ದೈಹಿಕ ಶಿಕ್ಷಕ ಶಿವಶರಣ ಚಕ್ರ ಎಸೆತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Physical education teacher Shivsharan selected for state level in wheel throw

ದೈಹಿಕ ಶಿಕ್ಷಕ ಶಿವಶರಣ ಚಕ್ರ ಎಸೆತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ದೇವರಹಿಪ್ಪರಗಿ, 10: ವಿಜಯಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳ ದೈಹಿಕ ಶಿಕ್ಷಕರುಗಳ ಕ್ರೀಡಾಕೂಟದಲ್ಲಿ ದೇವರಹಿಪ್ಪರಗಿ ಪಟ್ಟಣದ ಹೊಸನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾಗಿರುವ ಶಿವಶರಣ.ಎನ್‌.ಪೂಜಾರಿ ಇವರು ಚಕ್ರ ಎಸೆತದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಜೊತೆಗೆ ಉದ್ದ ಜಿಗಿತದಲ್ಲಿಯೂ ಕೂಡ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 

ಶಾಲೆಯು ಅನೇಕ ವೀರಾಗ್ರಣಿ ಪ್ರಶಸ್ತಿಗಳನ್ನು ಪಡೆಯಲು ಶ್ರಮಿಸುತ್ತಿರುವ ಶಿವಶರಣ ಪೂಜಾರಿ ಶಿಕ್ಷಕರ ಸಾಧನೆಗೆ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಹಾಗೂ ಶಾಲೆಯ ಮುಖ್ಯಗುರು ಎ.ಎಚ್‌. ವಾಲೀಕಾರ, ಸಹಶಿಕ್ಷಕರುಗಳಾದ ಪ್ರೀತಾ.ಪಿಜೆ, ಜೆ.ಎಮ್‌. ಬಡಿಗೇರ, ಜಿ.ಡಿ. ಗಚ್ಚಿನಮಠ, ನಾಗಮ್ಮ ಅಲ್ದಿ, ಸುನೀತಾ ಹೇಮರೆಡ್ಡಿ, ಲಕ್ಷ್ಮಿದೇವಿ ಬಿರಾದಾರ, ಯಾಸ್ಮೀನ ಅತ್ತಾರ, ಅತಿಥಿ ಶಿಕ್ಷಕರುಗಳಾದ ಸಂತೋಷ ಪಂಚಾಳ, ರಫೀಕ ಮುಲ್ಲಾ, ಶ್ವೇತಾ ಪಾಟೀಲ, ಜ್ಯೋತಿ ಅಯ್ಯಂಗೋಳ, ಶ್ರೀದೇವಿ ಜೊಂಡಿ, ದಾನಮ್ಮಬಡಿಗೇರ ಸೇರಿದಂತೆ ಎಸ್‌.ಡಿ.ಎಮ್‌. ಸಿ ಪದಾಧಿಕಾರಿಗಳು, ಪಾಲಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂತಸವನ್ನು ವ್ಯಕ್ತಪಡಿಸಿರುತ್ತಾರೆ.