ಲೋಕದರ್ಶನರವದಿ
ಧಾರವಾಡ04: ನಗರದ ಆರ್ಯ ವೈಶ್ಯ ಸಮಾಜ ಹಾಗು ಯೋಗಮಯಂ ಯೋಗ ಸಾಧನಾ ಕೇಂದ್ರ ಇವುಗಳ ಸಹಯೋಗದಲ್ಲಿ ನಗರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಇತ್ತೀಚೆಗೆ ಎರಡು ದಿನಗಳ ಉಚಿತ ವೈಜ್ಞಾನಿಕ ಪ್ರಾಣಾಯಾಮ ತರಬೇತಿ ಆಯೋಜಿಸಲಾಗಿತ್ತು.
ಮೈಸೂರಿನ ಖ್ಯಾತ ಯೋಗ ತಜ್ಞೆ, ಸಾಧಕಿ ಶ್ರೀಮತಿ ದೇವಕಿ ಮಾಧವ ಅವರು ಒಟ್ಟು ನಾಲ್ಕು ಸೆಷೇನ್ಗಳಲ್ಲಿ ಹತ್ತು ತಾಸುಗಳಲ್ಲಿ ಅಷ್ಟ ಪಅ್ರಾಣಾಯಾಮಗಳನ್ನು ಪ್ರಾಯೋಗಿಕವಾಗಿ ಹೇಳಿ ಸಭಿಕರಿಂದ ಸಾಮೂಹಿಕವಾಗಿ ಮಾಡಿಸಿದರು.
ಮಾತನಾಡಿದ ಅವರು ವೈಜ್ಞಾನಿಕ ಪ್ರಾಣಾಯಾಮದಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ ಥೆರಾಯಿಡ್ ಸಮಸ್ಯೆಗಳಿಗೆ ಪರಿಹಾರವಿದೆ.
ಎಲ್ಲರಿಗೂ ಉತ್ತಮ ಆರೋಗ್ಯಕ್ಕಾ ನಿರಂತರ ಪ್ರಾಣಾಯಾಮ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಳೆದ 40 ವರ್ಷಗಳಿಂದ ಯೋಗ ಸಾಧನೆ ತೊಡಗಿದ್ದು, ಬ್ರಿಸ್ಟ್ ಕ್ಯಾನ್ಸ್ರ್ ನಿಯಂತ್ರಣಕ್ಕೆ ಯೋಗದ ಪ್ರಭಾವ ಕುರಿತು ಸಂಶೋಧನೆ ಮಾಡುತ್ತಿದ್ದು ಅದರ ಬಗ್ಗೆಯೂ ಶಿಬಿರ ಏರ್ಪಡಿಸುವುದಾಗಿ ಅವರು ತಿಳಿಸಿದರು.
ಧಾರವಾಡ ಜನತೆಯ ಪ್ರೀತಿಯ ಅತಿಥಿಗೌರವಕ್ಕೆ ಕೃತಜ್ಞತೆ ತಿಳಿಸಿದರು. 108 ಓಂಕಾರ ಝೇಕಾರಗಳೊಂದಿಗೆ ಶಿಬಿರ ಮುಕ್ತಾಯವಾಯಿತು. ಸಮಾರಂಭದಲ್ಲಿ ದೇವಕಿ ಮಾಧವ ಅವರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಕಾರ್ಯಕ್ರಮ ಸಂಘಟಿಕರಾದ ಅಶೋಕ ದೊಡ್ಡಮನಿ, ಯೋಗಪಟು ಲಕ್ಷಣ, ಸಂತೋಷ ಪೂಜಾರ ಹಾಗು ಸುರೇಶ ಹೆಗಡೆ ಉಪಸ್ಥಿತರಿದ್ದರು. ಒಟ್ಟು 300 ಜನ ಶಿಬಿರಾಥರ್ಿಗಳು ಈ ತರಬೇತಿಯಲ್ಲಿ ಪಾಲ್ಗೊಂಡಿದ್ದರು.