ದೇಶದ ಭವಿಷ್ಯ ಮಕ್ಕಳಲ್ಲಿ ಅಡಗಿದೆ: ಪವಾರ್

ಲೋಕದರ್ಶನ ವರದಿ

ಕುಕನೂರು: ನಮ್ಮ ದೇಶದ ಭವಿಷ್ಯ ಮಕ್ಕಳಲ್ಲಿ ಅಡಗಿದೆ ಆದ್ದರಿಂದ ಮಕ್ಕಳಿಗೆ ಪ್ರಮುಖವಾಗಿ ಬೇಕಾಗಿರುವ ಮೂಲಭೂತ ಹಕ್ಕುಗಳನ್ನ ಕಲ್ಪಿಸಿ ಅವರ ಭವಿಷ್ಯಕ್ಕೆ ದಾರಿದೀಪವಾಗಬೇಕು ಎಂದು ಅಭಿವೃದ್ಧಿ ಅಧಿಕಾರಿ ವೆಂಕಟೇಶ ಪವಾರ್ ಹೇಳಿದರು.

ತಾಲೂಕಿನ ಯರೇಹಂಚಿನಾಳ ಗ್ರಾಮದ ಸ,ಹಿ,ಪ್ರಾ ಶಾಲೆಯಲ್ಲಿ ನಡೆದ ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಬಾಗವಹಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಅವರದೆ ಆದಂತಹ ಹಕ್ಕುಗಳಿದ್ದು ಅವುಗಳಿಗೆ ದಕ್ಕೆ ಬರದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ, ಅದರಂತೆ ಪ್ರತಿಯೊಂದು ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೊಡಿಕೊಳ್ಳಬೇಕು ಮಕ್ಕಳ ಅಭಿವೃದ್ಧಿ ಕೇವಲ ಶಿಕ್ಷಕರಿಂದ ಮಾತ್ರ ಸಾದ್ಯವಿಲ್ಲಾ ಅದಕ್ಕೆ ಪಾಲಕರ ಸಹಕಾರ ಮುಖ್ಯವಾಗಿದೆ, ಅದರಂತೆ ಶಾಲೆಗಳಿಗೆ ಅಗತ್ಯವಿರುವ ಕಂಪೌಂಡ್, ಕುಡಿಯುವ ನೀರು ಶೌಚಾಲಯ, ಸೇರಿದಂತೆ ಇನ್ನೀತರ ಮೂಲ ಸೌಲಭ್ಯಗಳನ್ನ ಒದಗಿಸಲು ನಮ್ಮ ಗ್ರಾಪಂ ಸಿದ್ದವಿದೆ ಎಂದರು.

ತಾಪಂ ಸದಸ್ಯ ಸುಭಾಸ್ ಮಾದಿನೂರು ಮಾತನಾಡಿ, ಸರಕಾರದಿಂದ ಹಲವಾರು ಯೋಜನೆಗಳನ್ನು ಸರಕಾರ ಜಾರಿಗೆ ತಂದಿದ್ದು, ಬಿಸಿಯೂಟ, ಕ್ಷೀರಭಾಗ್ಯ, ಶೂಬಾಗ್ಯ ಸೇರಿದಂತೆ ಉಚಿತ ಶಿಕ್ಷಣ ನೀಡಲಾಗುತ್ತದೆ ಹಾಗೂ ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಗ್ರಾಪಂ ಅದ್ಯಕ್ಷೆ ಮಾಬೂಬಿ ಕಡೆಮನಿ,  ಸದಸ್ಯರಾದ ಅಡಿವೆಪ್ಪ ಛಲವಾದಿ, ರತ್ನಾ ನರೇಗಲ್, ನಾಗಮ್ಮ ಹೈದ್ರಿ, ಅಂದಪ್ಪ ಹಿರೆಹೋಳಿ, ಬಸವರಾಜ ಕೋಳುರು, ಸಿಆರ್ ಪಿ, ಮಹೇಶ ಆರೇರ, ಅಂಗನವಾಡಿ ಮೇಲ್ವಿಚಾರಕಿ ಶಾರದಾ ಇಂಡಿ, ಗ್ರಾಮಲೆಕ್ಕಾಧಿಕಾರಿ ಬಸವರಾಜ ಹಳ್ಳಿ, ಮುಖ್ಯಶಿಕ್ಷಕರಾದ ಶಿವಣ್ಣ ಯಾಳಗಿ, ಶರಣಪ್ಪ ಸಾದರ, ಶರಣಪ್ಪ ಲಕ್ಷಟ್ಟಿ, ಗ್ರಾಪಂ ಸಿಬ್ಬಂದಿಗಳಾದ ಈರಣ್ಣ ಇಟಗಿ, ಶರಣಪ್ಪ ತೆಗ್ಗಿನಮನಿ, ಬಸಪ್ಪ ನರೇಗಲ್, ಸೇರಿದಂತೆ ಯರೇಹಂಚಿನಾಳ, ಬಿನ್ನಾಳ, ಸಿದ್ನೇಕೊಪ್ಪ ಶಾಲಾ ಶಿಕ್ಷಕರು ಅಂಗನವಾಡಿ ಹಾಗೂ ಆಶಾ ಕಾರ್ಯಕತರ್ೆಯರಯ ಹಾಗೂ ವಿದ್ಯಾಥರ್ಿಗಳು ಹಾಜರಿದ್ದರು.