ಕೆಳ ವರ್ಗದ ಜನತೆಗೆ ನ್ಯಾಯ ಸಿಕ್ಕಿಲ್ಲಾ: ನೀಜಗುಣಾನಂದ ಶ್ರೀ

ಲೋಕದರ್ಶನ ವರದಿ

ಕುಕನೂರು 27: ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳು ಗತಿಸಿದರು ನಮ್ಮ ಹಿಂದುಳಿದ ಹಾಗೂ ಕೆಳ ವರ್ಗದ ಜನತೆಗೆ ಸಿಗಬೇಕಾದ ನ್ಯಾಯ ಸಿಕ್ಕಿರುವದಿಲ್ಲಾ ಎಂದು ನೀಜಗುಣಾನಂದಪ್ರಭು ಮಹಾಸ್ವಾಮೀಗಳು ಹೇಳಿದರು.

ತಾಲೂಕಿನ ದ್ಯಾಂಪೂರ ಗ್ರಾಮದಲ್ಲಿ ಭಕ್ತ ಕನಕದಾಸ ಗ್ರಾಮೀಣಾಭಿವೃದ್ಧಿ ಸಂಘ ಹಾಗೂ ಮಾನವ ಬಂಧುತ್ವ ವೇದಿಕೆ ಕೊಪ್ಪಳ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ಭಕ್ತ ಕನಕದಾಸರ 531ನೇ ಜಯಂತ್ಯೋತ್ಸವ ನಿಮಿತ್ಯ ಏರ್ಪಡಿಸಿದ್ದ ಆದ್ಯಾತ್ಮ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

531 ವರ್ಷವಾದವು ಆದರೆ ಅವರ ಜಯಂತಿ ಮಾಡುವದಕ್ಕೆ ಪ್ರಾರಂಭ ಮಾಡಿ ಕೇವಲ 31 ವರ್ಷಗಳಾದವು ಅಂದರೆ ಮನುವಾದಿಗಳು ಅವರ ಇತಿಹಾಸವನ್ನೆ ಮರೆಮಾಚುವ ಕೆಲಸ ಮಾಡಿದರು ಅವರ ಜಯಂತಿ ಮಾಡಲು ಅದೇ ಜನಾಂಗದವರೆ ಬರಬೇಕಾಯಿತು, ಅಂದರೆ ಇದು ಎಂತಹ ದುರಂತ ಅದಲ್ಲದೆ ಸಮಾಜದವರು ಮುಂಚುಣಿಗೆ ಬರಬೇಕಾದರೆ ಮೊದಲು ಶಿಕ್ಷಣವಂತರಾಗಬೇಕು ಅಂದಾಗ ನೀವು ಇತರರಂತೆ ಜೀವನ ಮಾಡಲು ಸಾಧ್ಯ ನಮ್ಮ ನಮ್ಮಲ್ಲಿ ಕಾಲೇಳೆಯುವ ಜನರಿರುವಾಗ ನಾವು ಅದನ್ನ ಮೆಟ್ಟಿ ನಿಂತು ಮುಂದೆ ಇರುವ ನಮ್ಮ ಗುರಿ ಮುಟ್ಟಬೇಕು ಅಂದಾಗ ನಮಗೆ ಬದುಕಲು ಸಾಧ್ಯವಾಗುತ್ತದೆ.

