ತಲ್ಲಣ, ತವಕಗಳಿಗೆ ಒಡನಾಡಿ ಕವಿ ಕುವೆಂಪು: ಪ್ರೊ.ರಾಜೇಂದ್ರ

ಲೋಕದರ್ಶನ ವರದಿ

ವಿಜಯಪುರ 05: ನಗರದ ಮಹಿಳಾ ವಿವಿ ಜ್ಞಾನಶಕ್ತಿ ಆವರಣದ ಕನ್ನಡ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಮತ್ತು ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 'ಕುವೆಂಪು ಕೃತಿಗಳಲ್ಲಿ ಬಹುತ್ವದ ನೆಲೆಗಳು' ಕುರಿತ ಎರಡು ದಿನದ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜೇಂದ್ರ ಚೆನ್ನಿ ಮಾತನಾಡಿ, ನಮ್ಮ ತಲ್ಲಣಗಳಿಗೆ, ನಮ್ಮಲ್ಲಿರುವ ಎಲ್ಲಾ ತವಕಗಳಿಗೆ ಒಡನಾಡಿಯಾಗುವ ಕವಿಯಾದವರು ಕುವೆಂಪು. ಆದರೆ ಅವರನ್ನು ಕೇವಲ ಕನ್ನಡ ಬರಹಕ್ಕೆ ಮಾತ್ರ ಸೀಮಿತವಾಗಿರಿಸಿದ್ದೇವೆ. ಕುವೆಂಪು ಅವರನ್ನು ಜಾಗತಿಕ ಸಾಹಿತ್ಯ ಬರವಣಿಗೆಯಲ್ಲಿ ಗುರುತಿಸುವ ಜವಾಬ್ದಾರಿ ನಮ್ಮೆಲ್ಲರದು ಎಂದು ಅಭಿಪ್ರಾಯಪಟ್ಟರು.

ಆಧುನೀಕತೆಯ ಪ್ರಶ್ನೆಯನ್ನು ಇಟ್ಟುಕೊಂಡು ಗಾಂಧೀ, ಅಂಬೇಡ್ಕರ್ ಅವರನ್ನು ಮಾತ್ರ ಚಚರ್ೆಗೆ ಒಳಪಡಿಸುತ್ತೇವೆಯೇ ಹೊರತು ಕುವೆಂಪು ಅವರನ್ನು ಚಚರ್ಿಸದೆ ಇರುವುದು ದುದರ್ೈವವೇ ಸರಿ. ಇದು ಭಾರತದ ಚಿಂತನೆಗೆ ಬಹು ದೊಡ್ಡ ನಷ್ಟ ಎಂಬುದನ್ನು ಮರೆಯಬಾರದು ಎಂದರು.

ಕಾರ್ಯಕ್ರಮದಲ್ಲಿ ಸಂವಾದಕರಾಗಿ ವಿಕ್ರಮ ವಿಸಾಜೆ, ಡಾ.ಕಲಾಶ್ರೀ, ಡಾ.ಜಿನದತ್ತ ಹಡಗಲಿ, ಡಾ.ಆರ್. ರೇಣು,  ಪ್ರೊ.ಮಹೇಶ ಚಿಂತಾಮಣಿ ಮತ್ತು ಸಮಾರೋಪ ಸಮಾರಂಭದ ಭಾಷಣ ಮಾಡಲಿರುವ ಪ್ರೊ.ಕೆ.ಚಿದಾನಂದಗೌಡ, ಗೃಹಸಚಿವ ಡಾ.ಎಂ.ಬಿ.ಪಾಟೀಲ, ಮಾಧ್ಯಮ ಸಲಹೆಗಾರ ಮಹಾಂತೇಶ ಬಿರಾದಾರ, ಮಹಿಳಾ ವಿವಿ ಆಥರ್ಿಕ ಅಧಿಕಾರಿ ಪ್ರೊ.ಎಸ್.ಬಿ.ಮಾಡಗಿ, ವಿವಿಧ ಕಡೆಗಳಿಂದ ಆಗಮಿಸಿದ್ದ ಸಾಹಿತ್ಯಾಸಕ್ತರು, ವಿಶ್ವವಿದ್ಯಾನಿಲಯದ ವಿವಿಧ ನಿಖಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾಥರ್ಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾಥರ್ಿನಿಯರು ನಾಡಗೀತೆ ಮತ್ತು ಕುವೆಂಪು ಗೀತೆ ಹಾಡಿದರು. ಮಹಿಳಾ ವಿವಿ ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಸ್ವಾಗತಿಸಿದರು. ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿಷ್ಣು ಶಿಂಧೆ ಪರಿಚಯಿಸಿ, ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ವಂದಿಸಿದರು.