ಕೆಎಲ್ಎಸ್ ಜಿಐಟಿ ಅಧ್ಯಾಪಕ ಸದಸ್ಯರ ಸಾಧನೆ

ಲೋಕದರ್ಶನ ವರದಿ

ಬೆಳಗಾವಿ 14:   ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಏಳು ಅಧ್ಯಾಪಕರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಸಂಶೋಧನಾ ಕೊಡುಗೆಗಾಗಿ ಡಾಕ್ಟರೇಟ್ ಪದವಿಗಳನ್ನು ನೀಡಲಾಯಿತು. ವಾಸ್ತುಶಿಲ್ಪ ವಿಭಾಗದ ರೂಪಾಲಿ ಕಾವಿಲ್ಕರ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಉಮೇಶ್ ಎಂ ಕುಲಕಣರ್ಿ ಮತ್ತು ಕುಲದೀಪ್ ಪಿ ಸಾಂಬ್ರೆಕರ್, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದಿಂದ ಪಿ.ವಿ.ಗೋಪಿಕೃಷ್ಣ ಮತ್ತು ಸುಪ್ರಿಯಾ ಶಾನಭಾಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಿಂದ ನಿಖಿಲ್ ಆರ್ ಮತ್ತು ಎಂಬಿಎ ವಿಭಾಗದ ಪ್ರಸಾದ್ ಕುಲಕಣರ್ಿ ವಿವಿಧ ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ಪದವಿ ಪಡೆದರು.

ಪಿ.ಎಸ್. ಸಾವಕರ್ ಕೆಎಲ್ಎಸ್ ಅಧ್ಯಕ್ಷರು, ಕೆಎಲ್ಎಸ್ ಜಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಎಂ. ಆರ್. ಕುಲಕಣರ್ಿ, ಕೆಎಲ್ಎಸ್ ಸದಸ್ಯರು, ಪ್ರಾಂಶುಪಾಲ ಪ್ರೊ.ಡಿ.ಎ.ಕುಲಕಣರ್ಿ ಮತ್ತು ಇಡೀ ಸಿಬ್ಬಂದಿ ಸಾಧಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.