ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಶಾಸಕರಿಗೆ ಮನವಿ ಪತ್ರ

Petition letter to MLAs demanding to provide basic facilities

ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಶಾಸಕರಿಗೆ ಮನವಿ ಪತ್ರ 

ವಿಜಯನಗರ 25: ನಗರದ 22ನೇ ವಾರ್ಡ್‌, ಸಂಕ್ಲಾಪುರ ಪ್ರದೇಶದ ವಿನಾಯಕ ನಗರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ವಿಜಯನಗರ ಕ್ಷೇತ್ರದ ಶಾಸಕರಾದ ಹೆಚ್‌.ಆರ್‌. ಗವಿಯಪ್ಪ ರವರನ್ನು ಭೇಟಿ ಮಾಡಿ ಬಡಾವಣೆಯಲ್ಲಿ ನಾಗರೀಕ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇಮಾಭಿವೃದ್ದಿ ಸಂಘದ ಯು.ಆಂಜನೇಯಲು ರವರು ಮಾತನಾಡಿದರು.  ಬೇಡಿಕೆಗಳು: ಬಡಾವಣೆಯಲ್ಲಿ ಎ-ಬ್ಲಾಕ್ ಯಿಂದ ಎಫ್‌-ಬ್ಲಾಕ್ ವರೆಗೆ ಸಿ.ಸಿ.ರಸ್ತೆಗಳನ್ನು ನಿರ್ಮಿಸುವುದು, ಬಡಾವಣೆಯಲ್ಲಿ ರಾತ್ರಿವೇಳೆ ಬೀದಿ ದೀಪುಗಳು ಇಲ್ಲದೇ ಇರುವುದರಿಂದ ಕಳ್ಳ ಕಾಕರ ಕಾಟ ಹೆಚ್ಚಾಗಿದ್ದು, ಬೀದಿ ದೀಪಗಳನ್ನು ಅಳವಡಿಸಬೇಕು, ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಉದ್ಯಾನವನದಲ್ಲಿ ಸಾಂಸ್ಕೃತಿ ಚಟುವಟಿಕೆಗಳಿಗಾಗಿ ರಂಗ ಮಂದಿರ ನಿರ್ಮಿಸಬೇಕು. ಹಾಗೂ ಬೆಳಗಿನ ಜಾವ ವಾಕಿಂಗ್ ಮಾಡುವ ನಾಗರೀಕರ ಅನುಕೂಲಕ್ಕಾಗಿ ಪಾರ್ಕಿನ ಸುತ್ತಲು ಟೈಲ್ಸ್‌ ವ್ಯವಸ್ಥೆ ಮಾಡಬೇಕು, ಈ ವಾರ್ಡ್‌ನಲ್ಲಿ ಇಡೀ ನಗರದಲ್ಲೇ ಅತ್ಯಂತ ದೊಡ್ಡದಾದ ಪಾರ್ಕಿಂಗ್ ಜಾಗವಿದ್ದು, ಅಲ್ಲಿ ಗಿಡಮರಗಳು, ಸಮೃದ್ದಿಯಾಗಿ ಬೆಳೆದಿವೆ. ಆದುದ್ದರಿಂದ ಗಿಡಮರಗಳನ್ನು ಕಡಿಯದಂತೆ ಸುತ್ತಲು ನೂತನವಾಗಿ ಕಾಂಪೌಂಡ್ ಗೋಡೆ ನಿರ್ಮಿಸಬೇಕು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಯು.ಆಂಜನೇಯಲು, ವೈ.ಯಮುನೇಶ್, ಉಪಾಧ್ಯಕ್ಷರಾದ ಎಸ್‌.ಎಂ.ಭಾಷಾ, ಕಿಚಿಡಿ ರಘು, ಕಾರ್ಯದರ್ಶಿ ಎಲ್‌.ಬಸವರಾಜ್, ಮತ್ತು ಹೆಚ್‌.ತಿಪ್ಪೇಸ್ವಾಮಿ, ನಜೀರ್ ಸಾಬ್, ಪವನ್ ಕುಮಾರ್, ಹಾಗೂ ಇತರರು ಉಪಸ್ಥಿತರಿದ್ದರು.