್ತ ಫಕ್ಕೀರ​‍್ಪ ಇಂಗಳಗಿ ಮಾತನಾಡಿದರು..  

ಪೋಟೋ14ಆರ್‌ಎನ್‌ಆರ್03ಎರಾಣಿಬೆನ್ನೂರು:ಇಲ್ಲಿನ ನಗರಸಭೆಯ ಸರ್‌.ಎಂ.ವಿಶ್ವೇಶ್ವರಯ್ಯ ಸಭಾಭವನದಲ್ಲಿ ನಡೆದ ಮುಂಗಡ ಪತ್ರದ 2024-25 ಆಯವ್ಯಯ ಪೂರ್ವಭಾವಿ ನಗರಸಭೆಯಲ್ಲಿ ಸದಸ್ಯರು ಸಲಹೆ ನೀಡಿದರು.