ರಾಜಕೀಯ ಮುತ್ಸದ್ಧಿ ಎಂ.ಎಸ್‌. ಕೃಷ್ಣ - ಡಾ.ಡಿ.ವಿ. ಪರಮಶಿವಮೂರ್ತಿ,

Political aspirant M.S. Krishna - Dr. D.V. Paramashivamurthy,

ರಾಜಕೀಯ ಮುತ್ಸದ್ಧಿ ಎಂ.ಎಸ್‌. ಕೃಷ್ಣ - ಡಾ.ಡಿ.ವಿ. ಪರಮಶಿವಮೂರ್ತಿ,  

ಹಂಪಿ 10 : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದ ದಿವಂಗತ ಸನ್ಮಾನ್ಯ ಎಸ್‌.ಎಂ. ಕೃಷ್ಣ ಅವರು ರಾಜಕೀಯ ಮುತ್ಸದ್ಧಿಗಳು, ಜನಪ್ರಿಯ ರಾಜಕಾರಣಿಯೂ ಆಗಿ ಹೆಸರಾಗಿದ್ದರು. ಎಂತಹ ಸಮಯದಲ್ಲಿಯೂ ಸಹನೆ ಕಳೆದುಕೊಳ್ಳದೇ ಶಾಂತಚಿತ್ತದಿಂದ ಸವಾಲುಗಳನ್ನು ನಿಭಾಯಿಸುತ್ತಿದ್ದರು ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಯವರಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ತಿಳಿಸಿದರು.ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ದಿನಾಂಕ 10.12.2024ರಂದು ಆಯೋಜಿಸಿದ್ದ ದಿವಂಗತ ಸನ್ಮಾನ್ಯ ಎಸ್‌.ಎಂ. ಕೃಷ್ಣ ಅವರ ಗೌರವಾರ್ಥ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡುತ್ತಾ, ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (1 ಮೇ 1932 - 10 ಡಿಸೆಂಬರ್ 2024) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, 2009ರಿಂದ ಅಕ್ಟೋಬರ್ 2012ರ ವರೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆಯೂ 1999ರಿಂದ 2004ರವರೆಗೆ ಕರ್ನಾಟಕದ 10ನೇ ಮುಖ್ಯಮಂತ್ರಿಗಳಾಗಿಯೂ ಮತ್ತು 2004ರಿಂದ 2008ರ ವರೆಗೆ ಮಹಾರಾಷ್ಟ್ರದ 19ನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.  

ಎಸ್‌.ಎಂ.ಕೃಷ್ಣ ಅವರು ಡಿಸೆಂಬರ್ 1989ರಿಂದ 1993ರ ವರೆಗೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಆಗಿಯೂ, 2023ರಲ್ಲಿ ಕೃಷ್ಣ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು. ಜೊತೆಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾಗಿದ್ದರು. 

1962ರಲ್ಲಿ ವಿಧಾನಸಭೆಗೆ ಆಯ್ಕೆ, 1968ರಲ್ಲಿ ಲೋಕಸಭೆಗೆ ಆಯ್ಕೆ, 1971ರಲ್ಲಿ ಮರು ಲೋಕಸಭೆಗೆ ಆಯ್ಕೆ, 1972ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿ ವಾಣಿಜ್ಯ, ಉದ್ಯಮ, ಸಂಸದೀಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. 1983ರಲ್ಲಿ ಉದ್ಯಮ ಮಂತ್ರಿಗಳಾಗುತ್ತಾರೆ. 1984ರಲ್ಲಿ ಹಣಕಾಸು ಮಂತ್ರಿಯಾಗಿ, 1989-92ರವರೆಗೆ ವಿಧಾನಸಭೆಗೆ ಸ್ವೀಕರ್ ಆಗಿಯೂ, 1992-94ರವರೆಗೆ ಉಪಮುಖ್ಯಮಂತ್ರಿಯಾಗಿ, 1996ರಲ್ಲಿ ರಾಜ್ಯಸಭೆ(ಎಂ.ಎಲ್‌.ಸಿ)ಗೆ ಚುನಾಯಿತರಾಗುತ್ತಾರೆ, 1999ರಿಂದ ಕರ್ನಾಟಕದ 16ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ. 3.11.2001ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠಕ್ಕೆ 15 ಲಕ್ಷ ಕೊಟ್ಟು ಪೀಠವನ್ನು ಉದ್ಘಾಟಿಸುತ್ತಾರೆ.ಈ ಸಂತಾಪ ಸೂಚಕ ಸಭೆಯಲ್ಲಿ ವಿವಿಧ ನಿಕಾಯದ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಅಧಿಕಾರಿಗಳು, ಸಿಬ್ಬಂದಿಗಳು, ಸಂಶೋಧಾನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ದಿವಂಗತರ ಆತ್ಮಕ್ಕೆ ಶಾಂತಿಯನ್ನು ಕೋರಿದರು.