ತಿಮ್ಮಲಾಪುರ ಗ್ರಾಮದಲ್ಲಿ ಜರುಗಿದ ಪಾರ್ಥೆನಿಯಮ್ ಜಾಗೃತಿ ಅಭಿಯಾನ
ಕಂಪ್ಲಿ 15: ತಾಲೂಕಿನ ನಂ.10 ಮುದ್ದಾಪುರ ಗ್ರಾಪಂ ವ್ಯಾಪ್ತಿಯ ಕಣವಿತಿಮ್ಮಲಾಪುರ ಗ್ರಾಮದಲ್ಲಿ ಬಹುರಾಷ್ಟ್ರೀಯ ಕೀಟನಾಶಕಗಳ ಸಂಸ್ಥೆ, ವಿಲ್ಲೋವುಡ್ ಕೆಮಿಕಲ್ಸ್ ಲಿಮಿಟೆಡ್‌ನಿಂದ ಪಾರ್ಥೆನಿಯಮ್ (ಕಾಂಗ್ರೆಸ್ ಕಳೆ) ಜಾಗೃತಿ ಅಭಿಯಾನ ಕಾರ್ಯಕ್ರಮದ ಇತ್ತೀಚೆಗೆ ನಡೆಯಿತು. ಸೇಲ್ಸ್ ಅಧಿಕಾರಿ ಬಿ.ವೀರೇಶ್ ಮಾತನಾಡಿ, ರೈತರಿಗೆ ಕೀಟನಾಶಕಗಳ ಉಪಯುಕ್ತ ಬಳಕೆ ಮತ್ತು ಕಾಂಗ್ರೆಸ್ ಕಸದ ಇತಿಹಾಸ ಜೊತೆಗೆ ಹರಡುವಿಕೆಯನ್ನು ತಡೆಗಟ್ಟುವ ಪರಿಣಾಮಕಾರಿ ವಿಧಾನಗಳನ್ನು ಪ್ರತಿಯೊಬ್ಭ ರೈತರು ತಿಳಿದುಕೊಳ್ಳುವ ಅಗತ್ಯತೆ ಇದೆ. ಈ ಕಸದಿಂದ ಆಗುವ ದುಷ್ಪರಿಣಾಮಗಳನ್ನು ರೈತರಿಗೆ ಮನ ಮುಟ್ಟುವ ರೀತಿಯಲ್ಲಿ ವಿಷಯಗಳನ್ನು ಪ್ರಸ್ತುತ ಪಡಿಸಲಾಯಿತು. ಈ ಕಸಕ್ಕೆ ವಿಲ್ಲೋವುಡ್ ರವರ ಅಧಿಕೃತ ಉತ್ಪನ್ನ ವಿಲೋ ಸೆಟ್, ಒಂದು ಲೀ. ನೀರಿಗೆ 6 ಮಿ. ಲೀ. ಪ್ರಮಾಣದಲ್ಲಿ ಬಳಸಬೇಕು. ಇದರಿಂದ ರೈತರ ಬೆಳೆಗಳು ಸಮೃದ್ಧಿಯಾಗಿರುವ ಜತೆಗೆ ಉತ್ತಮ ಇಳುವರಿಯೊಂದಿಗೆ ಒಳ್ಳೆಯ ಫಸಲು ಪಡೆಯಬಹುದು. ಈ ಕಾಂಗ್ರೆಸ್ ಕಳೆಯನ್ನು ಜಾನುವಾರುಗಳು ಸೇವಿಸಿದರೆ, ಆರೋಗ್ಯದಲ್ಲಿ ಕೆಟ್ಟ ಪರಿಣಾಮ ಬಿರುತ್ತದೆ. ಆದ್ದರಿಂದ ಕಸ ನಾಶಕ್ಕೆ ಮುಂದಾಗಬೇಕು ಎಂದು ತಿಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಫಿಲ್ಡ್ ಅಧಿಕಾರಿ ಎಚ್.ಶರಣ, ರೈತರಾದ ಲಿಂಗಪ್ಪ, ಕುಂಬಾರ್ ಅಂಬ್ರೇಶಪ್ಪ, ಮಹಾದೇವ, ಸಿದ್ದು, ನಾಗೇಂದ್ರ ಸೇರಿದಂತೆ ರೈತರಿದ್ದರು.
ಡಿ.001: ತಾಲೂಕಿನ ಕಣವಿತಿಮ್ಮಲಾಪುರ ಗ್ರಾಮದಲ್ಲಿ ಬಹುರಾಷ್ಟ್ರೀಯ ಕೀಟನಾಶಕಗಳ ಸಂಸ್ಥೆ, ವಿಲ್ಲೋವುಡ್ ಕೆಮಿಕಲ್ಸ್ ಲಿಮಿಟೆಡ್‌ನಿಂದ ಪಾರ್ಥೆನಿಯಮ್ (ಕಾಂಗ್ರೆಸ್ ಕಳೆ) ಜಾಗೃತಿ ಅಭಿಯಾನ ಕಾರ್ಯಕ್ರಮದ ಇತ್ತೀಚೆಗೆ ನಡೆಯಿತು.