ಲೋಕದರ್ಶನ ವರದಿ
ಕಂಪ್ಲಿ 27:ತಾಲ್ಲೂಕು ಸಮೀಪದ ಮೆಟ್ರಿ ಗ್ರಾಮದಲ್ಲಿ ಎರಡು ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರ ನಿದ್ದೆಗೆಡಿಸಿದೆ. ರೈತರು ಹಾಗೂ ಕೂಲಿ ಕಾಮರ್ಿಕರು ಹೊಲಗದ್ದೆಗಳು ಹೋಗಲು ಭಯಪಡುವಂತ ಪರಿಸ್ಥಿತಿ ನಿಮರ್ಾಣವಾಗಿದೆ.
ಗ್ರಾಮದ ಜವುಕು ರಸ್ತೆಗೆ ತೆರಳುವ ನಿಡುಗೋಳ್ ಶೇಖರಪ್ಪ ಹೊಲದ ಬನ್ನಿ ಗಿಡದ ಬಳಿಯಲ್ಲಿ ಎರಡು ಚಿರತೆಗಳು ತಿರುಗಾಡುತ್ತಿರುವುದನ್ನು ಬುಧವಾರ ಬೆಳಿಗ್ಗೆ 10:30ರ ಸುಮಾರಿಗೆ ಜನರು ನೋಡಿ, ಕಕ್ಕಬಿಕ್ಕಾಗಿ ಅಕ್ಕಪಕ್ಕದ ಜನರನ್ನು ಕರೆದಿದ್ದಾರೆ. ನಂತರ ಜನರು ಬರುತ್ತಿದ್ದಂತೆ ಜವುಕು ರಸ್ತೆ ದಾಟಲು ಬಂದ ಚಿರತೆಗಳು ಮರಳಿ, ಜಿಂದಿ ಅಯ್ಯಪ್ಪನ ಹೊಲದ ಕಡೆ ಹೋಗಿವೆ. ಚಿರತೆ ಹಿಂಬಾಲಿಸಿದ ಜನರು ಅರಣ್ಯಾಧಿಕಾರಿಗಳ ಸಹಕಾರದೊಂದಿಗೆ ಕೂಂಬಿಂಗ್ ಮೂಲಕ ಚಿರತೆ ಸೆರೆಗೆ ಮುಂದಾಗಿದ್ದಾರೆ. ಆದರೆ, ಎರಡು ಚಿರತೆಗಳು ಅಲ್ಲಿಂದ ಕಾಣ್ಮರೆಯಾಗಿವೆ.
ಎರಡು ಚಿರತೆಗಳು ನಿಡುಗೋಳ್ ಶೇಖರಪ್ಪ ಅವರ ಗದ್ದೆಯಲ್ಲಿರುವ ಬನ್ನಿ ಗಿಡದ ಬಳಿ ಎರಡು ಚಿರತೆಗಳನ್ನು ಪ್ರತ್ಯಕ್ಷವಾಗಿ ನೋಡಲಾಗಿದೆ. ಜವುಕು ರಸ್ತೆ ಕಡೆ ಬಂದ ಚಿರತೆಗಳು ಜನರನ್ನು ನೋಡಿ, ಜಿಂದಿ ಅಯ್ಯಪ್ಪನ ಹೊಲದ ಕಡೆ ದಾರಿ ಹಿಡಿದವು. ಕೂಡಲೇ ಅರಣ್ಯ ಅಧಿಕಾರಿಗಳ ಗಮನಕ್ಕೆ ತರಲಾಗಿದ. ದಿಢೀರನೇ ಬಂದ ಅಧಿಕಾರಿಗಳು ಜನರ ಗುಂಪಿನೊಂದಿಗೆ ಕೋಲುಗಳನ್ನು ಹಿಡಿದುಕೊಂಡು ಚಿರತೆ ಸೆರೆಗೆ ಮುಂದಾಗಿದ್ದಾರೆ. ಆದರೆ, ಚಿರತೆಗಳು ಅಯ್ಯಪ್ಪ ತೋಟದ ಬಳಿಯಲ್ಲಿ ನಾಪತ್ತೆಯಾಗಿವೆ. ಎಲ್ಲರ ಚಿರತೆ ಹಿಡಿಯಲು ಹಾಗೂ ಅಲ್ಲಿದ್ದ ಬೋನಿಗೆ ಓಡಿಸಲು ಶಿಳ್ಳೆ, ಕೇಕೆ ಹಾಕಿದರು, ಚಿರತೆಗಳು ಮಾತ್ರ ಪರಾರಿಯಾಗಿರುವುದು