ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ

Petition for Divorce in JMFC Court

ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ  

ಹೂವಿನ ಹಡಗಲಿ 16: ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಯನ್ನು ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಮತ್ತೆ ಒಗ್ಗೂಡಿಸಲಾಯಿತು.ವರ್ಷದ ಹಿಂದೆ ಮದುವೆ ಯಾಗಿದ್ದ ತಾಲ್ಲೂಕಿನ ತುಂಬಿನಕೇರಿ ತಾಂಡಾದ ಗೌರಿ ಮತ್ತು ಹಾನಗಲ್ ತಾಲ್ಲೂಕು ಹಿರೇಬಸರೂರಿನ ಆನಿಲ್ ದಾಮೋದರ್ ದಂಪತಿ ಈಚೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಪೀಠದಲ್ಲಿದ್ದ ನ್ಯಾಯಾಧೀಶರಾದ ಟಿ. ಅಕ್ಷತಾ ದಂಪತಿಗೆ ತಿಳಿವಳಿಕೆ ಮೂಡಿಸಿ, ಒಟ್ಟಿಗೆ ಬಾಳುವಂತೆ ಬುದ್ದಿವಾದ ಹೇಳಿದರು. ಇದಕ್ಕೆ ದಂಪತಿ ಸಮ್ಮತಿಸಿದಾಗ ನ್ಯಾಯಾಧೀಶರು, ವಕೀಲರು ಶುಭ ಹಾರೈಸಿದರು.ಅರ್ಜಿದಾರ ವಕೀಲ ಎಲ್‌. ಶಿವಕುಮಾರ, ಎದುರುದಾರ ವಕೀಲ ಲಕ್ಷ್ಮಣನಾಯ್ಕ ವಕೀಲರ ಸಂಘದ ಅಧ್ಯಕ್ಷ ಜಿ. ವಸಂತಕುಮಾರ್, ವಕೀಲರಾದ ಭಾಸ್ಕರ್, ಹನುಮಂತಪ್ಪ ಇದ್ದರು.ರಾಜೀ ಸಂಧಾನಕ್ಕೆ ಗುರುತಿಸಿದ್ದಹೂವಿನಹಡಗಲಿ ನ್ಯಾಯಾಲಯದಲ್ಲಿ ನ ದಂಪತಿಯನ್ನು ಒಗ್ಗೂಡಿಸಲಾಯಿತು635 ವ್ಯಾಜ್ಯಗಳ ಪೈಕಿ 619 ಪ್ರಕರಣಗಳು ಇತ್ಯರ್ಥಗೊಂಡವು. 1.08 ಕೋಟಿ ಪರಿಹಾರ ಮೊತ್ತದ ಪ್ರಕರಣಗಳು ಇತ್ಯರ್ಥವಾದವು.