ಡಾಟಾ ಎಂಟ್ರಿ ಆಪರೇಟರ್ ಹಾಗೂ ಡಿ ವೃಂದದ ನೌಕರರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ
ಕಾರವಾರ 09 : ಹೊರಗುತ್ತಿಗೆ ನೌಕರರ ಸೊಸೈಟಿಯನ್ನು ಪ್ರಾರಂಭಿಸಲು ಕಾರ್ಮಿಕ ಇಲಾಖೆಗೆ ಶಿಫಾರಸು ಮಾಡುವಂತೆ ಒತ್ತಾಯಿಸಿ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಹೊರಗುತ್ತಿಗೆ ಡಾಟಾ ಎಂಟ್ರಿ ಆಪರೇಟರ್ ಹಾಗೂ ಡಿ ವೃಂದದ ನೌಕರರ ಸಂಘದ ಪದಾಧಿಕಾರಿಗಳಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರಿಗೆ ಇಂದುವಮನವಿ ಸಲ್ಲಿಸಿದರು.ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುವ ಕೇಂದ್ರ, ಪ್ರಾದೇಶಿಕ ಕಚೇರಿ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಡೇಟಾಎಂಟ್ರಿ ಅಪೇರಟರ್ ಹಾಗೂ ಗ್ರೂಪ್-ಡಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷಕರು, ನೌಕರರು, ಏಜನ್ಸಿಯವರ ಶೋಷಣೆಯನ್ನು ತಪ್ಪಿಸಲು ಕಾರ್ಮಿಕ ಇಲಾಖೆಯ ಆಯುಕ್ತರಿಗೆ ಹೊರಗುತ್ತಿಗೆ ನೌಕರರನ್ನು ಸೊಸೈಟಿಯ ಮೂಲಕ ನೇಮಕಾತಿ ಮಾಡಿಕೂಳ್ಳುವಂತೆ ಮನವಿಯನ್ನು ಸಲ್ಲಿಸಲಾಗಿತ್ತು.ಆದರೆ ಕಾರ್ಮಿಕ ಇಲಾಖೆಯು ಆಯುಕ್ತರು ಮನವಿಯನ್ನು ಸ್ವೀಕರಿಸಿ ಆಯಾ ಜಿಲ್ಲಾಧಿಕಾರಿಯಿಂದ ಶಿಫಾರಸ್ಸಿನೊಂದಿಗೆ ಸೂಕ್ತ ಪ್ರಸ್ತಾವನೆಯನ್ನು ಕಾರ್ಮಿಕ ಆಯುಕ್ತಾಲಯಕ್ಕೆ ಸಲ್ಲಿಸಬೇಕು. ಬಳಿಕವೇ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಹೀಗಾಗಿ ಹೊರಗುತ್ತಿಗೆ ನೌಕರರ ಕುರಿತು ರಾಜ್ಯ ಸರಕಾರಕ್ಕೆ ಮತ್ತು ಕಾರ್ಮಿಕ ಇಲಾಖೆಯ ಆಯುಕ್ತಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.ಸಂಘದ ಕಮಲಾಕರ ಜೋಗಳೇಕರ, ಸತೀಶ ನಾಯಕ, ಮಂಜುಳಾ, ಅಮಿತ ಜೋಗಳೇಕರ ಇದ್ದರು.