ವಿಕಲ ಚೇತನರಿಗೆ ಸಮಾಜದ ಸಹಕಾರವು ಅಗತ್ಯ

ಕಾರವಾರ 04: ವಿಕಲ ಚೇತನರಿಗೆ  ರಾಜ್ಯಸರಕಾರವು ಅನೇಕ ಯೋಜನೆಗಳನ್ನು ಜಾರಿಗೆ ಬಂದಿವೆ. ಕೇವಲ ಸರಕಾರದ ಮಾತ್ರವಲ್ಲ ಸಂಘ ಸಂಸ್ಥೆಗಳ ಹಾಗೂ ಸಮುದಾಯದ ಸಹಕಾರವು ಅಗತ್ಯವಾಗಿದೆ ಎಂದು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸತೀಶ ಎನ್.ನಾಯ್ಕ ತಿಳಿಸಿದರು. ಅವರು ಆಝಾದ್ ಯುಥ್ ಕ್ಲಬ್ ಕಾರವಾರ ಹಾಗೂ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಕಾರವಾರದವರು ಸಂಯುಕ್ತವಾಗಿ 'ವಿಶ್ವ ಅಂಗವಿಕಲ'ರ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡ ಸನ್ಮಾನ ಹಾಗೂ ದವಸ ಧಾನ್ಯಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 

ಅಧ್ಯಕ್ಷತೆಯನ್ನು ವಹಿಸಿದ್ದ ಆಝಾದ್ ಯುಥ್ ಕ್ಲಬ್ನ ಚೀಫ್ ಪ್ಯಾಟ್ರನ್ ಇಬ್ರಾಹಿಂ ಕಲ್ಲೂರ್ ಮಾತನಾಡಿ ಅಂಗವಿಕಲತೆ ಎನ್ನುವುದು ಶಾಪವಲ್ಲ. ಅಂಗವಿಕಲರೂ ಸಹ ಸಾಮಾನ್ಯ ಜನರಂತೆ ಜೀವನವನ್ನು ನಡೆಸಬಹುದು. ಅವರಿಗೆ ನಮ್ಮೆಲ್ಲರ ಮಾರ್ಗದರ್ಶನ ಅಗತ್ಯ ಎಂದು ಹೇಳಿದರು.  ನಜೀರ್ ಅಹಮದ್ ಯು.ಶೇಖ್, ಮಂಜುನಾಥ ಪವಾರ ಇದ್ದರು. ಪ್ರಾರಂಭದಲ್ಲಿ ಭಾರತೀಯ ರೆಡ್ಕ್ರಾಸ್ನ ಅಜೀವ ಸದಸ್ಯೆ ಫೈರೋಜಾ ಬೇಗಂ ಶೇಖ್ ಸ್ವಾಗತಿಸಿದರು. ಕೊನೆಯಲ್ಲಿ ಕ್ಲಬ್ನ ಕಾರ್ಯದಶರ್ಿ ಮೊಹಮ್ಮದ್ ಉಸ್ಮಾನ್ ಶೇಖ್ ವಂದಿಸಿದರು. 

ಇದೇ ಸಂದರ್ಭದಲ್ಲಿ ಕೋಡಿಬಾಗದ ಸವರ್ೋದಯ ನಗರದ ನಿವಾಸಿಯಾಗಿರುವ ಕಾಲಿನ ಅಂಗ ವೈಕಲ್ಯತೆಯಿದ್ದರೂ ಮೀನು, ವ್ರತ್ತ ಪತ್ರಿಕೆಗಳನ್ನು ಮಾರಾಟಮಾಡಿ ಜೀವನವನ್ನು ನಡೆಸುತ್ತಿರುವ  ಮಂಜುನಾಥ ನಾಗಪ್ಪ ಬಾನಾವಳಿಗೆ ಶಾಲು ಹೊದಿಸಿ ಫಲ ಪುಷ್ಪ ಪ್ರಮಾಣ ಪತ್ರ ಹಾಗೂ ದವಸ ಧಾನ್ಯಗಳನ್ನು ನೀಡಿ ಸನ್ಮಾನಿಸಲಾಯಿತು.