ಆಂಧ್ರ​‍್ರದೇಶದ ರಾಯಚೋಟಿಗೆ ವೀರಭದ್ರ ಭಕ್ತರ ಪಾದಯಾತ್ರೆ

Pilgrimage of Veerabhadra devotees to Rayachoti in Andhra Pradesh

ಆಂಧ್ರ​‍್ರದೇಶದ ರಾಯಚೋಟಿಗೆ  ವೀರಭದ್ರ ಭಕ್ತರ ಪಾದಯಾತ್ರೆ 

ಧಾರವಾಡ, ಬೆಳಗಾವಿ, ವಿಜಯಪೂರ ಹಾಗೂ ಶಿವಮೊಗ್ಗ ಜಿಲ್ಲೆಗಳ ವೀರಭದ್ರ ದೇವರ ಭಕ್ತರು ಭಾಗಿ ಧಾರವಾಡ  22: ತಾಲೂಕಿನ ಹೆಬ್ಬಳ್ಳಿ ಗ್ರಾಮದ  ವೀರಭದ್ರ ದೇವರ ಪುರವಂತ ಸೇವಕ ಮಲ್ಲಿಕಾರ್ಜುನ ಬಳಿಗಾರ ಕಳೆದ 3 ವರ್ಷಗಳಿಂದ ಆಂಧ್ರ​‍್ರದೇಶ ರಾಜ್ಯದ ರಾಯಚೋಟಿ ಕ್ಷೇತ್ರದ  ವೀರಭದ್ರ ದೇವರ ದೇವಾಲಯದವರೆಗೆ ಪಾದಯಾತ್ರೆ ನಡೆಸುತ್ತಿದ್ದು, ಈ ಬಾರಿ ಇವರ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳ ಒಟ್ಟು 7 ಜನ  ವೀರಭದ್ರ ಭಕ್ತರು ಪಾದಯಾತ್ರೆ ಕೈಕೊಂಡಿದ್ದಾರೆ.  ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ಸಂಪಗಾಂವ ಗ್ರಾಮದ ಶಿವಪುತ್ರಯ್ಯ ಪೂಜಾರ 2ನೆಯ ಬಾರಿಗೆ ಪಾದಯಾತ್ರೆ ನಡೆಸುತ್ತಿದ್ದು, ಈ ಬಾರಿ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ಕಲ್ಲಯ್ಯ ಚಿಕ್ಕಮಠ, ಶಿವಮೊಗ್ಗ ಜಿಲ್ಲೆಯ ನೇರಲಗಿ ಗ್ರಾಮದ ಎನ್‌.ಪಿ. ಕೊಟ್ರ​‍್ಪಗೌಡ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಚಂದ್ರಶೇಖರ ಹುನಗುಂದ, ಸುರೇಶ ಹುನಗುಂದ ಹಾಗೂ ರಮೇಶ ಮುಕರ್ತಿಹಾಳ ಈ ಪಾದಯಾತ್ರೆ ತಂಡ ಸೇರಿಕೊಂಡಿದ್ದಾರೆ.  ಸುಮಾರು 650 ಕಿ.ಮೀ. ದೂರವನ್ನು ಈ ಪಾದಯಾತ್ರೆ ತಂಡ 15 ರಿಂದ 20 ದಿನಗಳಲ್ಲಿ ಕ್ರಮಿಸಲಿದೆ. “ಪ್ರಾತಃಕಾಲ ಮತ್ತು ಸಾಯಂಕಾಲ ಎಳೆ ಬಿಸಿಲಿನ ಸಮಯವನ್ನು ಕೇಂದ್ರೀಕರಿಸಿ ಶಿವನಾಮ ಮತ್ತು   ವೀರಭದ್ರ ದೇವರ ಸಾನ್ನಿಧ್ಯದ ಸ್ಮರಣೆಯೊಂದಿಗೆ ತಮ್ಮ ಪಾದಯಾತ್ರೆ ಯಶಸ್ವಿಯಾಗಿ ನಡೆಯುತ್ತದೆ” ಎಂಬ ವಿಶ್ವಾಸವನ್ನು ಈ ತಂಡದ ನೇತೃತ್ವವಹಿಸಿರುವ ಹೆಬ್ಬಳ್ಳಿ ಗ್ರಾಮದ ಮಲ್ಲಿಕಾರ್ಜುನ ಬಳಿಗಾರ ವ್ಯಕ್ತಪಡಿಸುತ್ತಾರೆ.