ಕಂಪ್ಲಿ ಕೋಟೆಯಲ್ಲಿ ಪಂಪಾಪತಿ ಮತ್ತು ಹಂಪಮ್ಮ ವಿವಾಹ ಮಹೋತ್ಸವ
ಕಂಪ್ಲಿ 11: ಪುರಸಭೆ ವ್ಯಾಪ್ತಿಯ ಐತಿಹಾಸಿಕ ಕೋಟೆ ಪ್ರದೇಶದ ತುಂಗಭದ್ರಾ ನದಿ ತೀರದಲ್ಲಿರುವ ಪುರಾಣ ಪ್ರಸಿದ್ದ ಪಂಪಾಪತಿ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವದ ಅಂಗವಾಗಿ ಇಂದು ರಥಕ್ಕೆ ಕಳಸಧಾರಣೆ, ಕಂಕಣಧಾರಣೆ ಹಾಗೂ ಪಂಪಾಪತಿ ಮತ್ತು ಹಂಪಮ್ಮನವರ ವಿವಾಹ ಮಹೋತ್ಸವ ಸಮಾರಂಭಗಳು ಸಂಭ್ರಮದಿಂದ ಜರುಗಿದವು. ಬೆಳಿಗಿನ ಜಾವ ಪಂಪಾಪತಿಯ ಶಿಲಾಮೂರ್ತಿಗೆ ವಿವಿಧ ಅಭಿಷೇಕಗಳು, ಸಹಸ್ರ ಬಿಲ್ವಾರ್ಚನೆ ಜರುಗಿತು. ನಂತರ ರಥಕ್ಕೆ ಕಟ್ಟುವ ಕಳಸ ಮತ್ತು ವಿವಾಹ ಮಹೋತ್ಸವದಲ್ಲಿ ಧರಿಸುವ ಕಂಕಣಗಳ ಮತ್ತು ಪಂಪಾಪತಿ ಹಾಗೂ ಹಂಪಮ್ಮನವರ ವಿವಾಹ ಮಹೋತ್ಸವದ ಲೀಲಾವು ಕಾರ್ಯಕ್ರಮಗಳು ಜರುಗಿದವು.
ನಂತರ ಕೋಟೆ ಹಾಗೂ ಕಂಪ್ಲಿ ಪಟ್ಟಣದ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಪಂಪಾಪತಿ ಮತ್ತು ಹಂಪಮ್ಮನವರ ವಿವಾಹ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಮಹಾಮಂಗಳಾರತಿ ಕಾರ್ಯಕ್ರಮದ ನಂತರ ಸರ್ವರಿಗೂ ಪ್ರಸಾದ ವಿತರಣೆ ಜರುಗಿತು. ಕೊನೆಯಲ್ಲಿ ಸರ್ವರಿಗೂ ಅನ್ನಸಂತರೆ್ಣ ನಡೆಯಿತು. ಫೆ.12 ರಂದು ಸಂಜೆ ಪಂಪಾಪತಿ ಹಾಗೂ ಹಂಪಮ್ಮನವರ ರಥೋತ್ಸವ ಅದ್ದೂರಿಯಿಂದ ಜರುಗಲಿದ್ದು, 13 ರಂದು ರಾತ್ರಿ ಭಜನಾ ಕಾರ್ಯಕ್ರಮ ಮತ್ತು 14 ರಂದು ವಸಂತೋತ್ಸವ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಪಂಪಾಪತಿ ಸೇವಾ ಸಮಿತಿ ಪದಾಧಿಕಾರಿಗಳು, ಕೋಟೆ ಹಾಗೂ ಕಂಪ್ಲಿ ಪಟ್ಟಣದ ಸಕಲ ಸದ್ಭಕ್ತರು ಭಾಗವಹಿಸಿದ್ದರು.