ಇಂದಿನ ಸಮಾಜದಲ್ಲಿ ವಚನ ಸಾಹಿತ್ಯ ಉಳಿದಿರುವದು ಕುರುಬ ಸಮಾಜದ ಮೊದಲ ಗುರುಗಳಾದ ರೇವಣಸಿದ್ದನವರ ಮಗ ರುದ್ರಮುನಿಯವರಿಂದ ಇಲ್ಲವಾದಲ್ಲಿ ನಮಗೆ ಯಾವ ವಚನ ಸಾಹಿತ್ಯ ಸಿಗುತ್ತಿರಲಿಲ್ಲಾ ಉನ್ನತ ಸಮಾಜದವರಿಂದ ನಮಗೆ ಯಾವ ಕೊಡುಗೆಗಳು ಸಿಕ್ಕಿಲ್ಲಾ ಅದು ಸಿಕ್ಕಿರುವದು ಕೇವಲ ಹಿಂದುಳಿದ ಹಾಗೂ ಕೆಳ ವರ್ಗದ ಮಹಾನ್ ಸಂತರಿಂದ ಆಗಿದೆ, ನಿಮ್ಮಲ್ಲಿರುವ ಕೀಳು ಮನೋಭಾವನೆಯನ್ನು ತೊಡೆದು ಹಾಕಬೇಕು ನೀವು ಕೇಳವರ್ಗದವರು ಎನ್ನುವ ಬದಲು ದುಡಿದು ತಿನ್ನುವ ವರ್ಗವೆಂದು ಭಾವಿಸಬೇಕು, ನಿನ್ನ ಕಷ್ಟಕ್ಕೆ ಯಾವ ದೇವರಿಂದಲೂ ಪರಿಹಾರವಿಲ್ಲಾ ಅದಕ್ಕೇನಾದರು ಪರಿಹಾರ ಸಿಗಬೇಕಾದರೆ ನಿನ್ನ ಪರಿಶ್ರಮ, ಬುದ್ಧಿ, ದುಡಿಮೆಯಿಂದ ಮಾತ್ರ ಸಾದ್ಯವಾಗುತ್ತದೆ, ನೀನು ದುಡಿದ ಹಣದಲ್ಲಿ ದೇವರಿಗೆ ನೀಡುವ ಬದಲು ನಿನ್ನ ಹೆತ್ತ ತಂದೆ ತಾಯಿಗೆ ನೀಡು ಅವರನ್ನು ಚನ್ನಾಗಿ ನೋಡಿಕೊಳ್ಳಿ ಸಮಾಜದಲ್ಲಿ ಸಾಮರಸ್ಯದಿಂದ ಬದುಕುವದನ್ನ ಕಲಿಯಿರಿ ಇತರೆ ಸಮಾಜದೊಂದಿಗೆ ಉತ್ತಮ ಬಾಂದವ್ಯ ಹೊಂದಿರಿ ಎಂದರು.

ಕೊಪ್ಪಳ ಮಾಜಿ ಸಂಸದ ಕೆ ವಿರುಪಾಕ್ಷಪ್ಪ ಮಾತನಾಡಿ, ಮಾಜಿ ಮುಖ್ಯಮತ್ರಿಗಳಾದ ಸಿದ್ದರಾಮಯ್ಯನವರು ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದಾಗ ಕನಕದಾಸರ 500ನೇ ವಷರ್ಾಚರಣೆ ಸಂದರ್ಭದಲ್ಲಿ ಮೊದಲನೇ ಬಾರಿಗೆ ಕನಕದಾಸರ ಜಯಂತ್ಯೋತ್ಸವ ಆಚರಣೆ ಮಾಡಲು ಚಾಲನೆ ನೀಡಿದರು ಅಂದಿನಿಂದ ಈ ಜಯಂತಿ ಜಾರಿಯಲ್ಲಿದೆ ಹಾಗೂ ಯಾವುದೇ ಒಂದು ಸಮಾಜ ಮುಂದೆ ಬರಬೇಕಾದರೆ ಯುವಕರ ಪಾತ್ರ ಅತ್ಯಂತ ಪ್ರಮುಖವಾಗಿದೆ ದುಶ್ಚಟಗಳಿಂದ ದೂರವಿದ್ದು ಉತ್ತಮ ಸಮಾಜ ನಿಮರ್ಾಣದ ಕಡೆ ಗಮನ ನೀಡಬೇಕು ಎಂದರು,

ಸಿದ್ದೇಶ್ವರ ಸ್ವಾಮೀಜಿಗಳು ಬಾದಿಮನಾಳ ಸಾನಿದ್ಯವಹಿಸಿದ್ದರು, ಮುಖಂಡರಾದ ವೈ ಎನ್ ಗೌಡರ, ವೀರನಗೌಡ ಬಳೂಟಗಿ, ಕಳಕಪ್ಪ ಕಂಬಳಿ, ಸತ್ಯನಾರಾಯಣಪ್ಪ ಹರಪನಹಳ್ಳಿ, ಬಸವರಾಜ ಉಳ್ಳಾಗಡ್ಡಿ, ಕಾಶಿಂಸಾಬ ತಳಕಲ್, ರಾಮಣ್ಣ ಭಜಂತ್ರಿ, ಮಾಜಿ ತಾಪಂ ಅದ್ಯಕ್ಷೆ ಮಹಾದೇವಿ ಕಳಕಪ್ಪ ಕಂಬಳಿ, ಬಸವರಾಜ ಮಾಸೂರು, ಯಲ್ಲಪ್ಪ ನೋಟಗಾರ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಟಿ, ರತ್ನಾಕರ ತಾಲೂಕ ಸಂಚಾಲಕ ಯಮನೂರಪ್ಪ ಗೊಲರ್ೆಕೊಪ್ಪ, ಭೀಮಣ್ಣ ಹವಳಿ, ಲಕ್ಷ್ಮಣ ಕಾಳಿ, ಸೇರಿದಂತೆ ಅನೇಕರು ಹಾಜರಿದ್ದರು.