ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪರೀಕ್ಷಾ ಪೂರ್ವ ಸಿದ್ಧತೆ

Pre-Exam Preparation in Special Lecture Program for SSLC Students

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪರೀಕ್ಷಾ ಪೂರ್ವ ಸಿದ್ಧತೆ 

ಧಾರವಾಡ 24 : ಪರೀಕ್ಷಾ ಈ ಸಂದರ್ಭದಲ್ಲಿ ಮೊಬೈಲ್ ಹೆಚ್ಚು ಬಳಸದೆ ಅಧ್ಯಯನ ಕಡೆಗೆ ಗಮನ ಹರಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳಿದರು.ತಾಲೂಕಿನ ನರೇಂದ್ರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವೀರ​‍್ಪ ಮಡಿವಾಳಪ್ಪ ವಳಸಂಗ, ರುದ್ರಮ್ಮ ವಳಸಂಗ ದತ್ತಿ ಹಾಗೂ ಲಿಂ. ತಮ್ಮಣ್ಣ ಬಸಪ್ಪ ಗೊರೋಜಿ, ಪದ್ಮಾವತಿ ತಮ್ಮಣ್ಣ ಗೊರೋಜಿ ದತ್ತಿ ಅಂಗವಾಗಿ ನಡೆದ ಉನ್ಯಾಸ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪರೀಕ್ಷಾ ಪೂರ್ವ ಸಿದ್ಧತೆ ಹೇಗೆ ವಿಷಯವಾಗಿ ಮಾತನಾಡಿದರು.ಓದುವ ವಯಸ್ಸಿನಲ್ಲಿ ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು. ಇತ್ತಿಚಿನ ದಿನಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಮೊಬೈಲ್ ದಾಸರಾಗಿದ್ದಾರೆ. ಓದಿನಕ್ಕಿಂತ ಹೆಚ್ಚು ಮೊಬೈಲ್‌ನಲ್ಲಿಯೇ ಕಾಲ ಕಳೆಯುವುದನ್ನು ನೋಡುತ್ತೇವೆ. ಪಾಲಕರು ಕೂಡಾ ಗಮನ ಹರಿಸಬೇಕಾದ ಅಗತ್ಯತೆ ತುಂಬಾ ಇದೆ. ಮೊಬೈಲ್ ಬಳಕೆ ಮಾಡಿದರೂ ಕೂಡಾ ಎಷ್ಟು ಅಷ್ಟೇ ಇರಬೇಕು. ಅದೇ ಪರಿಪಾಠ ಮಾಡಿಕೊಳ್ಳುವುದು ಸರಿಯಲ್ಲ ಎಂದು ಸಲಹೆ ನೀಡಿದರು.ಮಕ್ಕಳಲ್ಲಿ ಕೀಳರಿಮೆ ಬೇಡ. ಸತತ ಅಧ್ಯಯನಶೀಲರಾಗಿ, ಸ್ಪರ್ಧಾತ್ಮಕ ಯುಗದಲ್ಲಿ ಸಾಧಿಸುವ ಛಲವನ್ನು ಮೈಗೂಡಿಸಿಕೊಳ್ಳಲು ಪ್ರತಿಯೊಬ್ಬ ವಿದ್ಯಾರ್ಥಿಯು ಫನ ತೊಡಬೇಕು. ಹಾಗಾದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಲಿದೆ. ಖಠಿಣ ವಿಷಯಗಳ ಕಡೆಗೆ ಹೆಚ್ಚು ಒತ್ತು ನೀಡಬೇಕು. ಪರೀಕ್ಷೆ ಈ ಸಂದರ್ಭ ಯಾವುದಕ್ಕೂ ಭಯ ಪಡದೆ ಎಲ್ಲವನ್ನು ಸರಳವಾಗಿ ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ಆಂಗ್ಲ ಭಾಷಾ ಸಂಪನ್ಮೂಲ ವ್ಯಕ್ತಿಯಾಗಿ ಎಸ್‌.ವಿ. ಸಂತಿ ಅವರು, ಪರೀಕ್ಷಾ ಭಯ ಮುಕ್ತ ಹೇಗೆ ಎನ್ನುವುದರ ಬಗ್ಗೆ ಉದಾಹರಣೆಗಳ ಮೂಲಕ ಸಲಹೆ ಸೂಚನೆಗಳನ್ನು ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕ ಜಗದೀಶ ಬಳೆಗಾರ ಮಾತನಾಡಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮುರುಗೇಶ ಹಡಗಲಿ, ಎಚ್‌.ಎಸ್‌. ಬಡಿಗೇರ, ಎಸ್‌. ರೇವಣಸಿದ್ದಪ್ಪ ಉಪನ್ಯಾಸ ನೀಡಿದರು. ದತ್ತಿ ದಾನಿಗಳು ಆದ ಡಾ. ಪ್ರವೀಣ್ ಗೋರೋಜಿ ವೇದಿಕೆ ಮೇಲೆ ಉಪಸ್ಥಿತರಿದ್ದರು.  ವಿದ್ಯಾ ಜೋಶಿ ಪ್ರಾರ್ಥಿಸಿದರು. ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ನರೇಗಲ್ಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ವೈ. ಬಡಿಗೇರ ನಿರೂಪಿಸಿದರು. ಸಿದ್ದು ಮಾದರ ವಂದಿಸಿದರು.