ಲೋಕದರ್ಶನ ವರದಿ
ಕೂಡ್ಲಿಗಿ 07: ಯುಜಿಡಿ ಅವೈಜ್ಞಾನಿಕ ಕಳಪೆ, ಅಪೂರ್ಣ ಕಾಮಗಾರಿ ಪಟ್ಟಣದ ಸಾರ್ವಜಿಕರ ನೆಮ್ಮದಿ ಕಳೆದುಕೊಂಡಿದ್ದಾರೆ ಎಂದು ಪಟ್ಟಣ ಪಂ ಅಧ್ಯಕ್ಷ ರಜನಿಕಾಂತ್ ತೀವ್ರಆಕ್ರೋಶವ್ಯಕ್ತ ಪಡಿಸಿದ್ದಾರೆ ಪಟ್ಟಣ ಪಂ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಯುಜಿಡಿ ಅಧಿಕಾರಿ ಸುಬ್ಬಣ್ಣಶಟ್ಟಿಯನ್ನು ತೀವ್ರ ತರಾಟೆ ತೆಗೆದುಕೊಂಡು ಪಟ್ಟಣದಲ್ಲಿ ಓಳಚರಂಡಿ ಕಾಮಗಾರಿಯು ಬಹುತೇಕ ಕಡೆ ತೀರ ಕಳಪೆ ಮಟ್ಟದಲ್ಲಿ ಮಾಡಿದ್ದಾರೆ ಕಾಮಗಾರಿ ಸಂದರ್ಭ ಸಾರ್ವಜನಿಕರೊಂದಿ ಅನುಚಿತ ವರ್ತನೆ ಮಾಡಿರುವ ದೂರುಗಳು ಕೇಳಿಬಂದಿದ್ದು, ಈ ಸಂಬಂಧ ಯುಜಿಡಿ ಅಧಿಕಾರಿಗಳವಿರುದ್ದ ಕಾನೂನು ರೀತ್ಯ ಶಿಸ್ಥು ಕ್ರಮಕ್ಕೆ ಶಿಪಾರಸ್ಸು ಮಾಡುವುದಾಗಿ ಎಚ್ಚರಿಸಿದರು, ಇದಕ್ಕೆ ಸಭೆಯ ಎಲ್ಲಾ ಸದಸ್ಯರು ಧ್ವನಿಗೂಡಿಸಿದರು.
ಪಟ್ಟಣದ ಹಲವೆಡೆಕಾಮಗಾರಿ ತೀರಾ ತಡವಾಗಿ ನಿರ್ವಹಿಸಿದು ಕೆಲವೆಡಗಳಲ್ಲಿ ಕಾಮಗಾರಿ ಅಪೂರ್ಣಗೊಂಡಿದ್ದು ಪಾದಾಚಾರಿಗಳಿಗು ಸಂಚರಿಸಲು ಪ್ರಾಯಾಸ ಪಡುವ ದುಸ್ಥಿತಿ ಅನುಭವಿಸುತ್ತಿದ್ದಾರೆ. ಕೆಲವೆಡೆ ಕಾಮಗಾರಿ ಅವೈಜ್ಞಾನಿಕವಾಗಿರುವ ಕಾರಣದಿಂದ ಸಾರ್ವಜನಿಕರು ಅನುಕೂಲಕ್ಕಿಂತ ಅನಾನುಕೂಲಗಳನ್ನು ಅನುಭವಿಸುತ್ತಿದ್ದಾರೆ ಸದಸ್ಯ ಎನ್.ಎಮ್.ನೂರ್ ಅಹಮ್ಮದ್ ಮಾತನಾಡಿ ಪಟ್ಟಣದ2ನೇ ವಾಡರ್್ನ ಉಡುಸಲಮ್ಮನಕಟ್ಟೆ ಕೆರೆಯನ್ನು ಶೀರ್ಘವೇ ಪಿಕ್ ನಿಕ್ ತಾಣವನ್ನಾಗಿ ಅಭಿವೃಧ್ದಿಗೊಳಿಸಬೇಕು, ಹೃಧಯ ಭಾಗದಲ್ಲಿರುವ ಮೇನ್ ಬಾಯ್ಸ ಸ್ಕೂಲ್ ಮೂಲಭೂತ ಅಭಿವೃಧ್ದಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿದ್ದು ಅವುಗಳನ್ನು ಬೇಗನೇ ಪೂರ್ಣಗೊಳಿಸಬೇಕೆಂದು ಅಧಿಕಾರಿಗೆ ಸೂಚಿಸಿದರು. ಸಾರ್ವಜನಿಕವಾಗಿ ಅಗತ್ಯವಿದ್ದಲ್ಲಿ ಪಟ್ಟಣದ ರಸ್ಥೆಗಳನ್ನು ಕಾನೂನಾತ್ಮಕವಾಗಿ ಅಗಲಿಕರಣವನ್ನು ಸಂಬಂಧಿಸಿದ ಇಲಾಖೆ ಕೈಗೊಳ್ಳುವುದಾದರೆ ಪಟ್ಟಣದ ಅಭಿವೃಧ್ದಿ ದೃಷ್ಠಿಯಿಂದ ಸರ್ವ ಸದಸ್ಯರೂ ಸ್ವಾಗತಿಸುವುದು ಜನಪ್ರತಿನಿಧಿಗಳ ಕರ್ಥವ್ಯ ಎಂದು ಅಭಿಪ್ರಾಯ ವೆಕ್ತ ಪಡಿಸಿದರು.
ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಪ್ರೋತ್ಸಾಹ ಧನ ಮಂಜೂರಾಗಿದ್ದು, ಶೀರ್ಘವೇ ಸೂಕ್ತರೀತಿಯಲ್ಲಿ ವಿತರಿಸಲಾಗುವುದು ಎಂದು ಪಟ್ಟಣ ಪಂಚಾಯ್ತಿ ಅಧಿಕಾರಿ ಪಕೃಧ್ದೀನ್ ಸಭೆಗೆ ತಿಳಿಸಿದರು.
30ವಿಕಲ ಚೇತನರಿಂದತ್ರಿಚಕ್ರ ವಾಹನ ಕೋರಿಕೆಯ ಅಜರ್ಿಗಳು ಬಂದಿದದ್ದು, ನಿಗಧಿತ ಮಂಜೂರಾದ ಹಣ ಸಾಲದಾಗುತ್ತಿದ್ದು ಫಲಾನುಭವಿಗಳನ್ನು ಲಾಟರೀ ಮೂಲಕ ಆಯ್ಕೆ ಮಾಡಿ ಮೊದಲನೇ ಕಂತಲ್ಲಿ ವಿತರಿಸಲಾಗುವುದು,ಮುಂದಿನ ದಿನಗಳಲ್ಲಿ ಸಕರ್ಾರ ಅಗತ್ಯ ಹಣ ಮಂಜೂರು ಮಾಡಿದಲ್ಲಿ ಎರಡನೇ ಕಂತಿಗೆ ಉಳಿದವರಿಗೆ ವಿತರಿಸುವ ಉಧ್ದೇಶ ಹೊಂದಿರುವುದಾಗಿ ತಿಳಿಸಿದರು.
ಸಭೆಯ ಅಧ್ಯಕ್ಷತೆ ಪಪಂ ಅಧ್ಯಕ್ಷ ಪಿ.ರಜನಿಕಾಂತ್ ವಹಿಸಿದ್ದರು, ಉಪಾಧ್ಯಕ್ಷರಾದ ಕೋಲೆಮೈಮುನ್ನಾ, ಸ್ಥಾಯಿ ಸಮಿತಿ ಅಧ್ಯಕ್ಷ ಗುಪ್ಪಾಲ ರಾಘವೇಂದ್ರ, ಮುಖ್ಯಾಧಿಕಾರಿ ಪಕೃಧ್ಧೀನ್ ಉಪಸ್ಥಿತರಿದ್ದರು. ಬಹುತೇಕ ಪಪಂ ಸದಸ್ಯರು ಸಭೆಯಲ್ಲಿ ಭಾಗವಹಿದ್ದರು.