ಜನರ ಭಯಬೀತಿಗೆ ಕಾರಣವಾಗಿದೆ. ಇಲ್ಲಿ ಇಟ್ಟಿದ್ದ ಬೋನಿನಲ್ಲಿ ಯಾವುದೇ ಆಹಾರದ ವ್ಯವಸ್ಥೆ ಮಾಡದೇ ಇರುವುದೇ ಚಿರತೆ ಬೀಳದಿರಲು ಕಾರಣವಾಗಿದೆ. ಬೇಕಾಬಿಟ್ಟಿಯಲ್ಲಿ ಬೋನುಗಳನ್ನು ಇಟ್ಟಿದ್ದಾರೆ ಹೊರತೆ ವ್ಯವಸ್ಥೆ ಮಾಡಿಲ್ಲ. ಚಿರತೆ ಹಾವಳಿಯಿಂದ ಜನರು ಒಬ್ಬಂಟಿಯಾಗಿ ಓಡಾಡಲು ಹೆದರುವಂತಾಗಿದೆ. ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಸೂಕ್ತಕ್ರಮ ಕೈಗೊಳ್ಳಬೇಕೆಂದು ಪ್ರತ್ಯಕ್ಷದಶರ್ಿಗಳಾದ ಕುಂಬಾರ ಮೈಲಾರಪ್ಪ, ಮೆಟ್ರಿ ಗಿರೀಶ್, ಪಾಲಾಕ್ಷಪ್ಪ ಒತ್ತಾಯಿಸಿದರು.
ನಂತರ ವಲಯ ಅಧಿಕಾರಿ ಟಿ.ಭಾಸ್ಕರ್ ಮಾತನಾಡಿ, ಚಿರತೆಗಳ ಸೆರೆಗೆ ಈಗಾಗಲೇ 9 ಬೋನುಗಳನ್ನು ಅಳವಡಿಸಲಾಗಿದೆ. ಇನ್ನೂ ಬೋನುಗಳನ್ನು ಅವಶ್ಯದ ಸ್ಥಳದಲ್ಲಿ ಇಡಲಾಗುವುದು. ಮೆಟ್ರಿ ಗ್ರಾಮದ ಮಟ್ಟಿಶಾಲೆ ಬಳಿಯ ನಿಡಗೋಳ್ ಶೇಖರಪ್ಪ ಅವರ ಹೊಲದಲ್ಲಿ ಎರಡು ಚಿರತೆಗಳು ಜನರ ಕಣ್ಣಿಗೆ ಪ್ರತ್ಯಕ್ಷವಾಗಿವೆ. ಇಲ್ಲಿನ ಚಿರತೆಗಳ ಚಲನವಲನ ಕಂಡು ಬಂದಿದೆ. ಇಲ್ಲಿ ಬೋನು ಅಳವಡಿಸಲಾಗಿದೆ. ಚಿರತೆ ಸೆರೆಗೆ ಜನರ ಸಹಕಾರದೊಂದಿಗೆ ಕೂಂಬಿಂಗ್ ಮಾಡಲಾಗಿದೆ. ಚಿರತೆ ಹಿಡಿಯಲು ಸೂಕ್ತಕ್ರಮ ಕೈಗೊಳ್ಳಲಾಗಿದೆ. ಜನರು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಮೆಟ್ರಿ ತಾಪಂ ಸದಸ್ಯ ಸಿ.ಡಿ.ಮಹಾದೇವ, ಹೊಸಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ.ಮೋಹನ್, ಹೊಸಪೇಟೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಸವರಾಜ, ಉಪ ವಲಯ ಅರಣ್ಯಾಧಿಕಾರಿ ದೇವರಾಜ್, ಪಿಎಸ್ಐ ಕೆ.ಬಿ.ವಾಸುಕುಮಾರ್, ಮುಖಂಡರಾದ ಎಚ್.ಶಿವಪುತ್ರಪ್ಪ, ಜಡೆಪ್ಪ ಸೇರಿದಂತೆ ಯುವಕರು ಇದ್ದರು.