ಸ್ಪರ್ಧೆಗಳಲ್ಲಿ ಭಾಗವಹಿಸುವುದು ಗೆಲುವಿಗೆ ಸಮ ಹಿ ಡಾ. ಎ. ಎಮ್‌.ಖಾನ್

 ಸ್ಪರ್ಧೆಗಳಲ್ಲಿ ಭಾಗವಹಿಸುವುದು ಗೆಲುವಿಗೆ ಸಮ ಹಿ ಡಾ. ಎ. ಎಮ್‌.ಖಾನ್  Participation in competitions equals victory Dr. A. M. Khan

ಲೋಕದರ್ಶನ ವರದಿ  

ಧಾರವಾಡ 12: ಸ್ಪರ್ಧೆಗಳಲ್ಲಿ ಸಕ್ರೀಯವಾಗಿ ಭಾಗವಹಸಿಉವುದು ವ್ಯಕ್ತಿತ್ವ ವಿಕಸನಕ್ಕೆ ರಹದಾರಿ. ಸ್ಪರ್ಧೆಗಳನ್ನು ಸವಾಲಾಗಿ ಸ್ವಿಕರಿಸಬೇಕು ಇದು ಜೀವನ ಯಶಸ್ಸು ಗೊಳ್ಳಲು ಸಹಕಾರಿಯಾಗುತ್ತದೆ. ಅವಕಾಶಗಳು ಬಂದಾಗ ಅದನ್ನು ಸರಿಯಾಗಿ ಸದುಪಯೋಗ ಪಡೆದಕೊಂಡು ಯಶಸ್ಸನ್ನು ಪಡೆದುಕೊಳ್ಳಿ ಎಂದು ಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಉತ್ಸವ ಸಂಕಲ್ಪ-2026 ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿದ್ಯಾಥಿಗಳನ್ನು ಉದ್ದೇಶಿಸಿ ಕ.ವಿ.ವಿಯ ಉಪಕುಲಪತಿಗಲಾದ ಡಾ. ಎ.ಎಮ್ ಖಾನ ಮಾತನಾಡುತ್ತಿದ್ದರು. ಸ್ಪರ್ಧೆಗಳಲ್ಲಿ ಭಾಗವಹಿಸುವುದು ಗೆಲುವಿಗೆ ಸಮ. ಪ್ರಶಸ್ತಿಗಳು ಬರಲಿ ಬಿಡಲಿ ಅದರ ಅನುಭವ ಮಾತ್ರ ಜೀವನಕ್ಕೆ ಪಾಠವಾಗಲಿದೆ ಸ್ಪರ್ಧೆಗಳ ಆಯೋಜನೆ ಕೂಡ ಒಂಡು ಕಲೆ ಇದನ್ನು ವಿದ್ಯಾರ್ಜನೆ ಮಟ್ಟದಲ್ಲಿ ನೀವು ಕಲಿತರೆ ಮುಂದೆ ಬಹದೊಡ್ಡ ಜವಾಬ್ದಾರಿಗಳನ್ನು ನಿಭಾಯಿಸಬಹುದು ಎಂದು ಹೇಳಿದರು. 

ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡುತ್ತಾ ಈ ಸಂಕಲ್ಪ ಉತ್ಸವದಲ್ಲಿ 60 ಕ್ಕಿಂತ ಹೆಚ್ಚು ಕಾಲೇಜುಗಳಿಂದ 800 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ. ಯಾವುದೇ ಅವ್ಯವಸ್ಥೆಯಾಗದಂತೆ ಈ ಕಾರ್ಯಕ್ರಮ ಯಶಸ್ವಿಯಾಗಲು ಆಯೋಜಕರು ಶಿಕ್ಷಕರು-ಶಿಕ್ಷಕೇತರ ಮತ್ತು ವಿದ್ಯಾಥಿಗಳ ಶ್ರಮ ಶ್ಲಾಘನೀಯ. ಆ ಕೇವಲ ಸ್ಫರ್ಧೆಯಲ್ಲ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬಲ್ಲ ಒಂದು ಯೋಜನೆ ಏಕೆಂದರೆ ಈ ಉತ್ಸವದಿಂದಾಗಿ ವಿದ್ಯಾರ್ಥಿಗಳು ತಮ್ಮ ಜೀವನದ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬಲ್ಲರು ಎಂಬುದನ್ನು ಕಲಿಯುತ್ತಾರೆ. ತಮ್ಮಲ್ಲಿರುವ ಕುಂದುಕೋರತೆಗಳನ್ನು ಸರಿಪಡಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ. ಜೆ.ಎಸ್‌.ಎಸ್ ಅನ್ನ, ಜ್ಞಾನ, ಸಮಯ ಪ್ರಜ್ಞೆ, ಉದ್ಯೋಗ ಹಾಗೂ ಶಿಸ್ತಿಗೆ ಹೆಸರಾಗಿದೆ. ಇನ್ನು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಸಂಸ್ಥೆ ಶ್ರಮಿಸಲಿದೆ ಎಂದು ಹೇಳಿದರು.. ಈ ಸಮಾರಂಭದಲ್ಲಿ ಶ್ರೀಮತಿ ವಾಣಿಶ್ರೀ ಪ್ರಸಾದ, ಡಾ. ಸೂರಜ್ ಜೈನ್, ವಿವೇಕ ಲಕ್ಷ್ಮೇಶ್ವರ, ಡಾ. ಆರ್‌. ವಿ ಚಿಟಗುಪ್ಪಿ, ಡಾ. ಜಿನಪ್ಪ ಕುಂದಗೋಳ, ಶೃತಿ ಶೆಟ್ಟಿ, ಶ್ರವಣಕುಮಾರ ಯೋಗಿ ಇತರರು ಉಪಸ್ಥಿತರಿದ್ದರು.