ಸದ್ಗುರು ಬಾಳಯ್ಯಜ್ಜನವರ ಭಕ್ತಿ ಮಠದ ಯಾತ್ರಾ ಮಹೋತ್ಸವ
ಯಮಕನಮರಡಿ, 04 : ಹುಕ್ಕೇರಿ ತಾಲೂಕಿನ ಶಾಹಬಂದರ ಗ್ರಾಮದ ಶರಣರಾದ ಶ್ರೀ ಸಂಕಪಜ್ಜನವರ ಸರಿಚ್ಚೆಯ ಮೇರೆಗೆ ಶ್ರೀ ಸದ್ಗುರು ಬಾಳಯ್ಯಜ್ಜನವರ ಭಕ್ತಿ ಮಠದ ಯಾತ್ರಾ ಸಮಾರಂಭವು ದಿ 5 ಮತ್ತು 6 ರಂದು ಜರುಗಲಿದ್ದು ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಮನಿಪ್ರ ಅಡವಿ ಸಿದ್ದೇಶ್ವರ ಮಹಾಸ್ವಾಮಿಗಳು ಅಂಕಲಗಿಮಠ ವಹಿಸಲಿದ್ದು ಅದರಂತೆ ಶಿವಲಿಂಗೇಶ್ವರ ಮಠ ಚಿಕ್ಕಲದಿನ್ನಿ ತೊಲಗಿ ಮಠದ ಅದೃಶ್ಯಾನಂದ ಮಹಾಸ್ವಾಮಿಗಳು ಬಹ್ಮಶ್ರೀ ಗಂಗಾದರ ಮಹಾಸ್ವಾಮಿಗಳು ಬಾಳಯ್ಯಜ್ಜವರ ಮಠ ತವಗ ಮತ್ತು ಅಧ್ಯಕ್ಷತೆಯನ್ನು ಸನ್ಮಾನ್ಯ ಸತೀಶ ಅಣ್ಣಾ ಜಾರಕಿಹೋಳಿ ಲೋಕೊಪೊಯೋಗಿ ಸಚಿವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ಸಂಸದರಾದ ಪ್ರಿಯಾಂಕ ಜಾರಕಿಹೋಳಿ ಹಾಗೂ ಮಾನ್ಯ ಪ್ರದಾನ ಕಾರ್ಯದರ್ಶಿಗಳು ರಾಹುಲ ಅಣ್ಣಾ ಜಾರಕಿಹೋಳಿ ರವರು ಆಗಮಿಸಲಿದ್ದು ಅತಿಥಿಗಳಾಗಿ ದ್ರಾಕ್ಷಾಯಣಿ ಗಂ ಪಾಟೀಲ ಗ್ರಾಂಪಂ ಅಧ್ಯಕ್ಷರು ಶಾಹಬಂದರ ಉಪಾಧ್ಯಕ್ಷರು ಬಸ್ಸಪ್ಪಾ ಮೂಕನವರ ಹಾಗೂ ಸಿದ್ದವ್ವಾ ಗೊರಳಿ ಗ್ರಾ ಪಂ ಅಧ್ಯಕ್ಷರು ಇಸ್ಲಾಂಪುರ ಉಪಾಧ್ಯಕ್ಷರು ರಮೇಶ ಬ ಹುಬ್ಬನ್ನವರು ಮಹಾಂತೇಶ ಪಾಟೀಲ ಮುಖ್ಯಸ್ಥರು ಎಕಸ್ ಕಂಪನಿ ರವರು ವಹಿಸಲಿದ್ದಾರೆ ಶನಿವಾರ ರಾತ್ರಿ ಭಜನಾ ಕಾರ್ಯಕ್ರಮ ಹಾಗೂ ರವಿವಾರ ಸಾಮೂಹಿಕ ವಿವಾಹ ಮತ್ತು ದರ್ಮಸಭೆ ಜರುಗಲಿದೆ. ಎಂದು ಸಂಕಪ್ಪಜ್ಜ ಭಕ್ತಿಮಠ ಶಾಹಂಬಂದರ ಇಸ್ಲಾಂಪುರ ರವರು ತಿಳಿಸಿದ್ದಾರೆ.