ಬೆಳ್ಳಂಬೆಳಗ್ಗೆ ಮುಂಡಗೋಡದಲ್ಲಿ ಪೊಲೀಸ್ ದಾಳಿ! ರೌಡೀಶೀಟರ್ಗಳ ಮನೆಗಳ ಮೇಲೆ ಏಕಕಾಲದ ರೇಡ್

ಬೆಳ್ಳಂಬೆಳಗ್ಗೆ ಮುಂಡಗೋಡದಲ್ಲಿ ಪೊಲೀಸ್ ದಾಳಿ! ರೌಡೀಶೀಟರ್ಗಳ ಮನೆಗಳ ಮೇಲೆ ಏಕಕಾಲದ ರೇಡ್ Police raid in Mundagoda in the early hours of the morning! Simultaneous raids on the houses of rowd

 ಲೋಕದರ್ಶನ ವರದಿ  

ಮುಂಡಗೋಡ 24 : ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಡಗೋಡ ಪೊಲೀಸರು ಬುಧವಾರ ಬೆಳಗ್ಗಿನ ಜಾವ ರೌಡೀಶೀಟರ್ಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ತಪಾಸಣೆ ನಡೆಸಿದರು. ತಾಲೂಕಿನ ವಿವಿಧ ಭಾಗಗಳಲ್ಲಿ ವಾಸವಾಗಿರುವ ಒಟ್ಟು 14 ರೌಡೀಶೀಟರ್ಗಳ ಮನೆಗಳ ಮೇಲೆ ಈ ಕಾರ್ಯಾಚರಣೆ ನಡೆದಿದ್ದು, ಮುಂಜಾನೆಲೇ ಪೊಲೀಸರು ಮನೆಗಳಿಗೆ ತೆರಳಿ ಪರೀಶೀಲನೆ ನಡೆಸಿದರು. ಕೆಲವರ ಚಲನವಲನ, ಹಾಜರಾತಿ ಹಾಗೂ ಅವರ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸಲಾಯಿತು.  

ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಮುಂಡಗೋಡ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಮೇಶ ಹಾನಪೂರ, ಹಾಗೂ ಪಿಎಸ್‌ಐ ಮಂಜುನಾಥ ಗೌಡರ,ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು. ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುವ ವ್ಯಕ್ತಿಗಳ ಮೇಲೆ ನಿಗಾ ವಹಿಸುವ ಉದ್ದೇಶದಿಂದಲೇ ಈ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಂತಹ ವಿಶೇಷ ಕಾರ್ಯಾಚರಣೆಗಳು ಮುಂದುವರಿಯಲಿವೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.