ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ಏಕೈಕ ವ್ಯಕ್ತಿ ಮಹಾತ್ಮಾ ಪುಲೆ: ಕೋರೆ

Mahatma Pule is the only person who revolutionized education: Kore

ಸಂಬರಗಿ 11: 1848 ರಲ್ಲಿ ಪುಣೆಯ ವಿಶ್ರಾಮಭಾಗ ವಾಡಾದಲ್ಲಿ ಬಾಲಕೀಯರ ಮೊದಲ ಬಾಲಕಿಯರ ಶಿಕ್ಷಣವನ್ನು ಪ್ರಾರಂಭ ಮಾಡಿದರು. ಶಿಕ್ಷಣ ಪಡೆಯುತ್ತಿರುವ ಬಾಲಕಿಯರಿಗೆ ಊಟ, ವಸತಿ ಪ್ರಾರಂಭ ಮಾಡಿ ಶಿಕ್ಷಣದಲ್ಲಿ ಕ್ರಾಂತಿಯನ್ನು ಮಾಡಿದ ಏಕೈಕ ವ್ಯಕ್ತಿ ಮಹಾತ್ಮಾ ಜ್ಯೋತಿರಾವ ಪುಲೆ ಎಂದು ಮದಭಾಮವಿ ಗ್ರಾಮ ಪಂಚಾಯತ ಅಧ್ಯಕ್ಷರು, ಜೈ ಹನುಮಾನ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷರು, ಹಾಗೂ ಮಾಳಿ ಸಮಾಜದ ಮುಖಂಡರಾದ ಮಹಾದೇವ ಕೋರೆ ಹೇಳಿದರು.  

ಮದಭಾಂವಿ ಗ್ರಾಮದಲ್ಲಿ ಮಹಾತ್ಮಾ ಜ್ಯೋತಿರಾವ ಫುಲೆ ಜಯಂತಿ ನಿಮಿತ್ಯವಾಗಿ ಅವರ ಭಾವ ಚಿತ್ರ ಪೂಜೆ ನೇರವೇರಿಸಿ, ಮಾತನಾಡಿ ಅವರು ಮಹಾತ್ಮಾ ಜ್ಯೋತಿರಾವ ಫುಲೆ ಹಾಗೂ ಸಾವಿತ್ರಿಭಾಯಿ ಫುಲೆ ಇಲ್ಲದೆ ಇದ್ದರೆ ಮಹಿಳೆಯರಿಗೆ ಶಿಕ್ಷಣ ಪಡೆಯಲು ಅಸಾಧ್ಯವಾಗುತ್ತದೆ. ಇವರು ಯಾವುದೇ ಭಯವಿಲ್ಲದೆ ಮಹಿಳೇಯರ ಶಿಕ್ಷಣಕ್ಕಾಗಿ ಬೀದಿಗಿಳುದು ಕ್ರಾಂತಿ ಮಾಡಿದರು. ಅಂಥವರ ಆಚಾರ ವಿಚಾರ ಈಗಿನ ಯುವ ಪಿಳಿಗೆ ಪಡೆದುಕೊಳ್ಳಬೇಕೆಂದು ವಿನಂತಿಸಿದರು.  

ಈ ವೇಳೆ ವಿವಿಧ ಉದ್ದೇಶ ಗ್ರಾಮೀಣ ಪ್ರಾಥಮಿಕ ಸಂಘ ಮದಭಾಂವಿ ಅಧ್ಯಕ್ಷರಾದ ನಿಜಗುಣಿ ಮಗದುಮ್ , ಮಾಜಿ ಜಿಲ್ಲಾ ಪಂಚಾಯತ ಸದಸ್ಯ ವಿನಾಯಕ ಬಾಡಗಿ, ಆರ್‌.ಎಮ್‌.ಪಾಟೀಲ, ಗ್ರಾಮದ ಸದಸ್ಯರಾದ ಗೋಪಾಲ ಅವಳೆ, ಅಶೋಕ ಪೂಜಾರಿ, ಸ್ವಾಮಿ ಕಾಂಬಳೆ, ಹನಮಂತ ಕಾಂಬಳೆ,ಅಂಜಯ ಅದಾಟೆ, ಹಣಮಂತ ತೊಡಕರು,ಅಪ್ಪಾಸಾಬ ಮಾಳಿ, ಪರಶುರಾಮ ಮಾಳಿ, ರಮೇಶ ಮಾಲಗಾರ, ದಾವಲಸಾಬ ಮೇತ್ರಿ, ಶ್ರೀಕಾಂತ ಮಾಳಿ, ಬಂಡು ಘೋಡಸೆ, ಕುಮಾರ ಮೇತ್ರಿ, ವಿಜಯಾನಂದ ಮೇತ್ರಿ, ಸೇರಿದಂತ ಗ್ರಾಮದ ಎಲ್ಲ ಗಣ್ಯ ಮಾನ್ಯರು ಉಪಸ್ಥಿತರಿದ್ದರು.  

ಅಥಣಿ ತಾಲೂಕಾ ಅನುದಾನಿತ ಶಾಲಾ ನೌಕರ ಸಂಘದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರು ಗುರುಬಸು ತೋಡಕರ ಸ್ವಾಗತಿಸಿ ವಂದಿಸಿದರು.  

ಈ ವೇಳೆ ಸಮಾಜದ 12 ನೇ ತರಗತಿ ವಿಜ್ಞಾನ ವಿಭಾಗದ ಕು.ಸುಜಾತಾ ಬಾಬಾಸಾಬ ಮಾಳಿ 92ಅ ಹಾಗೂ ಕು.ಕೋಮಲ ಕುಮಾರ ಮೇತ್ರಿ 84 ಅ ಅಂಕಗಳನ್ನು ಗಳಿಸಿ ಉತ್ತೀರ್ಣರಾದ ನಂತರ ಮಾಲಗಾರ ಸಮಾಜದಿಂದ ಅವರನ್ನು ಸತ್ಕರಿಸಲಾಯಿತು.