ಶಿಕ್ಷಣದಿಂದ ಮಾತ್ರ ಬಡತನ ನಿವಾರಣೆಯಾಗಲು ಸಾಧ್ಯ : ಕೆ.ಬಿ.ವಾಸುಕುಮಾರ್
ಕಂಪ್ಲಿ 14: ಶಿಕ್ಷಣದಿಂದ ಮಾತ್ರ ಬಡತನ ನಿವಾರಣೆಯಾಗಲು ಸಾಧ್ಯ ಎಂದು ಪೊಲೀಸ್ ಠಾಣೆಯ ಪಿಐ ಕೆ.ಬಿ.ವಾಸುಕುಮಾರ್ ಹೇಳಿದರು. ಪಟ್ಟಣದ ವೀರಶೈವ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ಜ್ಞಾನ ವಿಕಾಸದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಧರ್ಮಸ್ಥಳ ಯೋಜನೆಯ ಸಂಘದಿಂದ ಸಾಲ ಸೌಲಭ್ಯ ಪಡೆದು, ತಮ್ಮ ಜೀವನೋಪಾಯಕ್ಕೆ ಬಳಕೆ ಮಾಡಿಕೊಳ್ಳುವ ಜತೆಗೆ ಆರ್ಥಿಕವಾಗಿ ಬೆಳೆಯುತ್ತಿರುವುದು ಒಳ್ಳೆಯದಾಗಿದೆ. ಮಹಿಳೆಯರು ಸ್ವಾವಲಂಬನೆ ಬದುಕಿಗೆ ಅಣಿಯಾಗಬೇಕು ಎಂದರು.
ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಮಾತನಾಡಿ, ಮಹಿಳೆಯರಲ್ಲಿ ಆತ್ಮವಿಶ್ವಾಸವಿಟ್ಟು, ರಾಜ್ಯಾದ್ಯಂತ ಧರ್ಮಸ್ಥಳ ಯೋಜನೆಯು ಕೆಲಸ ನಿರ್ವಹಿಸುತ್ತಿದೆ. ಸುಮಾರು 6.54 ಲಕ್ಷ ಸಂಘಗಳು ಕಾರ್ಯನಿರ್ವಹಿಸುತ್ತಿವೆ. 54 ಲಕ್ಷ ದೊಡ್ಡ ಕುಟುಂಬಗಳು ಸ್ವಸಹಾಯ ಸಂಘದ ಪಾಲುದಾರರಾಗಿ ಕೆಲಸ ಮಾಡಲಾಗುತ್ತಿದೆ. ಶ್ರಮವಹಿಸುವ ತಾಕತ್ತು ಮಹಿಳೆಯರಿಗೆ ಇದೆ. ಮುಖ್ಯವಾಗಿ ಬಂಡವಾಳದ ಅವಶ್ಯಕತೆ ಇದೆ. ಈ ಯೊಜನೆಯು ಬ್ಯಾಂಕ್ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಮುಟ್ಟಿಸುತ್ತಿದೆ. ಇಡೀ ರಾಜ್ಯದಲ್ಲಿ 4 ಸಾವಿರ ಕೋಟಿ ಉಳಿತಾಯ ಮಾಡಿದ್ದಾರೆ ನಮ್ಮ ಸದಸ್ಯರು. ಸಣ್ಣ ಬದುಕನ್ನು ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡುವ ಮೂಲಕ ಅವರ ಬದುಕಿಗೆ ಆಸೆಯಾಗಿದೆ. 40 ಸಾವಿರ ಜನರಿಗೆ ಸುಜ್ಞಾನನಿಧಿ ವೇತನ ನೀಡಲಾಗಿದೆ. ರಾಜ್ಯದಲ್ಲಿ 756 ಕೆರೆಗಳ ಹೂಳನ್ನು ಸುಮಾರು 100 ಕೋಟಿ ವೆಚ್ಚದಲ್ಲಿ ತೆಗೆಸಲಾಗಿದೆ. ಕುರುಗೋಡು ತಾಲೂಕು ವ್ಯಾಪ್ತಿಯ ಸೋಮಸಮುದ್ರದಲ್ಲಿ ಕೆರೆ ಹೂಳು ತೆಗೆಸಿದ್ದು, ಕಂಪ್ಲಿ ತಾಲೂಕಿನ ಎಮ್ಮಿಗನೂರಲ್ಲಿ ಕೆರೆ ಹೂಳು ತೆಗೆಸಲು ಕ್ರೀಯಾ ಯೋಜನೆ ಮಾಡಲಾಗಿದೆ. ವ್ಯಕ್ತಿತ್ವ ನಿರ್ಮಾಣದ ಮೂಲಕ ಆ ಕುಟುಂಬ ನಿರ್ಮಾಣ ಮಾಡುವಂತದ್ದು,16ಸಾವಿರ ನಿರ್ಗತಿಕರಿಗೆ ಸೂರು ಒದಗಿಸುವ ಮೂಲಕ ದತ್ತು ತೆಗೆದು ಕೊಂಡಿದೆ ಮತ್ತು ಆ ಸಮಾಜ ನಿರ್ಮಾಣ ಮಾಡುವುದಕ್ಕೆ ಈ ಯೋಜನೆ ಕೊಡುಗೆ ನೀಡುತ್ತಿದೆ. ಈ ಯೋಜನೆಯು ನೀಡುವ ಸಾಲ ಸೌಲಭ್ಯಗಳೊಂದಿಗೆ ಆರ್ಥಿಕವಾಗಿ ಸಬಲರಾಗಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು. ಕೊಪ್ಪಳ ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ.ಗೀತಾ ಪಾಟೀಲ್ ಅವರು ಆರ್ಥಿಕ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಬಗ್ಗೆ ಉಪನ್ಯಾಸ ನೀಡಿದರು.ನಂತರ ಲಾಭಾಂಶ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಮ್ಮಿಗನೂರು ಸಾವಿತ್ರಿ ಬಾಯಿ ಪುಲೆ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆ ಬನಶಂಕರಿ, ತಾಲೂಕು ಯೋಜನಾಧಿಕಾರಿ ಹಾಲಪ್ಪ, ಕೃಷಿ ಅಧಿಕಾರಿ ಸಂಜೀವ್ ಕುಮಾರ್, ಸಮನ್ವಯ ಅಧಿಕಾರಿ ರೇಖಾ, ಮೇಲ್ವಿಚಾರಕರಾಧ ರಾಜು, ಮಂಜುಳಾ, ಅವಿನಾಶ, ಮಂಜುನಾಥ, ಅನುಸೂಯ, ಜಯಲಕ್ಷ್ಮಿ, ಪ್ರಭು, ರವಿಚಂದ್ರಶೇಖರ, ಮುಖಂಡರಾದ ಕೆ.ಎಂ.ಹೇಮಯ್ಯಸ್ಚಾಮಿ, ಡಾ.ವೆಂಕಟೇಶ ಸಿ.ಭರಮಕ್ಕನವರ್ ಸೇರಿದಂತೆ ಮಹಿಳೆಯರು ಹಾಗೂ ಸೇವಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಸ್ಥಳೀಯ ವೀರಶೈವ ಭವನದಲ್ಲಿ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಪಿಐ ಕೆ.ಬಿ.ವಾಸುಕುಮಾರ್ ಉದ್ಘಾಟಿಸಿದರು.