ಕ್ರೀಡೆಯಲ್ಲಿ ಭಾಗವಹಿಸಿದರೆ ಆತ್ಮ ವಿಶ್ವಾಸ ಹೆಚ್ಚಳ : ಬಾಬಾಸಾಹೇಬ ಪಾಟೀಲ
ನೇಸರಗಿ 24: ಇಂದಿನ ಯುವಕರು ಮೊಬೈಲ್ ವ್ಯಾಮೋಹ ಬಿಟ್ಟು ಎಲ್ಲ ತರಹದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಶರೀರವನ್ನು ಸದೃಢವಾಗಿ ಇಟ್ಟು ಪಾಠದ ಜೊತೆ ಆಟದಲ್ಲಿ ಪಾಲ್ಗೊಳ್ಳಿ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು. ಅವರು ಗ್ರಾಮದ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ಡಿ ಎಸ್ ಎಸ್ ಆಶ್ರಯದಲ್ಲಿ ದಿ. ನಿಂಗಪ್ಪ ಮಾಳಣ್ಣವರ ಸ್ಮರಣಾರ್ಥ ಫುಲ್ ಪಿಚ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಯುವ ಮುಖಂಡ ಸಚಿನ ಪಾಟೀಲ ಮಾತನಾಡಿ ಇಂದಿನ ಯುಗದಲ್ಲಿ ಯುವಕರು ಕ್ರೀಡೆಯಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿಲ್ಲ ಅದಕ್ಕಾಗಿ ಈ ಭಾಗದ ಯುವಕರು ಕಬ್ಬಡಿ, ಕೋಕೋ, ವಾಲಿಬಾಲ್, ಕ್ರಿಕೆಟ್, ಕೇರಂ, ಚೆಸ್ ಇನ್ನಿತರ ಕ್ರೀಡೆಗಳಲ್ಲಿ ಪಾಲ್ಗೊಂಡು ದೇಹವನ್ನು ಗಟ್ಟಿಯಾಗಿ ಇಟ್ಟುಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ಹಿರಿಯರಾದ ಅಡಿವಪ್ಪ ಮಾಳಣ್ಣವರ, ಬಾಳಪ್ಪ ಮಾಳಗಿ, ಗ್ರಾ ಪಂ ಅಧ್ಯಕ್ಷ ವೀರಭದ್ರ ಚೋಭಾರಿ, ಮಲ್ಲಿಕಾರ್ಜುನ ಕಲ್ಲೋಳಿ, ಮಂಜುನಾಥ ಹುಲಮನಿ,ಅಶೋಕ ಹತ್ತರಗಿ, ಡಿ ಎಸ್ ಎಸ್ ಅಧ್ಯಕ್ಷ ರಮೇಶ ರಾಯಪ್ಪಗೋಳ, ಸಲೀಮ್ ಶಾ ನದಾಫ್, ಬಸವರಾಜ ಚಿಕ್ಕನಗೌಡರ,ಸುರೇಶ ಅಗಸಿಮನಿ, ಯಮನಪ್ಪ ಪೂಜೇರಿ, ಪ್ರಕಾಶ ತೋಟಗಿ, ಸಂತೋಷ ಪಾಟೀಲ, ಪ್ರಕಾಶ ಮುಂಗರವಾಡಿ, ಮಂಜು ಮದೇನ್ನವರ ಸೇರಿದಂತೆ ಗ್ರಾಮದ ಮುಖಂಡರು, ಕ್ರೀಡಾ ಪಟುಗಳು ಉಪಸ್ಥಿತರಿದ್ದರು.